Shami & Sania Mirza: ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ್ರಾ ಮೊಹಮ್ಮದ್ ಶಮಿ- ಸಾನಿಯಾ ಮಿರ್ಜಾ? ವೈರಲ್ ಫೋಟೊ ಹಿಂದಿನ ಸತ್ಯವೇನು

ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ದೃಢಪಡಿಸಿದ್ದು ಟೀಂ ಇಂಡಿಯಾ ಅಭಿಮಾನಿಗಳಿಗೆ ಬೇಸರ ತರಿಸಿದೆ. ಶಮಿ ಇನ್ನೂ ಫಿಟ್ ಆಗಿಲ್ಲ, ಅವರು ಸಂಪೂರ್ಣವಾಗಿ ಫಿಟ್ ಆಗಬೇಕು ಎಂದು ಬಿಸಿಸಿಐ ಬಯಸುತ್ತಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೇಳೆಗೆ ಫಿಟ್ ಆದರೆ ಅವರು ಭಾರತ ತಂಡದಲ್ಲಿ ಆಡಲಿದ್ದಾರೆ.

ಮೊಹಮ್ಮದ್ ಶಮಿ ಕ್ರಿಕೆಟ್‌ಗಾಗಿ ಮಾತ್ರವಲ್ಲ, ಅವರ ವೈಯಕ್ತಿಕ ಜೀವನದ ವಿಚಾರದಲ್ಲೂ ಸುದ್ದಿಯಾಗಿದ್ದಾರೆ. ಪತ್ನಿಯಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ ಎಂದಿದ್ದ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ. ಆಗಾಗ್ಗೆ ಶಮಿ ಅವರ ಎರಡನೇ ಮದುವೆ ಬಗ್ಗೆ ಕೂಡ ಸುದ್ದಿಯಾಗುತ್ತಿರುತ್ತದೆ. ಈ ಮೊದಲು ಮೊಹಮ್ಮದ್ ಶಮಿ ಮತ್ತು ಟೆನಿಸ್ ತಾರೆ ಸಾನಿಯಾ ಮಿರ್ಜಾ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು, ಆದರೆ ಇದು ಸುಳ್ಳು ಎಂದು ಇಬ್ಬರೂ ಸ್ಪಷ್ಟನೆ ನೀಡಿದ್ದರು.

Fact check viral sania mirza mohammed shami photo

ವೈರಲ್ ಆಗ್ತಿವೆ ಫೋಟೊಗಳು

ಈಗ ಮತ್ತೊಮ್ಮೆ ಇವರ ಮದುವೆ ಸುದ್ದಿ ಮುನ್ನಲೆಗೆ ಬಂದಿದೆ. ಇಬ್ಬರೂ ದುಬೈನಲ್ಲಿ ಜೊತೆಗಿರುವ, ಕ್ರಿಸ್‌ಮಸ್ ಆಚರಣೆ ಮಾಡುತ್ತಿರುವ ಫೋಟೊಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ. ಇಬ್ಬರು ಅನ್ಯೋನ್ಯವಾಗಿ ಜೊತೆಗಿರುವಂತೆ ಕಾಣುವ ಫೋಟೊಗಳು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ವೈರಲ್ ಆಗುತ್ತಿದ್ದು ಇದನ್ನು ನೋಡಿದವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಫೋಟೋಗಳ ಅಸಲಿಯತ್ತೇನು?

ಖ್ಯಾತ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ಮದುವೆಯಾಗಿದ್ದು ಸಾನಿಯಾ ಮಿರ್ಜಾ ಸದ್ಯ ಡಿವೋರ್ಸ್ ಪಡೆದಿದ್ದು ಮಗನ ಜೊತೆ ದುಬೈನಲ್ಲಿ ನೆಲೆಸಿದ್ದಾರೆ. ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ವಿಶ್ರಾಂತಿ ಪಡೆಯುತ್ತಿರುವ ಕಾರಣ ಇಬ್ಬರು ದುಬೈನಲ್ಲಿ ಸಮಯ ಕಳೆದಿದ್ದಾರೆ ಎನ್ನುವಂತೆ ಫೋಟೊಗಳಲ್ಲಿ ತೋರಿಸಲಾಗಿದೆ.

ಆದರೆ ಈ ಫೋಟೊಗಳು ಅಸಲಿಯಲ್ಲ, ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಈ ಚಿತ್ರಗಳನ್ನು ಸೃಷ್ಟಿಸಲಾಗಿದೆ. ಇಬ್ಬರು ಕ್ರಿಸ್‌ಮಸ್ ಆಚರಣೆ ಮಾಡಿರುವುದಾಗಲಿ, ಜೊತೆಗಿರುವುದಾಗಲಿ ಎಲ್ಲವೂ ಅಪ್ಪಟ ಸುಳ್ಳು.

ಈ ಫೋಟೊಗಳ ಬಗ್ಗೆ ಸಾನಿಯಾ ಮಿರ್ಜಾ ಆಗಲಿ ಮೊಹಮ್ಮದ್ ಶಮಿ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಇಬ್ಬರು ಕೂಡ ತಮ್ಮ ತಮ್ಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ವೃತ್ತಿ ಜೀವನದ ಕಡೆ ಗಮನ ಹರಿಸಿದ್ದಾರೆ. ಸಾನಿಯಾ ಮಿರ್ಜಾ ವಿಶ್ವ ಟೆನಿಸ್ ಲೀಗ್‌ನ ಪ್ರಸಾರದಲ್ಲಿ ಸಕ್ರಿಯವಾಗಿದ್ದರೆ, ಶಮಿ ದೇಶೀಯ ಕ್ರಿಕೆಟ್‌ ಟೂರ್ನಿಯಲ್ಲಿ ಆಡುತ್ತಿದ್ದು ಭಾರತ ತಂಡಕ್ಕೆ ವಾಪಸಾತಿ ಮಾಡುವ ವಿಶ್ವಾಸದಲ್ಲಿದ್ದಾರೆ.

ಈ ಮೊದಲು ಕೂಡ ಇಬ್ಬರು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿದ್ದವು. ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದ ಸಾನಿಯಾ ಮಿರ್ಜಾ ತಂದೆ ಇದೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು. ಈಗ ಮತ್ತೊಮ್ಮೆ ಇಂತಹ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ನಟ ಪ್ರಭಾಸ್ ವಿಚಾರದಲ್ಲಿ ಕೂಡ ಇಂತಹದ್ದೇ ಫೋಟೊಗಳು ವೈರಲ್ ಆಗಿದ್ದವು. ಪ್ರಭಾಸ್ ಅನುಷ್ಕಾ ಎಂಗೇಜ್‌ಮೆಂಟ್ ಆಗಿರುವಂತೆ ಫೋಟೊಗಳನ್ನು ಸೃಷ್ಟಿಸಲಾಗಿತ್ತು. ಎಐ ತಂತ್ರಜ್ಞಾನ ಈ ರೀತಿ ದುರ್ಬಳಕೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+