ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀತ್ ಸ್ಟ್ರೀಕ್ ನಿಧನ ಸುದ್ದಿ ಸುಳ್ಳು: ದೃಢೀಕರಿಸಿದ ಖ್ಯಾತ ಕ್ರಿಕೆಟಿಗ ಹೆನ್ರಿ ಒಲೊಂಗಾ

ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆ ಎಂಬ ಸುದ್ದಿ ಇಂದು ಬೆಳಿಗ್ಗೆ ಹರಡಿಕೊಂಡಿತ್ತು. ಇದು ಸುಳ್ಳೆಂದು ಖ್ಯಾತ ಕ್ರಿಕೆಟಿಗ ಹೆನ್ರಿ ಒಲೊಂಗಾ ದೃಢೀಕರಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಒಲೊಂಗಾ, ಥರ್ಡ್‌ ಅಂಪೈರ್‌ ಹೀತ್‌ ಸ್ಟ್ರೀಕ್‌ ಅವರನ್ನು ವಾಪಾಸ್ಸು ಕರೆಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿರೇಂದ್ರ ಸೆಹವಾಗ್ ಯಮರಾಜನ ಕರುಣೆಯನ್ನು ಸ್ಮರಿಸಿದ್ದಾರೆ.

heath-streak-legendary

ಬೆಳಿಗ್ಗೆ ಪ್ರಕಟಗೊಂಡಿದ್ದ ಸಾವಿನ ಸುದ್ದಿ

ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀತ್ ಸ್ಟ್ರೀಕ್ ಅವರು 49 ನೇ ವಯಸ್ಸಿನಲ್ಲಿ ನಿಧನರಾದರು. ಕ್ಯಾನ್ಸರ್‌ ವಿರುದ್ದದ ದೀರ್ಘಕಾಲದ ಹೋರಾಟದ ನಂತರ ಮಂಗಳವಾರ ಮೃತರಾದರು. ಅವರು ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕರುಳಿನ ಮತ್ತು ಯಕೃತ್ತಿನ ಕ್ಯಾನ್ಸರ್‌ನಿಂದ ಹೀತ್ ಸ್ಟ್ರೀಕ್ ಬಳಲುತಿದ್ದರು ಎಂದು ಅವರ ಸ್ನೇಹಿತರು ಹಾಗೂ ಆಪ್ತರು ಮಾಹಿತಿ ನೀಡಿದರು.

ಜಿಂಬಾಬ್ವೆಯ ಮಾಜಿ ವೇಗದ ಬೌಲರ್ ಹಾಗೂ ಸ್ಟ್ರೀಕ್‌ ಅವರ ದೀರ್ಘಕಾಲೀನ ಸಹ ಆಟಗಾರ ಹೆನ್ರಿ ಒಲೊಂಗಾ ಅವರು ಹೀತ್ ಸ್ಟ್ರೀಕ್ ಸಾವಿನ ಸುದ್ದಿಯನ್ನು X ( ಟ್ವಿಟರ್‌ ) ನಲ್ಲಿ ಹಂಚಿಕೊಮಡಿದ್ದಾರೆ. ಜಿಂಬಾಬ್ವೆ ನಾಯಕ ಸೀನ್ ವಿಲಿಯಮ್ಸ್ ಸ್ಟ್ರೀಕ್‌ ಸಾವಿಗೆ ಕಂಬನಿ ಮಿಡಿದಿದ್ದಾರೆ. ಆದರೆ, ಸ್ಟ್ರೀಕ್ ಕುಟುಂಬದಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

Heath Streak, Legendary Zimbabwe Cricketer, Dies At The Age Of 49 After Prolonged Cancer Battle

'ಹೀತ್ ಸ್ಟ್ರೀಕ್ ಸಾವಿಗೆ ಸಂಬಂಧಿಸಿದ ಸುದ್ದಿಯು ದುಃಖ ತರಿಸಿದೆ. ಆರ್‌ಐಪಿ ಲೆಜೆಂಡ್‌. ಸ್ಟ್ರೀಕ್ ಅವರು ಜಿಂಬ್ವಾಬ್ವೆ ನಿರ್ಮಿಸಿದ ಶ್ರೇಷ್ಠ ಆಲ್ ರೌಂಡರ್. ನಿಮ್ಮೊಂದಿಗೆ ಆಟವಾಡಿದ್ದಕ್ಕೆ ನನಗೆ ತೀವ್ರ ಸಂತಸವಿದೆ. ನನ್ನ ಬೌಲಿಂಗ್ ಸ್ಪೆಲ್ ಕೊನೆಗೊಂಡಾಗ ನಿಮಗೆ ಇನ್ನೊಂದು ಜಾಗದಲ್ಲಿ ಮತ್ತೆ ಸಿಗೋಣ' ಎಂದು ಒಲೊಂಗಾ ಹೇಳಿದ್ದಾರೆ.

'ನೀವು ಮತ್ತು ನಿಮ್ಮ ಕುಟುಂಬವು ನನ್ನ ಮತ್ತು ಇತರ ಹಲವರಿಗೆ ಏನು ಮಾಡಿದ್ದೀರಿ ಎಂಬುದನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ. ನಿಮ್ಮ ಸಾವಿನಿಂದ ನಮ್ಮ ಹೃದಯಗಳು ಮುರಿದುಹೋಗಿವೆ. ನೀವು ಸುಂದರವಾದ ಕುಟುಂಬ ಮತ್ತು ಪರಂಪರೆಯನ್ನು ಬಿಟ್ಟು ಹೋಗಿದ್ದೀರಿ. ನೀವು ತಪ್ಪಿಸಿಕೊಂಡಿರಿ. ಆದರೂ, ನಾವು ನಿನ್ನನ್ನು ಪ್ರೀತಿಸುತ್ತೇವೆ. ಶಾಂತಿಯಿಂದ ವಿಶ್ರಾಂತಿ ಪಡೆಯಿರಿ ಸ್ಟ್ರೀಕಿ' ಎಂದು ಸೀನ್ ವಿಲಿಯಮ್ಸ್ ಬರೆದುಕೊಂಡಿದ್ದಾರೆ.

'ಹೀತ್ ಸ್ಟ್ರೀಕ್ ಇನ್ನಿಲ್ಲ ಎಂಬುದನ್ನು ಕೇಳಿ ನೀವಾಗುತ್ತಿದೆ. ನಿಜವಾಗಿಯೂ ದುಃಖವಾಗಿದೆ ಎಂದು ಭಾರತದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಟ್ವೀಟ್‌ ಮಾಡಿದ್ದಾರೆ.

ಜಿಂಬಾಬ್ವೆಯ ಮಾಜಿ ನಾಯಕ ಹೀತ್ ಸ್ಟ್ರೀಕ್ 65 ಟೆಸ್ಟ್ ಮತ್ತು 189 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಮತ್ತು ಒನ್‌ಡೇ ಕ್ರಿಕೆಟ್‌ನಲ್ಲಿ ಜಿಂಬಾಬ್ವೆಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಂದುವರಿದಿದ್ದಾರೆ. ಮಾಜಿ ಬಲಗೈ ವೇಗಿ ಟೆಸ್ಟ್‌ನಲ್ಲಿ 216 ಮತ್ತು ಏಕದಿನದಲ್ಲಿ 239 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟೆಸ್ಟ್ ಮತ್ತು ಒನ್‌ಡೇ ಎರಡರಲ್ಲೂ 100 ವಿಕೆಟ್ ಪಡೆದ ಮೊದಲ ಜಿಂಬಾಬ್ವೆ ಕ್ರಿಕೆಟಿಗ ಸ್ಟ್ರೀಕ್ ಆಗಿದ್ದಾರೆ. 100 ಟೆಸ್ಟ್ ವಿಕೆಟ್‌ಗಳು ಮತ್ತು 1000 ಟೆಸ್ಟ್ ರನ್‌ಗಳನ್ನು ಗಳಿಸಿದ್ದಾರೆ. ಒನ್‌ಡೇಗಳಲ್ಲಿ 2000 ರನ್ ಗಳಿಸಿದ ಮತ್ತು 200 ವಿಕೆಟ್‌ಗಳನ್ನು ಗಳಿಸಿದ ದೇಶದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಹೀತ್ ಸ್ಟ್ರೀಕ್ ಪಾತ್ರರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+