Ind vs Eng 3rd Test: ಮೂರನೇ ಟೆಸ್ಟ್‌ಗಾಗಿ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡಿದ ಇಂಗ್ಲೆಂಡ್
ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ರಾಜ್‌ಕೋಟ್‌ನಲ್ಲಿ ಗುರುವಾರ ಆರಂಭವಾಗಲಿದೆ. ಮೂರನೇ ಪಂದ್ಯದ ಆರಂಭಕ್ಕೆ ಒಂದು ದಿನದ ಮುನ್ನ ಇಂಗ್ಲೆಂಡ್ ಆಡುವ ಬಳಗವನ್ನು ಘೋಷಣೆ ಮಾಡಿದೆ.
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಬದಲಾಗಿ ವೇಗಿಯನ್ನು ಹೇಸರಿಸಿದೆ. ಉಳಿದಂತೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ರಾಜ್‌ಕೋಟ್‌ನಲ್ಲಿ ಕಣಕ್ಕಿಳಿಯಲಿದೆ.

ಶೋಯೆಬ್ ಬಶೀರ್ ಬದಲಿಗೆ ಮಾರ್ಕ್ ವುಡ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಡುವ ಬಳಗದ ಪಟ್ಟಿಯನ್ನು ಹಂಚಿಕೊಂಡಿದೆ. ನಾಯಕ ಬೆನ್ ಸ್ಟೋಕ್ಸ್ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಪರ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ.
ಎರಡನೇ ಟೆಸ್ಟ್ ಗೆದ್ದಿರುವ ಭಾರತ
5 ಪಂದ್ಯಗಳ ಸರಣಿ 1-1 ಸಮಬಲದಲ್ಲಿದೆ. ಮೊದಲ ಹೈದರಾಬಾದ್ ಟೆಸ್ಟ್‌ನಲ್ಲಿ 28 ರನ್‌ಗಳ ಸೋಲಿನ ನಂತರ, ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ 106 ರನ್‌ಗಳಿಂದ ಗೆದ್ದಿದೆ.
ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಅದ್ಭುತ ಬೌಲಿಂಗ್ ಭಾರತವು ಇಂಗ್ಲೆಂಡ್ ವಿರುದ್ಧ ಗೆಲ್ಲಲು ಸಹಾಯ ಮಾಡಿತು ಮತ್ತು ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಂಡಿದೆ.
ಮೂರನೇ ಟೆಸ್ಟ್ ಫೆಬ್ರವರಿ 15 ರಂದು ರಾಜ್‌ಕೋಟ್‌ನಲ್ಲಿ ಆರಂಭವಾಗಲಿದ್ದು, ನಾಲ್ಕನೇ ಟೆಸ್ಟ್ ಫೆಬ್ರವರಿ 23 ರಂದು ರಾಂಚಿಯಲ್ಲಿ ಪ್ರಾರಂಭವಾಗಲಿದೆ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ.
ಮೂರನೇ ಟೆಸ್ಟ್‌ಗಾಗಿ ಭಾರತ ಇನ್ನೂ ಪ್ಲೇಯಿಂಗ್ 11 ಅನ್ನು ಘೋಷಣೆ ಮಾಡಿಲ್ಲ. ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಎರಡನೇ ಟೆಸ್ಟ್ ಕಳೆದುಕೊಂಡ ಬಳಿಕ ಮೂರನೇ ಟೆಸ್ಟ್‌ಗೆ ವಾಪಸಾಗಿದ್ದಾರೆ. ಅವರು ಆಡುವ ಬಳಗದಲ್ಲಿ ಅವಕಾಶ ಪಡೆಯಲಿದ್ದಾರೆ. ಸರ್ಫರಾಜ್ ಖಾನ್ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಆಡಲು ಅವಕಾಶ ಪಡೆಯುವ ಸಾಧ್ಯತೆ ಇದೆ.
ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ :
ಝಾಕ್ ಕ್ರಾಲಿ, ಬೆನ್ ಡಕೆಟ್, ಓಲೀ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್.












Click it and Unblock the Notifications