ಐಪಿಎಲ್ ಮೂಡ್‌ನಿಂದ ಹೊರಬನ್ನಿ; ಕೊಹ್ಲಿಗೆ ಅಭಿಮಾನಿಗಳ ಮನವಿ ಮಾಡಿದ್ದೇನು?
ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಣ ಟಿ20 ವಿಶ್ವಕಪ್ ಲೀಗ್ ಹಂತದ ಪಂದ್ಯ ಭಾನುವಾರ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ, ಬಿಗ್ ಸ್ಕೋರ್ ಕಲೆ ಹಾಕಲಿಲ್ಲ. ಈ ಪಂದ್ಯದಲ್ಲೂ ಟೀಮ್ ಇಂಡಿಯಾದ ಪರ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರು. ಆದರೆ ಮತ್ತೆ ವಿರಾಟ್ ನಿರಾಸೆಯ ಕಡಲಿಲ್ಲ ಪ್ರಯಾಣ ಬೆಳೆಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದು ಯಶಸ್ಸು ಕಂಡಿದ್ದು, ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲೂ ಇನ್ನಿಂಗ್ಸ್ ಆರಂಭಿಸಿದರು. ಆದರೆ ಐಪಿಎಲ್‌ನಲ್ಲಿ ವಿರಾಟ್ ಕಂಡ ಯಶಸ್ಸು, ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಸಿಗುತ್ತಿಲ್ಲ. ಹೀಗಾಗಿ ಫ್ಯಾನ್ಸ್ ನಿಮ್ಮ ಸ್ಥಾನದಲ್ಲೇ ನೀವು ಆಡಿ ಎಂದು ಅವರಿಗೆ ಮನವಿ ಮಾಡಿದ್ದಾರೆ.

ಆರಂಭಿಕರಾಗಿ ಫ್ಲಾಫ್
ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಹ ಇನ್ನಿಂಗ್ಸ್ ಆರಂಭಿಸಿದರು. ಈ ಪಂದ್ಯದಲ್ಲೂ ವಿರಾಟ್ ಸಿಂಗಲ್ಸ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಕೇವಲ ನಾಲ್ಕು ರನ್ ಬಾರಿಸಿ ನಸೀಮ್ ಶಾಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ನಿರಾಸೆಯ ಆಟ ಮುಂದುವರೆದಿದೆ.
ಕೊಹ್ಲಿಯನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಂತೆ ಬೇಡಿಕೆ ಹೆಚ್ಚಿದೆ. ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಬಗ್ಗೆ ಅಭಿಮಾನಿಗಳು ನಿರಂತರವಾಗಿ ಅಭಿಮಾನಿಗಳು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುವಂತೆ ಒತ್ತಡ ಹೆಚ್ಚಾಗುತ್ತಿದೆ.

ಆರಂಭಿಕರಾಗಿ ಯಾರು?
ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ಆರಂಭಿಕರಾಗಿ ಆಡುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಡುವ 15ರ ಬಳಗದಲ್ಲಿ ಯಶಸ್ವಿ ಜೈಸ್ವಾಲ್ ಪ್ಯಾಡ್ ಕಟ್ಟಿಕೊಂಡು ರೆಡಿ ಇದ್ದಾರೆ. ಅವರು ಬರಿ ನಾಯಕನ ಒಂದು ಸನ್ನೆಯನ್ನು ಕಾಯುತ್ತಿದ್ದಾರೆ. ಒಂದು ವೇಳೆ ಇವರಿಗೆ ಚಾನ್ಸ್ ನೀಡಬಹುದು. ಇಲ್ಲದೇ ಇದ್ದಲ್ಲಿ ಮೂರನೇ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಿಡುತ್ತಿರುವ ರಿಷಭ್ ಪಂತ್ ಅವರಿಗೆ ಆರಂಭಿಕರಾಗಿ ಬಡ್ತಿ ನೀಡುವ ಸಾಧ್ಯತೆ ಇದೆ.
ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಇವರು ಈ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಈ ಕ್ರಮಾಂಕದಲ್ಲಿ ತಾವು ಆಡಿ ಉಳಿದ ಆಟಗಾರರನ್ನು ಆಡಿಸಿಕೊಂಡು ಹೋಗುವ ಕ್ಷಮತೆ ಹೊಂದಿದ್ದಾರೆ. ಆದರೆ ಟಿ20 ವಿಶ್ವಕಪ್‌ನ ಆರಂಭದಲ್ಲಿ ರನ್ ಬರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಲ್ಲದೆ ವಿರಾಟ್ ತಮ್ಮ ನೈಜ ಸ್ಥಾನದಲ್ಲಿ ಆಡುವಂತೆ ಮನವಿ ಮಾಡುತ್ತಿದ್ದಾರೆ.












Click it and Unblock the Notifications