ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ: ಆರತಿಗೆ ಒಂದು, ಕೀರ್ತಿಗೆ ಒಂದು!

ವಿರಾಟ್ ಕೊಹ್ಲಿ ಅವರು ಇದೀಗ ಮತ್ತೊಮ್ಮೆ ಅಪ್ಪನಾದ ಖುಷಿಯಲ್ಲಿದ್ದಾರೆ. ಹಾಗೇ ಕಿಂಗ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಅವರಿಗೆ ಈ ಬಾರಿ ಗಂಡು ಮಗು ಹುಟ್ಟಿದೆ. ಈ ಜೋಡಿ ಈಗ ಫುಲ್ ಖುಷಿಯಾಗಿದೆ. ಇದೇ ಸಮಯದಲ್ಲಿ ಆರ್‌ಸಿಬಿ ಬೆಂಗಳೂರು ಐಪಿಎಲ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ 'ಆರತಿಗೆ ಒಂದು, ಕೀರ್ತಿಗೆ ಒಂದು' ಅಂತಿದ್ದಾರೆ!

ಇದೇ ಫೆಬ್ರವರಿ 15 ರಂದು ತಮಗೆ ಗಂಡು ಮಗುವು ಜನಿಸಿದೆ ಅಂತಾ ಕೊಹ್ಲಿ ಮತ್ತು ಅನುಷ್ಕಾ ಮಾಹಿತಿ ನೀಡಿದ್ದರು. 'ನಮ್ಮ ಹೃದಯ ಪ್ರೀತಿ ಮತ್ತು ಸಂತೋಷದಿಂದ ತುಂಬಿದೆ, ಫೆಬ್ರವರಿ 15 ರಂದು ನಾವು ನಮ್ಮ ಹುಡುಗ ಅಕಾಯ್ & ವಮಿಕಾರ ತಮ್ಮನನ್ನು ಜಗತ್ತಿಗೆ ಸ್ವಾಗತಿಸಿದೆವು. ಈ ಮಾಹಿತಿ ತಿಳಿಸಲು ನಾವು ಸಂತೋಷ ಪಡುತ್ತೇವೆ! ನಮ್ಮ ಜೀವನದ ಈ ಸುಂದರ ವೇಳೆಗೆ ನಿಮ್ಮ ಆಶೀರ್ವಾದ & ಶುಭ ಹಾರೈಕೆ ನಾವು ಬಯಸುತ್ತೇವೆ. ಈ ವೇಳೆ ನಮ್ಮ ಗೌಪ್ಯತೆಯನ್ನೂ ದಯಮಾಡಿ ಗೌರವಿಸಲು ನಾವು ವಿನಂತಿಸುತ್ತೇವೆ.' ಎಂದು ವಿರುಷ್ಕಾ ದಂಪತಿ ಸಿಹಿ ಸುದ್ದಿ ತಿಳಿಸಿದ್ದರು. ಇದೀಗ ಫ್ಯಾನ್ಸ್ ಏನ್ ಹೇಳ್ತಿದ್ದಾರೆ ಗೊತ್ತಾ?

Fans Wishing Anushka Sharma & Virat Kohli For Their 2nd Baby

'ಆರತಿಗೆ ಒಂದು, ಕೀರ್ತಿಗೆ ಒಂದು'

ಸೋಷಿಯಲ್ ಮೀಡಿಯಾದಲ್ಲಿ ಇದೀಗ ವಿರಾಟ್ ಕೊಹ್ಲಿ ಅವರ 2ನೇ ಮಗು ವಿಚಾರವನ್ನ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಈಗಾಗಲೇ ಒಂದು ಹೆಣ್ಣು ಮಗುವಿಗೆ, ಅಪ್ಪ & ಅಮ್ಮ ಆಗಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಇದೀಗ ಗಂಡು ಮಗುವನ್ನ ಪಡೆದಿದ್ದಾರೆ. ಹೀಗಾಗಿ ಅಭಿಮಾನಿಗಳು ಕೂಡ 'ಆರತಿಗೆ ಒಂದು, ಕೀರ್ತಿಗೆ ಒಂದು' ಅಂತಾ ಮಾತನಾಡುತ್ತಿದ್ದಾರೆ. ಹಾಗೇ ಸೋಷಿಯಲ್ ಮೀಡಿಯಾದಲ್ಲೂ ವಿರಾಟ್ ಕೊಹ್ಲಿ ಅವರಿಗೆ, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಹೆಂಡತಿ ಜೊತೆಗೆ ಇದ್ದ ಕೊಹ್ಲಿ

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಬಾಂಡಿಂಗ್ ಸೂಪರ್ ಇಬ್ಬರು ಒಬ್ಬರ ಬಗ್ಗೆ ಮತ್ತೊಬ್ಬರು ತರ್ಲೆ ಮಾಡುತ್ತಾರೆ. ಆದ್ರೂ ಕೊಹ್ಲಿ ಆಗಲಿ, ಅನುಷ್ಕಾ ಆಗಲಿ ಕೋಪ ಮಾಡಿಕೊಳ್ಳುವುದಿಲ್ಲ. ಅದ್ರಲ್ಲೂ ವಿರಾಟ್ ಕೊಹ್ಲಿ ಅವರ ಆಟದ ಬಗ್ಗೆ & ಆಗ್ರೆಸ್ಸಿವ್ ವರ್ತನೆಯ ಬಗ್ಗೆ ಆಗಾಗ ಅನುಷ್ಕಾ ಮಾತನಾಡುತ್ತಾರೆ. ಇದಿಷ್ಟೂ ಕೊಹ್ಲಿ, ಅನುಷ್ಕಾ ಬಾಂಡಿಂಗ್‌ಗೆ ಉದಾಹರಣೆ ಎನ್ನಬಹುದು. ಹೀಗಿದ್ದಾಗಲೇ ತಮ್ಮ ಹೆಂಡತಿಯ ಹೆರಿಗೆ ಸಮಯದಲ್ಲಿ ವಿರಾಟ್ ಕೊಹ್ಲಿ ಅವರು ಕ್ರಿಕೆಟ್‌ಗೆ ರಜೆ ಹಾಕಿ, ಪತ್ನಿಯ ಆರೈಕೆಗೆ ಲಂಡನ್‌ಗೆ ತೆರಳಿದ್ದರು. ಇದೀಗ ಗಂಡು ಮಗುವನ್ನು ಪಡೆದಿದ್ದಾರೆ ಈ ದಂಪತಿ.

2008ರಲ್ಲಿ ಕ್ರಿಕೆಟ್ ಜಗತ್ತಿಗೆ ಎಂಟ್ರಿ

ಕೊಹ್ಲಿ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದು 2008ರಲ್ಲಿ ಅಲ್ಲಿಂದ ಇಲ್ಲಿ ತನಕ ಕೊಹ್ಲಿ ಹೆಸರಲ್ಲಿ ನೂರಾರು ದಾಖಲೆ ಸೇರ್ಪಡೆ ಆಗಿವೆ. ಕ್ರಿಕೆಟ್ ಲೋಕದಲ್ಲಿ ಕೊಹ್ಲಿ ಶೈನಿಂಗ್ ಸ್ಟಾರ್. ಇಂತಹ ನಕ್ಷತ್ರ ಭಾರತೀಯ ಕ್ರಿಕೆಟ್ ತಂಡಕ್ಕೆ ಕೂಡ ದೊಡ್ಡ ಹೆಸರನ್ನ ಗಳಿಸಿ ಕೊಡಲು ಶ್ರಮಿಸುತ್ತಿದ್ದಾರೆ. 2023ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಕೂಡ ಕೊಹ್ಲಿ ಬ್ಯಾಟಿಂಗ್ ಜಗತ್ತಿಗೆ ಇಷ್ಟವಾಗಿತ್ತು. ಹೀಗೆ ತಮ್ಮ ವೃತ್ತಿ ಜೀವನದಲ್ಲೂ ಮಿಂಚುತ್ತಿರುವ ಕೊಹ್ಲಿ ಅವರಿಗೆ ವೈಯಕ್ತಿ ಜೀವನದಲ್ಲೂ ಖುಷಿಯಾದ ಸುದ್ದಿ ಸಿಕ್ಕಿದೆ.

ಐಪಿಎಲ್ ಶುರುವಾಗುವ ಮೊದಲು ಆರ್‌ಸಿಬಿ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಅದರಲ್ಲೂ ಆರ್‌ಸಿಬಿ ತಂಡದಲ್ಲಿ ಕೊಹ್ಲಿ ಅವರನ್ನೇ ಅಭಿಮಾನಿಗಳು ತುಂಬಾ ಇಷ್ಟಪಟ್ಟು ಫಾಲೋ ಮಾಡುತ್ತಾರೆ ಹೀಗಿದ್ದಾಗ ಸಂಭ್ರಮ ಮತ್ತಷ್ಟು ಜೋರಾಗಿದೆ. ಈಗ ಸೋಷಿಯಲ್ ಮೀಡಿಯಾ ಪೂರ್ತಿ ಕೊಹ್ಲಿ ಅವರ 2ನೇ ಮಗುವಿನ ವಿಚಾರವನ್ನೇ ಚರ್ಚೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+