ಆರ್‌ಸಿಬಿ ಇದುವರೆಗೂ ಯಾಕೆ ಕಪ್ ಗೆದ್ದಿಲ್ಲ ಗೊತ್ತಾ? ಇಲ್ಲಿದೆ ನೋಡಿ ಅಸಲಿ ಕಾರಣ!

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹಿಂಗೆ ಆರ್‌ಸಿಬಿ ತಂಡಕ್ಕೆ ಕೋಟಿ ಕೋಟಿ ಕನ್ನಡಿಗರು ಅಭಿಮಾನಿಗಳಾಗಿ ಹೋಗಿದ್ದಾರೆ. ಅದರಲ್ಲೂ ಆರ್‌ಸಿಬಿ ತಂಡವನ್ನು ಇಡೀ ಕನ್ನಡ ನಾಡು ಮಾತ್ರವಲ್ಲ, ಭಾರತದ ಮೂಲೆ ಮೂಲೆಯಲ್ಲೂ ಬೆಂಬಲಿಸುವ ಜನರು ಇದ್ದಾರೆ. ಹೀಗಾಗಿ ಆರ್‌ಸಿಬಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಪಡೆ ಇದೆ. ಹೀಗಿದ್ದರೂ, ಆರ್‌ಸಿಬಿ ತಂಡ ಮಾತ್ರ ಈವರೆಗೆ ಐಪಿಎಲ್ ಕಪ್ ಗೆದ್ದಿಲ್ಲ ಯಾಕೆ ಗೊತ್ತಾ? ಅದಕ್ಕೆ ಉತ್ತರ ಇಲ್ಲದೆ ಮುಂದೆ ಓದಿ.

ಐಪಿಎಲ್ ಯಾವಾಗ ಶುರುವಾಯ್ತೋ, ಆಗಲೇ ಕ್ರಿಕೆಟ್ ಜಗತ್ತಿಗೆ ಕೂಡ ಒಂದು ದೊಡ್ಡದಾದ ತಿರುವು ಸಿಕ್ಕಿದೆ. ಯಾಕಂದ್ರೆ ಐಪಿಎಲ್ ಟೂರ್ನಿ ಶುರುವಾದ ನಂತರ ಜಾಗತಿಕ ಮಟ್ಟದಲ್ಲೂ ದೊಡ್ಡ ಬದಲಾವಣೆ ಆಗಿದೆ. ಅದರಲ್ಲೂ ಭಾರತದಲ್ಲಿ ಇರುವ ಪ್ರತಿಭಾನ್ವಿತ ಯುವಕರಿಗೆ, ಕ್ರಿಕೆಟ್ ಆಡಲು ಅವಕಾಶ ಸಿಕ್ಕಿದೆ. ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷಗಳಿಂದ ಕಪ್ ಗೆದ್ದೇ ಇಲ್ಲ.

Discover Why RCB Is Still Not Won The IPL Cup

ಆರ್‌ಸಿಬಿ ಕಪ್ ಗೆದ್ದಿಲ್ಲ ಯಾಕೆ?

ಇಷ್ಟೆಲ್ಲ ನಡೆದಿದ್ದರೂ ಕನ್ನಡಿಗರು ಮಾತ್ರ ಆರ್‌ಸಿಬಿ ತಂಡದ ಕೈಬಿಟ್ಟಿಲ್ಲ ಹಾಗೆ ಈ ಬಾರಿ ಅಂದ್ರೆ 17ನೇ ಬಾರಿಯ IPL ಟೂರ್ನಿಯಲ್ಲೂ, ಆರ್‌ಸಿಬಿ ಟೀಂ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು ಫ್ಯಾನ್ಸ್. ಆದರೂ ಈಗಾಗಲೇ ಬಹುತೇಕ ನಮ್ಮ ಆರ್‌ಸಿಬಿ ತಂಡ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಂತೆ ಆಗಿದೆ ಇಂತಹ ಸ್ಥಿತಿಯಲ್ಲಿ ಆರ್‌ಸಿಬಿ ಯಾಕೆ ಕಪ್ ಗೆದ್ದಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದೋಣ ಬನ್ನಿ.

ನಿನ್ನೆ ಕೂಡ ಆರ್‌ಸಿಬಿಗೆ ಸೋಲು

ಆರ್‌ಸಿಬಿ ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್​​ (KKR vs RCB) ಎದುರು ಸೋಲುವ ಮೂಲಕ, ಅಭಿಮಾನಿಗಳಿಗೆ ಕೂಡ ದೊಡ್ಡ ಆಘಾತ ನೀಡಿದೆ. ಇದು ಭಾರಿ ಸಂಚಲನ ಸೃಷ್ಟಿ ಮಾಡಿದೆ. ಆರ್‌ಸಿಬಿ ತಂಡ ನಿನ್ನೆಯ ಸೋಲಿನ ಮೂಲಕ, ಸತತ 6ನೇ ಸೋಲನ್ನ ಕಂಡಿದೆ. ಆಡಿರುವ 8 ಪಂದ್ಯದಲ್ಲಿ 1 ಮ್ಯಾಚ್ ಮಾತ್ರ ಗೆದ್ದಿದೆ ಆರ್‌ಸಿಬಿ. ಇನ್ನು ಉಳಿದ 7ರಲ್ಲಿ ಸೋತಿದ್ದು, 2 ಅಂಕ ಪಡೆದು -1.046ರ ನೆಟ್ ರನ್‌ರೇಟ್ ಪಡೆದಿದ್ದು. ಈ ಮೂಲಕ ಆರ್‌ಸಿಬಿ, 2024ರ ಐಪಿಎಲ್ ಟೂರ್ನಿಯಲ್ಲಿ ಕೊನೇ ಸ್ಥಾನದಲ್ಲಿ ಇದೆ. ಹೀಗಾಗಿ ಟೂರ್ನಿಯಿಂದ ಹೊರಗೆ ಬೀಳುವುದು ಈ ಮೂಲಕ ಬಹುತೇಕ ಪಕ್ಕಾ ಆಗಿದೆ. ಹಾಗಾದರೆ, ಆರ್‌ಸಿಬಿ ಕಪ್ ಯಾಕೆ ಗೆಲ್ಲುತ್ತಿಲ್ಲ ಹೇಳಿ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

Discover Why RCB Is Still Not Won The IPL Cup

ಆರ್‌ಸಿಬಿ ಈ ಕಾರಣಕ್ಕೆ ಕಪ್ ಗೆದ್ದಿಲ್ಲ!

ನಿನ್ನೆ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಸೋತ ನಂತರ ಸೋಷಿಯಲ್ ಮೀಡಿಯಾ ಮಂದಿ ಇದರ ಬಗ್ಗೆ ಭಾರಿ ಚರ್ಚೆ ಮಾಡುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ಕಪ್ ಯಾಕೆ ಗೆಲ್ಲುತ್ತಿಲ್ಲ ಎಂಬ ವಿಚಾರದ ಬಗ್ಗೆ ಭರ್ಜರಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಅದರಲ್ಲಿ ಆರ್‌ಸಿಬಿ ಕಪ್ ಗೆಲ್ಲದೇ ಇರಲು ಕಾರಣ ಏನು? ಎಂಬ ಬಗ್ಗೆ ವಿವರಣೆ ನೀಡಲಾಗಿದೆ. ಆ ಪ್ರಕಾರ ಆರ್‌ಸಿಬಿ ಕಪ್ ಗೆಲ್ಲದೇ ಇರಲು ಕಾರಣ ಏನಪ್ಪಾ ಅಂದರೆ, ಅಕಸ್ಮಾತ್ ಆರ್‌ಸಿಬಿ ತಂಡವು ಕಪ್ ಗೆದ್ದರೆ ಅಭಿಮಾನಿಗಳು ಆ ಖುಷಿಗೆ ಕ್ರಿಕೆಟ್ ಮೈದಾನಕ್ಕೆ ನುಗ್ಗುತ್ತಾರೆ. ಆಗ ಅಭಿಮಾನಿಗಳನ್ನು ನಿಯಂತ್ರಣ ಮಾಡುವುದು ಪೊಲೀಸರಿಗೆ ಕಷ್ಟ ಆಗುತ್ತದೆ. ಈ ಕಾರಣಕ್ಕೆ ಆರ್‌ಸಿಬಿ ತಂಡ ಕಪ್ ಗೆದ್ದಿಲ್ಲ ಅಂತಾ, ತಮಾಷೆಗೆ ಒಂದು ವಿಡಿಯೋ ಮಾಡಿ ಪೋಸ್ಟ್ ಮಾಡಲಾಗಿದೆ. ಆ ವಿಡಿಯೋ ಇಲ್ಲಿದೆ ಮುಂದೆ ನೋಡಿ.

ಒಟ್ನಲ್ಲಿ ಆರ್‌ಸಿಬಿ ಕಪ್ ಗೆಲ್ಲಲಿ ಅಥವಾ ಸೋಲಲಿ, ಆರ್‌ಸಿಬಿ ತಂಡಕ್ಕೆ ಮಾತ್ರ ಬೆಂಬಲವು ಜಾಸ್ತಿ ಆಗ್ತಾನೆ ಇದೆ. ಅದರಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳು ಸಹಜವಾಗಿ ಆರ್‌ಸಿಬಿಗೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಹೀಗಾಗಿ ಐಪಿಎಲ್ ಅಂದ್ರೆ ಆರ್‌ಸಿಬಿ ಎನ್ನುವ ಪರಿಸ್ಥಿತಿ, ಇದೀಗ ಎಲ್ಲೆಲ್ಲೂ ನಿರ್ಮಾಣ ಆಗುತ್ತಿದೆ. ಹಾಗೇ ಒಂದಲ್ಲ ಒಂದು ದಿನ ಆರ್‌ಸಿಬಿ ತಂಡವು ಕಪ್ ಗೆದ್ದೇ ಗೆಲ್ಲುತ್ತೆ, ಐಪಿಎಲ್ ಟೂರ್ನಿಯಲ್ಲಿ ಹವಾ ತೋರಿಸುತ್ತದೆ ಅಂತಿದ್ದಾರೆ ಫ್ಯಾನ್ಸ್.

ಸಂಕಷ್ಟದಲ್ಲಿ ಜೊತೆಗಿರುವ ಅಭಿಮಾನಿಗಳು!

'ಐಪಿಎಲ್' ಟೂರ್ನಿ ಭಾರತೀಯರ ಭಾವನೆಗಳ ಜೊತೆ ಬೆರೆತು ಹೋಗಿದೆ. ಹೀಗಾಗಿಯೇ ಐಪಿಎಲ್ ಶುರುವಾಯ್ತು ಅಂದ್ರೆ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಎಲ್ಲ ಪಂದ್ಯಕ್ಕೂ ಕಾಯ್ತಾರೆ. ಈಗಲೂ ಅಷ್ಟೇ ಐಪಿಎಲ್ ಟೂರ್ನಿ ಶುರುವಾಗಿದ್ದು ಆರ್‌ಸಿಬಿ ತಂಡಕ್ಕೆ ದೊಡ್ಡ ಸಪೋರ್ಟ್ ಸಿಕ್ಕಿದೆ. ಆದರೂ ಆರ್‌ಸಿಬಿ (RCB Team) ಸಾಲು ಸಾಲು ಪಂದ್ಯದಲ್ಲಿ ಸೋಲು ಅನುಭವಿಸಿ ಪರದಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಸಿಬಿ ತಂಡದ ಅಭಿಮಾನಿ ದೇವರುಗಳು ಆರ್‌ಸಿಬಿ ತಂಡಕ್ಕೆ ಧೈರ್ಯ ತುಂಬುತ್ತಾ ಮತ್ತೆ ತಮ್ಮ ತಂಡದ ಬೆನ್ನಿಗೆ ನಿಲ್ಲುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+