ಐಸಿಸಿ ಚಾಂಪಿಯನ್ಸ್ ಟ್ರೋಫಿ; ಬಿಸಿಸಿಐ, ಐಸಿಸಿಗೆ ಶಾಕ್ ಕೊಟ್ಟ ಪಾಕಿಸ್ತಾನ!
2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತದ ಭಾಗವಹಿಸುವಿಕೆ ಅನಿಶ್ಚಿತವಾಗಿದ್ದು, ಪಾಕಿಸ್ತಾನ ಪಂದ್ಯಾವಳಿ ಆಯೋಜನೆ ವಿಚಾರದಲ್ಲಿ ಹಠ ಹಿಡಿದಿದ್ದು, ಐಸಿಸಿ ಮತ್ತು ಬಿಸಿಸಿಐ ಕೂಡ ಅಚ್ಚರಿಗೊಂಡಿದೆ.
2025ರ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಸಿದ್ಧತೆ ನಡೆಸುತ್ತಿದೆ. ಪಂದ್ಯಾವಳಿ ಆಯೋಜನೆಗೆ ಇನ್ನೂ ಕೇವಲ 6 ತಿಂಗಳು ಮಾತ್ರ ಉಳಿದಿದೆ, ಭಾರತ ತಂಡದ ಪಂದ್ಯಗಳ ಆಯೋಜನೆ ಬಗ್ಗೆ ಪಿಸಿಬಿ ಯಾವುದೇ ವಿಶೇಷ ಯೋಜನೆ ಹೊಂದಿಲ್ಲ ಎಂದು ಹೇಳಿದೆ.

ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆಗೆ ಪಿಸಿಬಿ ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದು ಐಸಿಸಿ ಕೂಡ ಅಚ್ಚರಿಗೊಂಡಿದೆ. ಯಾವುದೇ ಕಾರಣಕ್ಕೂ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಪಾಕಿಸ್ತಾನ ಹಠ ಹಿಡಿದುಕೂತಿದ್ದು, ತಟಸ್ಥ ಸ್ಥಳದಲ್ಲಿ ಪಂದ್ಯಾವಳಿ ಆಯೋಜನೆಗೆ ಪರ್ಯಾಯ ಯೋಜನೆ ಹೊಂದಿಲ್ಲ.
ಪಿಸಿಬಿ ಯೋಜನೆಗೆ ಬೆಚ್ಚಿಬಿದ್ದ ಐಸಿಸಿ
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಆಯೋಜನೆ ಹಕ್ಕನ್ನು ಪಾಕಿಸ್ತಾನ ಪಡೆದುಕೊಂಡಿದೆ. ಏಷ್ಯಾಕಪ್ 2023ರಲ್ಲಿ ನಡೆದಂತೆ ಹೈಬ್ರಿಡ್ ಮಾದರಿ ಬೇಕು ಎಂದು ಟೀಂ ಇಂಡಿಯಾ ಈಗಾಗಲೇ ಕೇಳಿದೆ. ಯಾವುದೇ ಸಂದರ್ಭದಲ್ಲೂ ಟೀಂ ಇಂಡಿಯಾ ಟೂರ್ನಿಗಾಗಿ ಪಾಕಿಸ್ತಾನಕ್ಕೆ ತೆರಳುವುದಿಲ್ಲ. ಇತರ ನಿಬಂಧನೆಗಳನ್ನು ಮಾಡದಿದ್ದರೆ, ಭಾರತವು ಪಂದ್ಯಾವಳಿಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ.
ಮತ್ತೊಂದೆಡೆ, ಮೆಗಾ ಟೂರ್ನಮೆಂಟ್‌ಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಐಸಿಸಿ ಬಿಸಿಸಿಐಗೆ ಮನವರಿಕೆ ಮಾಡಬಹುದೆಂದು ಪಿಸಿಬಿ ವಿಶ್ವಾಸ ಹೊಂದಿದೆ. ಭಾರತದ ಪಂದ್ಯಗಳನ್ನು ಬೇರೆ ದೇಶದಲ್ಲಿ ಆಯೋಜಿಸಲು ಪಾಕಿಸ್ತಾನಕ್ಕೆ ಐಸಿಸಿ ಪೂರಕ ಬಜೆಟ್ ಅನ್ನು ಸಹ ಮಂಜೂರು ಮಾಡಿದೆ.
ಆದರೆ ಟೂರ್ನಮೆಂಟ್ ಆರಂಭಕ್ಕೆ ಕೇವಲ 6 ತಿಂಗಳು ಬಾಕಿ ಇರುವ ಕಾರಣ ಪಾಕಿಸ್ತಾನ ಅಂತಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಬದಲಾಗಿ ಪಾಕಿಸ್ತಾನದಲ್ಲೇ ಪಂದ್ಯಾವಳಿ ಆಯೋಜನೆಗೆ ಹಠ ಹಿಡಿದಿದೆ.
ಏಷ್ಯಾಕಪ್ ಪಂದ್ಯಾವಳಿಯಲ್ಲಿ ಬಿಸಿಸಿಐ ಒತ್ತಡಕ್ಕೆ ಮಣಿದಿದ್ದ ಪಾಕಿಸ್ತಾನ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳನ್ನು ಆಯೋಜಿಸಿತ್ತು. ಆದರೆ, ಈಗ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜಿಸಲು ನಿರಾಕರಿಸಿದೆ.
ಭದ್ರತೆ ಬಗ್ಗೆ ಗ್ಯಾರಂಟಿ ಕೊಟ್ಟರೂ ಬಿಸಿಸಿಐ ಉದ್ದೇಶಪೂರ್ವಕವಾಗಿಯೇ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ. ಪಾಕಿಸ್ತಾನ ಮಾಜಿ ಆಟಗಾರರು, ಬಿಸಿಸಿಐ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಭಾರತ ಪಾಕಿಸ್ತಾನಕ್ಕೆ ಬಂದರೆ, ಉತ್ತಮ ಆತಿಥ್ಯ ನೀಡುವುದಾಗಿ ಹೇಳಿದ್ದಾರೆ.












Click it and Unblock the Notifications