Champions Trophy 2025: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಪ್ರಕಟ; ಭಾರತ-ಪಾಕಿಸ್ತಾನ ಪಂದ್ಯ ಎಲ್ಲಿ?

2025ರ ಫೆಬ್ರವರಿ - ಮಾರ್ಚ್‌ನಲ್ಲಿ ನಡೆಯಲಿರುವ ಬಹು ನಿರೀಕ್ಷಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ವೇಳಾಪಟ್ಟಿ ಬಿಡುಗಡೆಯಾಗಿದೆ. ಐಸಿಸಿ ಮಂಗಳವಾರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತ ಪಾಕಿಸ್ತಾನ ನಡುವಿನ ಪಂದ್ಯ ಎಲ್ಲಿ ನಡೆಯಲಿದೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಫೆಬ್ರವರಿ 19ರಂದು ಪಂದ್ಯಾವಳಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ.

ಭಾರತ ಆಡುವ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಫೆಬ್ರವರಿ 23ರಂದು ದುಬೈನಲ್ಲಿ ನಡೆಯಲಿದೆ. 8 ತಂಡಗಳು ಚಾಂಪಿಯನಸ್‌ ಟ್ರೋಫಿಗಾಗಿ ಹಣಾಹಣಿ ನಡೆಸಲಿವೆ. ಮಾರ್ಚ್ 4 ಮತ್ತು 5ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಮಾರ್ಚ್ 9ರಂದು ಫೈನಲ್ ಪಂದ್ಯ ನಡೆಯಲಿದೆ.

icc champions trophy 2025 schedule india pakistan clash dubai

ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಒಂದು ಗುಂಪಿನಲ್ಲಿ ಆಡುತ್ತಿದ್ದು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಮತ್ತೊಂದು ಗುಂಪಿನಲ್ಲಿ ಆಡಲಿವೆ. ಲೀಗ್ ಹಂತದಲ್ಲಿ ಪ್ರತಿ ತಂಡ ಮೂರು ಪಂದ್ಯಗಳನ್ನು ಆಡಲಿದ್ದು ಕನಿಷ್ಠ ಎರಡು ಪಂದ್ಯ ಗೆದ್ದರೆ ಸೆಮಿಫೈನಲ್ ತಲುಪಲು ಅವಕಾಶ ಇರುತ್ತದೆ.

ಹೈಬ್ರಿಡ್ ಮಾದರಿಗೆ ಒಪ್ಪಿದ ಪಾಕಿಸ್ತಾನ

ಪಾಕಿಸ್ತಾನಕ್ಕೆ ತಂಡವನ್ನು ಕಳಿಸುವುದಿಲ್ಲ ಎಂದು ಬಿಸಿಸಿಐ ಪಟ್ಟುಹಿಡಿದ ಕಾರಣ ವೇಳಾಪಟ್ಟಿ ಪ್ರಕಟವಾಗುವುದು ಸಾಕಷ್ಟು ತಡವಾಗಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಠ ಹಿಡಿದಿತ್ತು, ಐಸಿಸಿ ಎರಡೂ ಮಂಡಳಿಗಳ ಬೇಡಿಕೆಯನ್ನು ಕೇಳಿದ್ದು, ತಟಸ್ಥ ಸ್ಥಳದಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸಲು ಪಿಸಿಬಿಗೆ ಒಪ್ಪಿಸಲು ಯಶಸ್ವಿಯಾಗಿದೆ. ಭಾರತ ಸೆಮಿಫೈನಲ್ ಮತ್ತು ಫೈನಲ್ ತಲುಪಿದರೆ ಪಂದ್ಯಗಳು ದುಬೈನಲ್ಲೇ ನಡಯಲಿವೆ. ಇಲ್ಲವಾದಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿವೆ.

ಸಂಪೂರ್ಣ ವೇಳಾಪಟ್ಟಿ

ಫೆಬ್ರವರಿ 19 - ಪಾಕಿಸ್ತಾನ vs ನ್ಯೂಜಿಲೆಂಡ್, ಕರಾಚಿ.
ಫೆಬ್ರವರಿ 20 - ಬಾಂಗ್ಲಾದೇಶ vs ಭಾರತ, ದುಬೈ.
ಫೆಬ್ರವರಿ 21- ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ, ಕರಾಚಿ.
ಫೆಬ್ರವರಿ 22- ಆಸ್ಟ್ರೇಲಿಯಾ vs ಇಂಗ್ಲೆಂಡ್, ಲಾಹೋರ್.
ಫೆಬ್ರವರಿ 23- ಭಾರತ vs ಪಾಕಿಸ್ತಾನ, ದುಬೈ.
ಫೆಬ್ರವರಿ 24- ಬಾಂಗ್ಲಾದೇಶ vs ನ್ಯೂಜಿಲೆಂಡ್, ರಾವಲ್ಪಿಂಡಿ.
ಫೆಬ್ರವರಿ 25- ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ.
ಫೆಬ್ರವರಿ 26- ಅಫ್ಘಾನಿಸ್ತಾನ vs ಇಂಗ್ಲೆಂಡ್, ಲಾಹೋರ್.
ಫೆಬ್ರವರಿ 27- ಪಾಕಿಸ್ತಾನ vs ಬಾಂಗ್ಲಾದೇಶ, ರಾವಲ್ಪಿಂಡಿ.
ಫೆಬ್ರವರಿ 28- ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ, ಲಾಹೋರ್.
ಮಾರ್ಚ್‌ 1 - ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್, ಕರಾಚಿ.
ಮಾರ್ಚ್‌ 2 - ನ್ಯೂಜಿಲೆಂಡ್ vs ಭಾರತ, ದುಬೈ.
ಮಾರ್ಚ್‌ 4 - ಸೆಮಿಫೈನಲ್ 1, ಎ1 vs ಬಿ2.
ಮಾರ್ಚ್‌ 5 - ಸೆಮಿಫೈನಲ್ 2, ಬಿ1 vs ಎ2.
ಮಾರ್ಚ್‌ 9 - ಫೈನಲ್
ಮಾರ್ಚ್‌ 10 - ಮೀಸಲು ದಿನ

ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+