David Miller: ನನ್ನ ಕರಿಯರ್‌ಗೆ ಬಲವಾದ ಅಡಿಪಾಯ ಹಾಕಿದ್ದೇ ಆರ್‌ಸಿಬಿ: ಡೇವಿಡ್ ಮಿಲ್ಲರ್

David Miller: ಐಪಿಎಲ್‌ನಲ್ಲಿ ಆರ್‌ಸಿಬಿಯು ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು, ರಜತ್ ಪಾಟೀದಾರ್ ನಾಯಕತ್ವದಲ್ಲಿ ಸತತ ಎರಡೂ ಬಾರಿ ಟ್ರೋಫಿ ಗೆದ್ದು ಚಾಂಪಿಯನ್‌ ಆಗಿದೆ. ಇದೀಗ ಈ ಟೀಮ್ ಬಗ್ಗೆ ಡೇವಿಡ್ ಮಿಲ್ಲರ್ ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಡೇವಿಡ್ ಮಿಲ್ಲರ್ 2013ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬಾರಿಸಿದ ಅಜೇಯ 101 ರನ್‌ಗಳ ಭರ್ಜರಿ ಇನ್ನಿಂಗ್ಸ್ ಅನ್ನು ತಮ್ಮ ಕ್ರಿಕೆಟ್ ವೃತ್ತಿಜೀವನದ ಅತ್ಯಂತ ತೃಪ್ತಿದಾಯಕ ಮತ್ತು ಮರೆಯಲಾಗದ ಸಾಧನೆ ಎಂದು ಹೇಳಿಕೊಂಡಿದ್ದಾರೆ. ತೀವ್ರ ಒತ್ತಡದಲ್ಲಿದ್ದಾಗ ಚೇಸಿಂಗ್ ವೇಳೆ ಬಂದ ಈ ಶತಕವೇ ತಮ್ಮ ವೃತ್ತಿಜೀವನಕ್ಕೆ ಬಲವಾದ ಅಡಿಪಾಯ ಹಾಕಿಕೊಟ್ಟಿತು ಎಂದು ಅವರು ಹೇಳಿದ್ದಾರೆ.

David Miller Reveals His Most Memorable IPL Knock Against RCB Statement Goes Viral on social media

ಡೇವಿಡ್ ಮಿಲ್ಲರ್ ಹೇಳಿಕೆ ಭಾರಿ ವೈರಲ್

'ದಿ ಹಂಡ್ರೆಡ್ 2026' ಟೂರ್ನಿಯಲ್ಲಿ ಸದರ್ನ್ ಬ್ರೇವ್ ತಂಡದ ಪರ ಆಡುತ್ತಿರುವ 37 ವರ್ಷದ ಮಿಲ್ಲರ್, ಜಿಯೋಸ್ಟಾರ್ ಜೊತೆ ಮಾತನಾಡಿ ತಮ್ಮ ಐಪಿಎಲ್ ಪಯಣದ ವಿಶೇಷ ನೆನಪುಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. ಇವರು ನಿಡಿದ ಹೇಳಿಕೆ ಇದೀಗ ಸಾಮಾಜಿಲ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

2013ರ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಪರ ಆಡಿದ್ದ ಮಿಲ್ಲರ್, ಆರ್‌ಸಿಬಿ ನೀಡಿದ್ದ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಕೇವಲ 38 ಎಸೆತಗಳಲ್ಲಿ ಅಜೇಯ 101 ರನ್ ಸಿಡಿಸಿ ಪಂಜಾಬ್‌ಗೆ ರೋಚಕ ಜಯ ತಂದುಕೊಟ್ಟಿದ್ದರು.

ಡೇವಿಡ್ ಮಿಲ್ಲರ್ ಹೇಳಿದ್ದೇನು?

ಈ ಕುರಿತು ಮಾತನಾಡಿದ ಮಿಲ್ಲರ್, 'ಆರ್‌ಸಿಬಿ ವಿರುದ್ಧ ಗಳಿಸಿದ 101 ರನ್‌ಗಳ ಇನ್ನಿಂಗ್ಸ್ ನನಗೆ ಅತ್ಯಂತ ಹೆಮ್ಮೆ ತಂದಿದೆ. ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ಬಂದ ನನ್ನ ಮೊದಲ ಐಪಿಎಲ್ ಹಾಗೂ ಟಿ20 ಶತಕ ಅದಾಗಿತ್ತು. ಆ ಪಂದ್ಯದಲ್ಲಿ ಸಾಕಷ್ಟು ಸವಾಲುಗಳಿದ್ದವು ಮತ್ತು ನನ್ನ ಕ್ರಿಕೆಟ್ ವೃತ್ತಿಜೀವನಕ್ಕೆ ಆ ಇನ್ನಿಂಗ್ಸ್ ಅಡಿಪಾಯವಾಯಿತು. ಇದರ ಜೊತೆಗೆ ಡರ್ಬನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲೂ ಚೇಸಿಂಗ್ ವೇಳೆ ನಾನು 118 ರನ್ ಗಳಿಸಿದ್ದೆ. ಈ ಎರಡೂ ಶತಕಗಳು ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದವು,' ಎಂದು ಸ್ಮರಿಸಿದ್ದಾರೆ.

'ಫಿನಿಶರ್ ಪಾತ್ರದ ಬಗ್ಗೆ ಹೆಮ್ಮೆಯಿದೆ'

ಟಿ20 ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಪಂದ್ಯಗಳನ್ನು ಮುಗಿಸುವ ಕಲೆ ಅತ್ಯಂತ ಕಷ್ಟಕರವಾದದ್ದು. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿರುವುದಕ್ಕೆ ತಮಗೆ ಹೆಮ್ಮೆಯಿದೆ ಎಂದು ಡೇವಿಡ್‌ ಮಿಲ್ಲರ್ ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

2012ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಡೇವಿಡ್‌ ಮಿಲ್ಲರ್, ಈವರೆಗೆ ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟನ್ಸ್, ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೇರಿದಂತೆ ಪ್ರಮುಖ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಆವೃತ್ತಿಗಳನ್ನು ಆಡಿದ ದಕ್ಷಿಣ ಆಫ್ರಿಕಾದ ಆಟಗಾರ ಎಂಬ ದಾಖಲೆಯೂ ಇವರ ಹೆಸರಿನಲ್ಲಿದೆ.

ಟ್ರೋಫಿ ಎತ್ತಿದ ಸಂಭ್ರಮ ನೆನೆಪಿಸಿಕೊಂಡ ಮಿಲ್ಲರ್

ಐಪಿಎಲ್‌ನಲ್ಲಿ ತಮ್ಮ ಅತ್ಯಂತ ನೆಚ್ಚಿನ ಕ್ಷಣ ಯಾವುದು ಎಂದು ಕೇಳಿದಾಗ, 2022ರ ಚೊಚ್ಚಲ ಆವೃತ್ತಿಯಲ್ಲೇ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಕ್ಷಣವನ್ನು ಅವರು ನೆನಪಿಸಿಕೊಂಡಿದ್ದಾರೆ. ಆ ಸೀಸನ್‌ನಲ್ಲಿ ಗುಜರಾತ್ ತಂಡದ ಪರ ಮಿಲ್ಲರ್ ಮಧ್ಯಮ ಕ್ರಮಾಂಕದಲ್ಲೊ ಬಂದು ಸ್ಫೋಟಕ ಬ್ಯಾಟಿಂಗ್ ಆಡಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.

ಐಪಿಎಲ್‌ನಲ್ಲಿ ಮಿಲ್ಲರ್ ಸಾಧನೆ

* ಐಪಿಎಲ್: 152 ಪಂದ್ಯಗಳಲ್ಲಿ 3,288 ರನ್‌ಗಳು

*2013 ರಲ್ಲಿ ಆರ್‌ಸಿಬಿ ವಿರುದ್ಧ 38 ಎಸೆತಗಳಲ್ಲಿ ಅಜೇಯ 101 ರನ್.

* 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡ ಟ್ರೋಫಿ ಗೆದ್ದಿದ್ದು, ಇದು ಅವರು ಮರೆಯಲಾಗದ ಸಂತಸದ ಕ್ಷಣಗಳಲ್ಲಿ ಒಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+