World Chess Championship: ಕಿರಿಯ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್; ಹೊಸ ದಾಖಲೆ ಬರೆದ ಡಿ ಗುಕೇಶ್
ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಹೆಮ್ಮೆಯ ಹುಡುಗ ಡಿ. ಗುಕೇಶ್ ಹೊಸ ವಿಶ್ವ ದಾಖಲೆ ಮಾಡಿದ್ದಾರೆ. ಡಿ ಗುಕೇಶ್ ಮತ್ತು ಡಿಂಗ್ ಲಿರೆನ್ ನಡುವೆ ಫೈನಲ್ ಪಂದ್ಯದಲ್ಲಿ ಗುಕೇಶ್ ಗೆಲುವು ಸಾಧಿಸುವ ಮೂಲಕ ಹೊಸ ವಿಶ್ವ ಚೆಸ್ ಚಾಂಪಿಯ್ ಆಗಿ ಹೊರಹೊಮ್ಮಿದ್ದಾರೆ. 14 ಸುತ್ತಿನ ರೋಚಕ ಹಣಾಹಣಿ ಬಳಿಕ ಡಿ ಗುಕೇಶ್ ಅಂತಿಮ ಪಂದ್ಯದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರು.
13 ಸುತ್ತಿನವರೆಗೆ ಸ್ಕೋರ್ ಸಮಬಲದಲ್ಲಿದ್ದರೂ 14ನೇ ಸುತ್ತಿನ ಅಂತಿಮ ಕ್ಷಣಗಳಲ್ಲಿ ಡಿ ಗುಕೇಶ್ ರೋಚಕ ಗೆಲುವು ಸಾಧಿಸಿದರು. ವಿಶ್ವನಾಥನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್ ಆದ ಎರಡನೇ ಭಾರತೀಯ ಚೆಸ್ ಆಟಗಾರ ಎನ್ನುವ ಇತಿಹಾಸ ನಿರ್ಮಿಸಿದ್ದಾರೆ. ರಷ್ಯಾದ ಶ್ರೇಷ್ಠ ಚೆಸ್ ಗ್ರ್ಯಾಂಡ್‌ಮಾಸ್ಟರ್ ಗ್ಯಾರಿ ಕಾಸ್ಪರೋವ್ ಅವರ ದಾಖಲೆಯನ್ನು ಮುರಿದ ಡಿ ಗುಕೇಶ್ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.

ಕೊನೆ ಕ್ಷಣದಲ್ಲಿ ಎಡವಿದ ಡಿಂಗ್
ಡಿಂಗ್ ಲಿರೆನ್ ಆತ್ಮ ವಿಶ್ವಾಸದೊಂದಿಗೆ ಆಟವನ್ನು ಆರಂಭಿಸಿದರು. ಇಬ್ಬರು ಆಟಗಾರರು ಎಚ್ಚರಿಕೆಯಿಂದ ಕಾಯಿಗಳನ್ನು ಮುನ್ನಡೆಸಿದರು. 14ನೇ ಸುತ್ತಿನಲ್ಲಿ ಡಿಂಗ್ ಮಾಡಿದ ತಪ್ಪೊಂದು ಡಿ ಗುಕೇಶ್‌ಗೆ ವರದಾನವಾಯಿತು. ಡಿಂಗ್ ಮಾಡಿದ ತಪ್ಪನ್ನು ಸರಿಯಾಗಿ ಬಳಸಿಕೊಂಡ ಡಿ ಗುಕೇಶ್ ಆಟದಲ್ಲಿ ಮೇಲುಗೈ ಸಾಧಿಸಿದರು.
48ನೇ ನಡೆಯಲ್ಲಿ ಗುಕೇಶ್ ಆಕ್ರಮಣಕಾರಿಯಾಗಿ ಕಾಯಿಗಳನ್ನು ಮುನ್ನಡೆಸಿದರು. ಡಿಂಗ್ ರಕ್ಷಣಾತ್ಮಕ ಆಟಕ್ಕೆ ಮುಂದಾದರು, ಆದರೆ ಈ ಲೆಕ್ಕಾಚಾರದಲ್ಲಿ ಡಿಂಗ್ ಎಡವಿದ್ದು ಡಿ ಗುಕೇಶ್‌ಗೆ ವರದಾನವಾಯಿತು. ಇಡೀ ಪಂದ್ಯದಲ್ಲಿ ಗುಕೇಶ್ ಶಾಂತವಾಗಿ ತಮ್ಮ ಆಟವನ್ನು ಆಡಿದರು.
ಡಿ ಗುಕೇಶ್ 18ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಸೆರ್ಗೆಯ್ ಕರ್ಜಾಕಿನ್ ಅವರ ದಾಖಲೆಯನ್ನು ಡಿ ಗುಕೇಶ್ ಮುರಿದಿದ್ದಾರೆ. ಭಾರತದ ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಗುಕೇಶ್‌ರನ್ನು ಶ್ಲಾಘಿಸಿದ್ದಾರೆ. ಈ ಗೆಲುವು ಭಾರತದ ಉದಯೋನ್ಮುಕ ಚೆಸ್ ಆಟಗಾರರಿಗೆ ಹೊಸ ವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದರು.












Click it and Unblock the Notifications