IPL 2025: ಈ 5 ಆಟಗಾರರಿಗೆ ಬರೋಬ್ಬರಿ 114 ಕೋಟಿ ರೂಪಾಯಿ ಖರ್ಚು!

2025ರ ಐಪಿಎಲ್ ಟೂರ್ನಿಗಾಗಿ ಹರಾಜು ಪ್ರಕ್ರಿಯೆ ಅಬ್ಬರದಿಂದ ಸಾಗಿದ್ದು, ಕೋಟಿ ಕೋಟಿ ಹಣ ಸುರಿದು ಇದೀಗ ಆಟಗಾರರನ್ನ ಖರೀದಿ ಮಾಡಿವೆ ಐಪಿಎಲ್ ತಂಡಗಳು. ಹೀಗೆ ಭಾರಿ ದೊಡ್ಡ ಮಟ್ಟದಲ್ಲಿ 2025ರ ಐಪಿಎಲ್ ಟೂರ್ನಿ ಸಂಚಲನ ಸೃಷ್ಟಿ ಮಾಡಿದೆ. ಹಾಗೇ ಭಾರತದ ನೆಲ ಕ್ರಿಕೆಟ್ ಆಟಕ್ಕೆ ಎಷ್ಟು ತಕ್ನನಾಗಿದೆ ಅನ್ನೋದನ್ನ ಇನ್ನೊಂದು ಬಾರಿ ಇಡೀ ಜಗತ್ತಿಗೇ ಸಾರಿ ಸಾರಿ ಹೇಳುತ್ತಿದೆ. ಅದರಲ್ಲೂ ಈ 5 ಆಟಗಾರರಿಗೆ ಬರೋಬ್ಬರಿ 114 ಕೋಟಿ ರೂಪಾಯಿ ಖರ್ಚು ಮಾಡಿದ್ದು ಏಕೆ ಐಪಿಎಲ್ ತಂಡಗಳ ಮಾಲೀಕರು?

ಐಪಿಎಲ್-2025 ಹಲವು ಕಾರಣಗಳಿಗೆ ಸುದ್ದಿಯಲ್ಲಿ ಇದ್ದು, ಹಣವನ್ನು ಹೊಳೆಯಂತೆ ಈಗ ಖರ್ಚು ಮಾಡಲಾಗುತ್ತಿದೆ. ಆಟಗಾರರಿಗೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ಐಪಿಎಲ್ ತಂಡಗಳ ಮಾಲೀಕರು, ತಮಗೆ ಬೇಕಾದ ಆಟಗಾರರನ್ನು ಹತ್ತಾರು ಕೋಟಿ ಕೋಟಿ ರೂಪಾಯಿ ಸುರಿದು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಈ 5 ಆಟಗಾರರಿಗೆ ಬರೋಬ್ಬರಿ 114 ಕೋಟಿ ರೂಪಾಯಿ ಖರ್ಚು ಮಾಡಿದ್ದು ಸಾಕಷ್ಟು ಗಮನ ಸೆಳೆದಿದೆ. ಹಾಗಾದ್ರೆ ಈ ರೀತಿ 114 ಕೋಟಿ ರೂಪಾಯಿ ಹಣ ಪಡೆದ ಆ 5 ಆಟಗಾರರು ಯಾರು? ಬನ್ನಿ ತಿಳಿಯೋಣ.

Discover How The Top 5 Players Got 114 Crore Rupees

5 ಆಟಗಾರರಿಗೆ 114 ಕೋಟಿ ಖರ್ಚು!

ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ ರಿಷಭ್ ಪಂತ್ ಲಖನೌ ತಂಡಕ್ಕೆ ಈಗ ಮಾರಾಟ ಆಗಿದ್ದು, 27 ಕೋಟಿ ರೂಪಾಯಿಗೆ ಮಾರಾಟ ಅಗಿದ್ದಾರೆ ರಿಷಭ್ ಪಂತ್. ಹಾಗೇ ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಇದು ಸಾಲದು ಎನ್ನುವಂತೆ ವೆಂಕಟೇಶ್ ಅಯ್ಯರ್ ಬರೋಬ್ಬರಿ 23.75 ಕೋಟಿ ರೂಪಾಯಿ ಭಾರಿ ಮೊತ್ತದೊಂದಿಗೆ ಕೊಲ್ಕತ್ತಾ ತಂಡದ ಪಾಲಾಗಿದ್ದಾರೆ.

ಬೌಲರ್‌ಗಳಿಗೆ 36 ಕೋಟಿ ರೂಪಾಯಿ!

ಭಾರತದ ಸೂಪರ್ ಬೌಲರ್ ಅಂತಾ ಹೆಸರು ಪಡೆಯುತ್ತಿರುವ ಹೊಸ ತಲೆಮಾರಿನ ಆಟಗಾರ ಅರ್ಷದೀಪ್ ಸಿಂಗ್‌ಗೆ ಭರ್ಜರಿ 18 ಕೋಟಿ ರೂಪಾಯಿ ನೀಡಲಾಗಿದೆ. ಪಂಜಾಬ್ ಕಿಂಗ್ಸ್ ಈ ಆಟಗಾರನಿಗೆ ಭರ್ಜರಿ 18 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಹಾಗೇ ಭಾರತದಲ್ಲಿ ಸ್ಪಿನ್ ಬೌಲಿಂಗ್ ಮುಂದಾಳತ್ವ ವಹಿಸುವಷ್ಟು ಹೆಸರು ಮಾಡಿ ಸೈಲೆಂಟ್ ಆಗಿದ್ದ ಬೌಲರ್ ಯಜುವೇಂದ್ರ ಚಹಲ್ ಕೂಡ 18 ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿದ್ದಾರೆ.

ಒಟ್ನಲ್ಲಿ ಈ ಮೂಲಕ ಟಾಪ್-5 ಆಟಗಾರರಿಗೆ ಬರೋಬ್ಬರಿ 114 ಕೋಟಿ ರೂಪಾಯಿ ಇದೀಗ ಖರ್ಚು ಮಾಡಲಾಗಿದೆ. ಹಾಗೇ ಮತ್ತೊಂದು ಕಡೆ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಇದೀಗ ನಡೆದಿದ್ದು, ಇಡೀ ಜಾಗತಿಕ ಕ್ರೀಡಾ ಕ್ಷೇತ್ರದ ಗಮನ ಐಪಿಎಲ್ ಮೇಲೆ ನೆಟ್ಟಿದೆ. ಈ ಮೂಲಕ ಭಾರತ ಮತ್ತೊಮ್ಮೆ ಕ್ರಿಕೆಟ್ ವಿಚಾರಕ್ಕೆ ಸುದ್ದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+