RCB: "ಈ ಬಾರಿ ಆರ್‌ಸಿಬಿ ಕಪ್ ಗೆಲ್ಲದಿದ್ರೆ ಗಂಡನಿಗೆ ಡಿವೋರ್ಸ್": ವಿಡಿಯೋ ವೈರಲ್
ಐಪಿಎಲ್‌ನ 18ನೇ ಆವೃತ್ತಿ ಇದೀಗ ಅದ್ಧೂರಿಯಾಗಿ ನಡೆಯುತ್ತಿದೆ. ಅದರಲ್ಲೂ ಎಲ್ಲಾ ತಂಡಗಳಿಗಿಂತಲೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡವು ಈಗಾಗಲೇ ಆಡಿರುವ ಎರಡೂ ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಿಗೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹಾಗೂ ಎರಡನೇ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ಗೆದ್ದು ಬೀಗುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ ಅದು ಆರ್‌ಸಿಬಿ ಮಾತ್ರ. ಅಲ್ಲದೆ, ಯಾವುದೇ ತಂಡಗಳ ಮೇಲೆ ಇದ್ದರೂ ಕೂಡ ಅಭಿಮಾನಿಗಳ ಆರ್ಭಟ ಮಾತ್ರ ಕಡಿಮೆಯಂತೂ ಆಗುವುದಿಲ್ಲ. ಅದರಲ್ಲೂ ಇತ್ತೀಚೆಗಷ್ಟೇ ಸಿಎಸ್‌ಕೆಯನ್ನು ತವರು ನೆಲ ಚೆನ್ನೈನಲ್ಲೇ ಸೋಲಿಸಿ 17 ವರ್ಷಗಳ ಬಳಿಕ ಇತಿಹಾಸವೊಂದನ್ನು ನಿರ್ಮಿಸಿದೆ.

ಆರ್‌ಸಿಬಿ ಐಪಿಎಲ್‌ನಲ್ಲಿ ಇದುವರೆಗೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದರೂ ಅಭಿಮಾನಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಬದಲಾಗಿ ಭರವಸೆಯ ಬೆಳಕು ಎಂಬಂತೆ ಎಷ್ಟೇ ಬಾರಿ ಸೋತರೂ ನಮ್ಮ ತಂಡ ಆರ್‌ಸಿಬಿನೇ ಎಂದು ಅಭಿಮಾನದಿಂದ ಹೇಳುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಲಿವೆ. ಈ ನಡುವೆಯೇ ಇದೀಗ ಇದೇ ವಿಚಾರವಾಗಿ ಡಿವೋರ್ಸ್ ಚಾಲೆಂಜ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಪ್ರತಿ ಐಪಿಎಲ್ ಸೀಸನ್‌ನಂತೆಯೇ ಈ ಬಾರಿಯೂ ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡದ ಗೆಲ್ಲುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಇದುವರೆಗೂ ಆರ್‌ಸಿಬಿ ಒಂದೇ ಒಂದು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ವರ್ಷದಿಂದ ವರ್ಷಕ್ಕೆ ಆರ್‌ಸಿಬಿ ಅಭಿಮಾನಿಗಳು ಈ ವಿಷಯದಲ್ಲಿ ನಿರಾಸೆಗೊಳ್ಳುತ್ತಲಿದ್ದಾರೆ. ಆಗಂತ ಅಭಿಮಾನಿಗಳೇನು ಕಡಿಮೆಯಾಗಿಲ್ಲ ಬದಲಾಗಿ ದುಪ್ಪಟ್ಟಾಗಿದ್ದಾರೆ.
ಬಹುತೇಕ ಮಂದಿ ವಿರಾಟ್ ಕೊಹ್ಲಿ ಆಟಕ್ಕಾಗಿಯೇ ಕಾಯುತ್ತಿರುತ್ತಾರೆ. 17 ಸೀಸನ್‌ವರೆಗೂ ಆರ್‌ಸಿಬಿ ಅಭಿಮಾನಿಗಳು ಈ ಸಲ ಕಪ್ ನಮ್ದೆ ಎಂದು ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ಆದ್ರೆ ಫೈನಲ್‌ವರೆಗೂ ಬಂದು ಆರ್‌ಸಿಬಿ ಎಡವಿದೆ. ಈ ಬಾರಿಯಾದರೂ ಕಪ್ ಎತ್ತುವ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ. ಈ ನಡುವೆಯೇ ಮಹಿಳೆಯೊಬ್ಬಳು ಈ ಬಾರಿ ಆರ್‌ಸಿಬಿ ಕಪ್ ಗೆಲ್ಲದಿದ್ದರೆ ಗಂಡನಿಗೆ ಡಿವೋರ್ಸ್ ಕೊಡುವುದಾಗಿ ಹೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ಆರ್‌ಸಿಬಿ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲಿದೆ ಎಂಬುದು ಅಭಿಮಾನಿಗಳ ಭರವಸೆಯಾಗಿದೆ. ಆದರೆ, ಇದೀಗ ಐಪಿಎಲ್ ಆರಂಭದಲ್ಲೇ ಇದೀಗ ಮಹಿಳೆಯೊಬ್ಬಳ ಡಿವೋರ್ಸ್ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವರ್ಷದ ಐಪಿಎಲ್ ಟ್ರೋಫಿಯನ್ನು ಆರ್‌ಸಿಬಿ ಗೆಲ್ಲುತ್ತದೆ ಎಂದು ಹೇಳಿಕೊಂಡು ಆ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಅಲ್ಲದೆ, ಒಂದು ವೇಳೆ ಆರ್‌ಸಿಬಿ ತಂಡ ಈ ಬಾರಿ ಐಪಿಎಲ್ ಗೆಲ್ಲದಿದ್ದರೆ, ಗಂಡನಿಗೆ ವಿಚ್ಛೇದನ ನೀಡುತ್ತೇನೆ ಎಂದು ಹೇಳಿದ್ದಾಳೆ.
ಇದೀಗ ಐಪಿಎಲ್ 18ನೇ ಆವೃತ್ತಿ ನಡೆಯುತ್ತಿದೆ. ಈ ವರ್ಷ ಆರ್‌ಸಿಬಿ ಫೈನಲ್ ಗೆಲ್ಲುತ್ತದೆ ಎಂದು ನಾನು ಭವಿಷ್ಯ ನುಡಿಯುತ್ತಿದ್ದೇನೆ. ಆರ್‌ಸಿಬಿ ಫೈನಲ್ ಗೆಲ್ಲದಿದ್ದರೆ, ನಾನು ನನ್ನ ಪತಿಗೆ ಡಿವೋರ್ಸ್ ನೀಡುತ್ತೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸುತ್ತಿದ್ದೇನೆ. ಇದು ಸ್ಕ್ರಿಪ್ಟ್ ಮಾಡಿಕೊಂಡು ಹೇಳಿದ ವೀಡಿಯೊ ಅಲ್ಲ. ಆರ್‌ಸಿಬಿ ಫೈನಲ್ ಗೆಲ್ಲದಿದ್ದರೆ, ನಾನು ನನ್ನ ಪತಿಗೆ ವಿಚ್ಛೇದನ ನೀಡುತ್ತೇನೆ. ಈ ವಿಡಿಯೋ ಸೇವ್ ಮಾಡಿಟ್ಟುಕೊಳ್ಳಿ, ಐಪಿಎಲ್ ಮುಗಿದ ನಂತರ ನೋಡಿ ಎಂದು ಹೇಳಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು @farzifuct ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ.












Click it and Unblock the Notifications