IPL 2024: ಐಪಿಎಲ್ ನಮ್ಗೇ ಖುಷಿ ಕೊಟ್ರೆ ದೇವ್ರು, ಬೆಟ್ಟಿಂಗ್ ಎಲ್ಲಾ ಯಾಕೆ? ಹು-ಧಾ ಪೊಲೀಸರಿಂದ ಎಚ್ಚರಿಕೆ
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತದಲ್ಲಿ ಇನ್ನು ಎರಡು ತಿಂಗಳು ಕ್ರಿಕೆಟ್ ಹಬ್ಬ ನಡೆಯಲಿದೆ. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ರೋಚಕ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ಕ್ರಿಕೆಟ್ ಬುಕ್ಕಿಗಳು ಕೂಡ ಐಪಿಎಲ್‌ನಲ್ಲಿ ಹಣ ಮಾಡಲು ಸಿದ್ಧವಾಗುತ್ತಿದ್ದಾರೆ.
ಹುಬ್ಬಳ್ಳಿ - ಧಾರವಾಡ ಪೊಲೀಸರು ಈಗ ಕ್ರಿಕೆಟ್ ಬುಕ್ಕಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅದು ಕೂಡ ವಿನೂತನವಾಗಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಸಂದೇಶ ರವಾನಿಸಿದ್ದಾರೆ. ವಿಶೇಷವಾಗಿ ಮೀಮ್‌ಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸುವ ಮೂಲಕ ಹುಬ್ಬಳ್ಳಿ-ಧಾರವಾಡ ಪೊಲೀಸರು ಆಗಾಗ್ಗೆ ಗಮನ ಸೆಳೆಯುತ್ತಾರೆ. ಎವರ ಎಕ್ಸ್ ಅಧಿಕೃತ ಖಾತೆಯಲ್ಲಿ ಹಲವು ಜಾಗೃತಿ ಸಂದೇಶಗಳನ್ನು ನೋಡಬಹುದು.

ಈಗ ಬೆಟ್ಟಿಂಗ್ ಬಗ್ಗೆ ಜಾಗೃತಿ ಮೂಡಿಸಲು ಇತ್ತೀಚೆಗೆ ಸಾಕಷ್ಟು ವೈರಲ್ ಆಗಿರುವ ನಾವು, ನಮ್ ಮನಸು ವಿಡಿಯೋದ ಸಾಲುಗಳನ್ನು ಬಳಸಿಕೊಂಡಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ "ನಮ್ಮ ಐಪಿಎಲ್ ನಮಗೆ ಖುಷಿ ಕೊಟ್ರೆ ದೇವ್ರು, ಬೆಟ್ಟಿಂಗ್ ಎಲ್ಲಾ ಯಾಕೆ ನಮ್ಗೇ? ಏನಂತೀರಾ" ಎಂದು ಶಿರ್ಷಿಕೆ ನೀಡಿದ್ದು, ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ ಧಾರವಾಡ ನಗರ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ಆಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ದಂಧೆಕೋರರಿಗೆ ಎಚ್ಚರಿಕೆ ನೀಡಿದೆ.
ನಮ್ಮ IPL ನಮ್ಗೆ ಖುಷಿ ಕೊಟ್ರೆ ದೇವ್ರು ಅಷ್ಟೇ.. ಬೆಟ್ಟಿಂಗ್ ಯಾಕೆ ನಮ್ಗೆ...?
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) March 20, 2024
ಏನಂತೀರಾ.. 🤔#say_no_to_cricket_betting#IPL2024 #IPL #TATAIPL2024 #RCBvsCSK #RCB #Champions #Trending #Cricket #winners #hubballi #dharwad #Police #Karnataka #Bengaluru pic.twitter.com/1AcP0rChUP
ಬೆಟ್ಟಿಂಗ್ ಆಡಿದವರಿಗೆ 'LAW ಕಪ್'
ಇದಕ್ಕೂ ಮುನ್ನ ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ ಆರ್ ಸಿಬಿ ತಂಡವನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದು, ಗಮನ ಸೆಳೆದಿದೆ. ಪೋಸ್ಟ್‌ನಲ್ಲಿ ಆರ್ ಸಿಬಿ ಚನ್ನಾಗಿ ಆಡಿದ್ರೆ ಗೆಲ್ತಾರೆ ಕಪ್,ಕ್ರಿಕೆಟ್ ಬೆಟ್ಟಿಂಗ್ ಏನಾದ್ರೂ ಆಡಿದ್ರೆ ಹಾಕ್ತೀವಿ ನಿಮಗೆ Law 'ಕಪ್'. ಎಂದು ಪೋಸ್ಟ್ ಮಾಡಿದೆ.
ಬೆಟ್ಟಿಂಗ್ ಚಟದಿಂದ ಹಣ ಕಳೆದುಕೊಂಡ ಎಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ನಲುಗುತ್ತಿವೆ. ಆದ್ದರಿಂದ ಬೆಟ್ಟಿಂಗ್ ಆಡದಿರಿ, ಆಡಲು ಬಿಡದಿರಿ, ಒಂದು ವೇಳೆ ಆಡುವವರು ಕಂಡು ಬಂದರೆ ನಮಗೆ ಮಾಹಿತಿ ನೀಡಿರಿ. ಎಂದು ಮನವಿ ಮಾಡಿದೆ.
RCB ಚೆನ್ನಾಗಿ ಆಡಿದ್ರೇ ಗೆಲ್ತಾರೆ ಈ ಬಾರಿ ಕಪ್..🏆
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) March 19, 2024
RCB ಚೆನ್ನಾಗಿ ಆಡಿದ್ರೇ ಗೆಲ್ತಾರೆ ಈ ಬಾರಿ ಕಪ್..🏆
ಕ್ರಿಕೆಟ್ ಬೆಟ್ಟಿಂಗ್ ಏನಾದ್ರೂ ಆಡಿದ್ರೆ
ಹಾಕ್ತೀವಿ ನಿಮಗೆ Law 'ಕಪ್'..🚔🚨
(ಕ್ರಿಕೆಟ್ ಬೆಟ್ಟಿಂಗ್ ಆಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು)#IPL #TATAIPL2024 #RCB #RCBvsCSK #RCBUnbox pic.twitter.com/lTZZjEgbvr
ಒನ್ ಇಂಡಿಯಾ ಕಳಕಳಿಯ ಮನವಿ
ಬೆಟ್ಟಿಂಗ್ ಒಂದು ಕೆಟ್ಟ ಚಟ, ದೊಡ್ಡ ಮೊತ್ತದ ಆಮಿಷ ತೋರಿಸಿ ನಿಮ್ಮ ಹಣವನ್ನು ಕಬಳಿಸುವ ಕರಾಳ ದಂಧೆ. ಕ್ರಿಕೆಟ್ ಇರುವುದು ಮನರಂಜನೆಗಾಗಿ ಅಷ್ಟೇ ಎನ್ನುವುದನ್ನು ಮರೆಯಬೇಡಿ. ಬೆಟ್ಟಿಂಗ್‌ನಲ್ಲಿ ಹಣ ಹಾಕುವ ಮುನ್ನ ನಿಮ್ಮನ್ನು ನಂಬಿದವರ ಬಗ್ಗೆ ಯೋಚಿಸಿ. ಕ್ರಿಕೆಟ್ ಅನ್ನು ಆನಂದಿಸಿ, ಬೆಟ್ಟಿಂಗ್‌ನಿಂದ ದೂರವಿರಿ.












Click it and Unblock the Notifications