Glenn Maxwell: ಹೈದರಾಬಾದ್ ತಂಡ ಸೇರಿದ ಆರ್‌ಸಿಬಿ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್: ಎಷ್ಟು ಕೋಟಿಗೆ ಗೊತ್ತಾ?
Glenn Maxwell: ಕೆಲವೇ ದಿನಗಳಲ್ಲಿ ಐಪಿಎಲ್ 2026 ಆರಂಭವಾಗಲಿದೆ. ಈ ನಡುವೆಯ ಟೂರ್ನಿಯಿಂದ ಹೊರಗುಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ ಹೈದರಾಬಾದ್ ತಂಡವನ್ನು ಸೇರ್ಪಡೆ ಆಗಿದ್ದಾರೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಐಪಿಎಲ್‌ನಲ್ಲಿ 13 ಸೀಸನ್‌ಗಳಲ್ಲಿ ಹಲವು ಫ್ರಾಂಚೈಸಿಗಳ ಪರ ಆಡಿದ್ದ ಅವರು, ಇದೀಗ ಪಾಕಿಸ್ತಾನ್ ಸೂಪರ್ ಲೀಗ್ 2026ನಲ್ಲಿ ಹೊಸ ಅಧ್ಯಾಯ ಆರಂಭಿಸಲು ನಿರ್ಧರಿಸಿದ್ದಾರೆ.

ಹೈದರಾಬಾದ್ ಕಿಂಗ್ಸ್‌ಮೆನ್‌ನೊಂದಿಗೆ ಒಪ್ಪಂದ
ಮ್ಯಾಕ್ಸ್‌ವೆಲ್ ಈ ಬಾರಿ ಪಿಎಸ್‌ಎಲ್ ಹರಾಜಿನಲ್ಲಿ ಭಾಗವಹಿಸದಿದ್ದರೂ, ನೇರ ಒಪ್ಪಂದದ ಮೂಲಕ ಲೀಗ್‌ಗೆ ಎಂಟ್ರಿ ಪಡೆದಿದ್ದಾರೆ. ಹೊಸ ಫ್ರಾಂಚೈಸಿಯಾಗಿ ಸೇರ್ಪಡೆಯಾಗಿರುವ ಹೈದರಾಬಾದ್ ಕಿಂಗ್ಸ್‌ಮೆನ್ ತಂಡದೊಂದಿಗೆ ಅವರು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಪೇಶಾವರ್ ಝಲ್ಮಿ ತಂಡದೊಂದಿಗೆ ಮಾತುಕತೆ ನಡೆದಿದ್ದರೂ, ಅಂತಿಮ ಹಂತದಲ್ಲಿ ಒಪ್ಪಂದ ಸಾಧ್ಯವಾಗಿರಲಿಲ್ಲ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ಮ್ಯಾಕ್ಸ್‌ವೆಲ್ ಸುಮಾರು 4.5 ಕೋಟಿ ಪಾಕಿಸ್ತಾನಿ ರೂಪಾಯಿ (ಅಂದಾಜು 1.47 ಕೋಟಿ ಭಾರತೀಯ ರೂಪಾಯಿ) ಸಂಭಾವನೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಅವರು ಕಳೆದ ಐಪಿಎಲ್ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದಿಂದ ಪಡೆದಿದ್ದ 4.20 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತವಾಗಿದೆ. ಐಪಿಎಲ್‌ಗಿಂತ ಕಡಿಮೆ ಸಂಭಾವನೆ ಇದ್ದರೂ, ಪಿಎಸ್‌ಎಲ್‌ನಲ್ಲಿ ಆಡಲು ಮ್ಯಾಕ್ಸ್‌ವೆಲ್ ಮುಂದಾಗಿರುವುದು ಗಮನಾರ್ಹವಾಗಿದೆ. 11ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಅವರು ಹೈದರಾಬಾದ್ ಕಿಂಗ್ಸ್‌ಮೆನ್ ಪರ ಕಣಕ್ಕಿಳಿಯಲಿದ್ದಾರೆ.
ಐಪಿಎಲ್‌ನಲ್ಲಿ ಇವರು ಹಲವು ತಂಡಗಳ ಪರ ಆಡಿದ್ದಾರೆ. ಅದರಲ್ಲೂ ಆರ್‌ಸಿಬಿಯಲ್ಲಿ ಇವರು ಬ್ಯಾಟಿಂಗ್‌ಗಿಳಿದರೆ ಸಾಕು ಸಿಕ್ಸ್‌ಗಳ ಸುರಿಮಳೆಯನ್ನೇ ಸುರಿಸಿದ ಉದಾಹರಣೆಗಳಿವೆ. ಆದರೆ, ದಿನ ಕಳೆದಂತೆ ಫಾರ್ಮ್ ಕಳೆದುಕೊಂಡು ಸ್ವತಃ ಅವರೇ ಟೂರ್ನಿಯಿಂದ ಹೊರನಡೆಯುವುದಾಗಿ ಘೋಷಣೆ ಸಹ ಮಾಡಿದರು. ಐಪಿಎಲ್‌ನಲ್ಲಿ ಒಟ್ಟು ನಾಲ್ಕು ಪ್ರಮುಖ ತಂಡಗಳ ಪರ ಆಡಿದ್ದಾರೆ.
ಐಪಿಎಲ್‌ನಲ್ಲಿ ಯಾವೆಲ್ಲಾ ತಂಡಗಳ ಪರ ಆಡಿದ್ದಾರೆ?
* ಡೆಲ್ಲಿ ಡೇರ್‌ಡೆವಿಲ್ಸ್: 2012ರಲ್ಲಿ ತಮ್ಮ ಐಪಿಎಲ್ ಪ್ರಯಾಣವನ್ನು ಈ ತಂಡದೊಂದಿಗೆ ಆರಂಭಿಸಿದರು. ಮತ್ತೆ 2018ರಲ್ಲೂ ಇದೇ ತಂಡಕ್ಕೆ ಮರಳಿದ್ದರು.
* ಮುಂಬೈ ಇಂಡಿಯನ್ಸ್: 2013
* ಕಿಂಗ್ಸ್ XI ಪಂಜಾಬ್: 2014 ರಿಂದ 2017ರ ವರೆಗೆ ಮತ್ತು ನಂತರ 2020ರಲ್ಲಿ ಈ ತಂಡದ ಪರವಾಗಿ ಆಡಿದ್ದಾರೆ. 2025ರ ಹರಾಜಿನಲ್ಲಿ ಇವರನ್ನು ಮತ್ತೆ ಪಂಜಾಬ್ ತಂಡವೇ ಖರೀದಿಸಿದೆ.
* ರಾಯಲ್ ಚಾಲೆಂಜರ್ಸ್ ಬೆಂಗಳೂರು: 2021ರಿಂದ 2024ರ ವರೆಗೆ ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಇನ್ನೂ ಅವರು, 2026ರ ಐಪಿಎಲ್ ಮೆಗಾ ಹರಾಜಿನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದು, ಪಿಎಸ್‌ಎಲ್‌ನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಇದೆ.












Click it and Unblock the Notifications