ODI World Cup 2023: ವಿಶ್ವಕಪ್‌ ಗೆಲ್ಲುವ ತಂಡಕ್ಕೆ ಸಿಗುವ ಬಹುಮಾನ ಎಷ್ಟು ಕೋಟಿ ಗೊತ್ತಾ?

ಐಸಿಸಿ ಏಕದಿನ ವಿಶ್ವಕಪ್ 2023 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಇನ್ನು ವಿಶ್ವಕಪ್ ಗೆಲ್ಲುವ ತಂಡಕ್ಕೆ ಎಷ್ಟು ಬಹುಮಾನ ಸಿಗುತ್ತದೆ ಎನ್ನುವ ಬಗ್ಗೆ ಐಸಿಸಿ ಮಾಹಿತಿ ನೀಡಿದ್ದು, ಕಳೆದ ಬಾರಿ ವಿಶ್ವಕಪ್‌ನಲ್ಲಿ ಕೊಟ್ಟಷ್ಟೇ ಬಹುಮಾನದ ಮೊತ್ತವನ್ನು ಈ ಬಾರಿ ನೀಡಲು ನಿರ್ಧರಿಸಿದೆ. ಮಾಧ್ಯಮ ಹಕ್ಕುಗಳ ಒಪ್ಪಂದ ಮತ್ತು ಎಲ್ಲಾ ಸದಸ್ಯ ಸಂಘಗಳ ಷೇರುಗಳ ಹೆಚ್ಚಳದ ಹೊರತಾಗಿಯೂ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭಾರತದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಡುವ ತಂಡಗಳಿಗೆ ಅದೇ ಮೊತ್ತದ ಬಹುಮಾನ ನೀಡಲಿದೆ.

icc-odi-world-cup-2023-prize-money

2023ರಲ್ಲಿ ಐಸಿಸಿ ವಿಶ್ವಕಪ್ ಗೆಲ್ಲುವ ತಂಡಕ್ಕೆ ಒಟ್ಟು 33.18 ಕೋಟಿ ರುಪಾಯಿ ($4 ಮಿಲಿಯನ್) ಸಿಗಲಿದೆ. ರನ್ನರ್ಸ್ ಅಪ್ ತಂಡಕ್ಕೆ 16.59 ಕೋಟಿ ರೂಪಾಯಿ ($2 ಮಿಲಿಯನ್) ಸಿಗಲಿದೆ. ನವೆಂಬರ್ 19 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.

ಉಳಿದ ತಂಡಗಳಿಗೆ ಸಿಗುವ ಮೊತ್ತ ಎಷ್ಟು

ಎಲ್ಲಾ 10 ತಂಡಗಳು ಗ್ರೂಪ್ ಹಂತದಲ್ಲಿ ರೌಂಡ್-ರಾಬಿನ್ ಮಾದರಿಯಲ್ಲಿ ಒಮ್ಮೆ ಮುಖಾಮುಖಿಯಾಗಲಿವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನದಲ್ಲಿರುವವರು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಅವರ ಗ್ರೂಪ್ ಹಂತದಲ್ಲಿ ಪಂದ್ಯಗಳನ್ನು ಗೆಲ್ಲುವ ತಂಡಗಳಿಗೂ ಬಹುಮಾನ ಸಿಗಲಿದೆ. ಪ್ರತಿ ಪಂದ್ಯದ ಗೆಲುವಿಗೆ ತಂಡಗಳು 33.17 ಲಕ್ಷ ರೂಪಾಯಿ ($40,000) ಪಡೆಯಲಿವೆ.

ಗುಂಪು ಹಂತದ ಕೊನೆಯಲ್ಲಿ ಸೆಮಿಫೈನಲ್ ತಲುಪಲು ವಿಫಲವಾಗುವ ತಂಡಗಳಿಗೆ 82.94 ಲಕ್ಷ ರೂಪಾಯಿ ($100,000) ಸಿಗುತ್ತದೆ. ಸೆಮಿಫೈನಲ್ ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಬೀಳುವ ತಂಡಗಳಿಗೆ ತಲಾ 6.63 ಕೋಟಿ ರೂಪಾಯಿ ಸಿಗಲಿದೆ.

10 ತಂಡಗಳಿಂದ ಸ್ಪರ್ಧೆ

ಐಸಿಸಿ ಈಗಾಗಲೇ ಪುರುಷರು ಮತ್ತು ಮಹಿಳೆಯರಿಗೆ ಬಹುಮಾನದ ಮೊತ್ತದಲ್ಲಿ ಸಮಾನತೆಯನ್ನು ಘೋಷಿಸಿದೆ. 2025 ರಲ್ಲಿ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಮಹಿಳಾ ತಂಡಗಳಿಗೂ ಕೂಡ ಪುರುಷರ ತಂಡಗಳಿಗೆ ಸಿಗುವಷ್ಟೇ ಬಹುಮಾನದ ಮೊತ್ತ ಸಿಗಲಿದೆ.

13ನೇ ಆವೃತ್ತಿಯಲ್ಲಿ ವಿಶ್ವ ಕಪ್ ಟ್ರೋಫಿಗಾಗಿ ಒಟ್ಟು 10 ತಂಡಗಳು ಪೈಪೋಟಿ ನಡೆಸಲಿವೆ. ಆತಿಥ್ಯ ವಹಿಸುತ್ತಿರುವ ಭಾರತ ಸಹಜವಾಗಿಯೇ ಅರ್ಹತೆ ಪಡೆದುಕೊಂಡಿದೆ. ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಸೂಪರ್ ಲೀಗ್‌ನಿಂದ ಅರ್ಹತೆ ಪಡೆದುಕೊಂಡಿವೆ.

ವಿಶ್ವಕಪ್‌ಗೆ ಅರ್ಹತೆ ಪಡೆಯಲು ಶ್ರೀಲಂಕಾ ಮತ್ತು ನೆದರ್‌ಲ್ಯಾಂಡ್ಸ್ ಕ್ವಾಲಿಫೈಯರ್‌ನಲ್ಲಿ ಸೆಣೆಸಾಡಿದವು. ಏಕದಿನ ವಿಶ್ವಕಪ್ ಪಂದ್ಯಾವಳಿ 10 ಸ್ಥಳಗಳಲ್ಲಿ ನಡೆಯಲಿದ್ದು ಒಟ್ಟು 48 ಪಂದ್ಯಗಳು ನಡೆಯಲಿವೆ. ವಿಶ್ವಕಪ್‌ನ ಆರಂಭದ ಮೊದಲು, ಪ್ರತಿ ತಂಡವು ಎರಡು ಅಭ್ಯಾಸ ಪಂದ್ಯಗಳನ್ನು ಆಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+