‘ಈ ಸಲ ಕಪ್ ನಮ್ದೆ’ ಅಲ್ಲ, ‘ಈ ಸಲ ಕಪ್ ನಮ್ದೆನೇ’: ಸ್ಮೃತಿ ಮಂದಾನ ಕನ್ನಡಕ್ಕೆ ಕನ್ನಡಿಗರು ಫಿದಾ!

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹಿಂಗೆ ನಿನ್ನೆಯಿಂದಲೂ ಕನ್ನಡಿಗರ ಎದೆಯಲ್ಲಿ ಬರೀ ಆರ್‌ಸಿಬಿ ಹೆಸರೇ ಬಡಿದುಕೊಳ್ಳುತ್ತಿದೆ. 16 ವರ್ಷಗಳ ಕನ್ನಡಿಗರ ಕನಸನ್ನು ನಿನ್ನೆ ನಮ್ಮದೇ ಆರ್‌ಸಿಬಿ ಹುಡುಗಿಯರು ನಿಜ ಮಾಡಿದ್ದಾರೆ. ಹಿಗಿದ್ದಾಗ ಸ್ಮೃತಿ ಮಂದಾನ ಮಾತಿಗೆ ಮರುಳಾಗಿ ಆರ್‌ಸಿಬಿ ಫ್ಯಾನ್ಸ್ ಮಾತು ನಿಲ್ಲಿಸಿದ್ದಾರೆ. ಹಾಗಿದ್ರೆ ಇಲ್ಲಿ ಆಗಿದ್ದೇನು? ಸ್ಮೃತಿ ಮಂದಾನ ಈಗ ಹೇಳಿರುವ ಮಾತು ಏನು? ಕನ್ನಡಿಗರು ಖುಷಿಪಡಲು ಕಾರಣ ಏನು? ವಿಡಿಯೋ ನೋಡಲು ಮುಂದೆ ಓದಿ.

ನಿನ್ನೆ 'ದೆಹಲಿ ಕ್ಯಾಪಿಟಲ್ಸ್' ತಂಡದ ಎದುರಲ್ಲಿ, ನಮ್ಮ ಆರ್‌ಸಿಬಿ ತಂಡದ ಹುಡುಗಿಯರು ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇಡೀ ಜಗತ್ತೇ ಈಗ ಆರ್‌ಸಿಬಿ ಮಹಿಳಾ ತಂಡದ ಸಾಧನೆಯನ್ನ ಹೊಗಳುತ್ತಿದೆ. 2024ರ ಡಬ್ಲ್ಯೂಪಿಎಲ್ (WPL) ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಭಾರಿ ದೊಡ್ಡ ಅಂತರದ ಗೆಲುವನ್ನು ಸಾಧಿಸಿದೆ. ದೆಹಲಿ ತಂಡ ನೀಡಿದ್ದ 114 ರನ್‌ಗಳ ಸುಲಭದ ಗುರಿಯನ್ನು ಕೇವಲ 2 ವಿಕೆಟ್ ಕಳೆದುಕೊಂಡು ತಲುಪಿದ RCB ತಂಡ 8 ವಿಕೆಟ್ ಅಂತರದ ಗೆಲುವನ್ನು ಗಳಿಸಿದೆ. ಇದೇ ಸಮಯದಲ್ಲಿ ಅಪ್ಪಟ ಕನ್ನಡದಲ್ಲಿ ಮಾತನಾಡಿರುವ ಆರ್‌ಸಿಬಿ ಟೀಂ ಕ್ಯಾಪ್ಟನ್ ಸ್ಮೃತಿ ಮಂದಾನ, ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದರು. ಆ ವಿಡಿಯೋ ನೋಡಲು ಮುಂದೆ ಓದಿ.

Cricketer Smriti Mandhana Said A Surprise Thing About Ee Sala Cup Namde

'ಈ ಸಲ ಕಪ್ ನಮ್ದೆ' ಅಲ್ಲ...

ಆರ್‌ಸಿಬಿ ತಂಡವು ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ಗೆದ್ದು ಕಪ್ ಎತ್ತುವ ಕನಸು ನನಸಾದ ನಂತರ, ಆರ್‌ಸಿಬಿ ತಂಡದ ಕ್ಯಾಪ್ಟನ್ ಸ್ಮೃತಿ ಮಂದಾನ ಅವರು ಮಾತು ಆರಂಭಿಸಿದರು. ಈ ವೇಳೆ ಅವರು ನಮ್ಮ ಆರ್‌ಸಿಬಿ ತಂಡದ ಡೈಲಾಗ್ 'ಈ ಸಲ ಕಪ್ ನಮ್ದೆ' ಬಗ್ಗೆ ಪ್ರಸ್ತಾಪ ಮಾಡಿದರು. ಹಾಗಾದರೆ, ಆರ್‌ಸಿಬಿ ಅಭಿಮಾನಿಗಳ 'ಈ ಸಲ ಕಪ್ ನಮ್ದೆ' ಡೈಲಾಗ್ ಬಗ್ಗೆ ಕ್ಯಾಪ್ಟನ್ ಸ್ಮೃತಿ ಮಂದಾನ ಹೇಳಿದ್ದೇನು? ಕನ್ನಡದಲ್ಲಿ ಕನ್ನಡದ ಹುಡುಗ & ಹುಡುಗಿಯರಿಗೆ ಸ್ಮೃತಿ ಸಲಹೆ ಏನಾಗಿತ್ತು? ಮುಂದೆ ಓದಿ.

ಮೂಲತಃ ಕನ್ನಡದವರು ಅಲ್ಲದೇ ಇದ್ದರೂ ಸ್ಮೃತಿ ಮಂದಾನ ಮಾತ್ರ ಕನ್ನಡಿಗರ ಮನಸ್ಸು & ಅವರ ಪ್ರೀತಿಗೆ ಫಿದಾ ಆಗಿದ್ದಾರೆ. ಹೀಗಾಗಿಯೇ ಕನ್ನಡ ನಾಡಿನ ಕ್ರಿಕೆಟ್ ಅಭಿಮಾನಿಗಳನ್ನ ಉದ್ದೇಶಿಸಿ ಮಾತನಾಡಿದ ಅವರು 'ಈ ಸಲ ಕಪ್ ನಮ್ದೆ ಅಲ್ಲ, ಈ ಸಲ ಕಪ್ ನಮ್ದೆನೇ..' ಎಂದರು. ಈ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ಕನ್ನಡದಲ್ಲೇ ಮಾತನಾಡಿ ವಿಶ್ ಮಾಡಿ ಮನಸ್ಸು ಗೆದ್ದರು. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಆ ವಿಡಿಯೋ ಇಲ್ಲಿದೆ...

ಹೇಗಿತ್ತು ನಿನ್ನೆಯ ಮ್ಯಾಚ್?

2024ರ ಡಬ್ಲ್ಯೂಪಿಎಲ್ (WPL) ಫೈನಲ್ ಪಂದ್ಯದಲ್ಲಿ, ಆರ್‌ಸಿಬಿ ತಂಡದ ಆರಂಭ ತುಂಬಾನೇ ಕಷ್ಟದಿಂದ ಕೂಡಿತ್ತು. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್ನಿಂಗ್ಸ್ ಆರಂಭಿಸಿದ ನಾಯಕಿ ಮೆಗ್ ಲ್ಯಾನಿಂಗ್ & ಶಫಾಲಿ ವರ್ಮಾ ಪವರ್‌ ಪ್ಲೇ ಓವರ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಈ ಜೋಡಿಯು ಮೊದಲನೇ ವಿಕೆಟ್‌ಗೆ ಕೇವಲ 7 ಓವರ್‌ಗಳಲ್ಲಿ 64 ರನ್‌ನ ಚಚ್ಚಿ ಬಿಸಾಡಿತ್ತು. ಆದರೆ 8ನೇ ಓವರ್‌ ಎಸೆಯಲು ಬಂದ ಸೋಫಿ ಮೊಲಿನೆಕ್ಸ್ ತಮ್ಮ ಮೊದಲ ಎಸೆತದಲ್ಲೇ ಭರ್ಜರಿ ಆಟಗಾರ್ತಿ ಶಫಾಲಿ ವರ್ಮಾ ವಿಕೆಟ್ ಉರುಳಿಸಿದರು.

ಶಫಾಲಿ ವರ್ಮಾ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್‌ ಸೇರಿ 44 ರನ್‌ಗಳನ್ನ ಬಾರಿಸಿ ಔಟಾದ ಬಳಿಕ ಕೇವಲ 25 ರನ್ ಗಳಿಸುವ ಒಳಗೆ ಬರೋಬ್ಬರಿ 7 ವಿಕೆಟ್ ಕಳೆದುಕೊಂಡು ದೆಹಲಿ ಕ್ರಿಕೆಟ್ ತಂಡ ನರಳಾಡಿತು. ಆಗ ಇನ್ನೆನು ದೆಹಲಿ ಟೀಂ ಕಂಬ್ಯಾಕ್ ಮಾಡಿ ಆರ್‌ಸಿಬಿಗೆ ಸವಾಲಿನ ಮೊತ್ತ ಕೊಡಲಿದೆ ಎನ್ನುವಷ್ಟರಲ್ಲೇ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸಾಲು ಸಾಲು ವಿಕೆಟ್‌ನ ಉರುಳಿಸಿದ್ರು. ಈ ಮೂಲಕ ದೆಹಲಿ ತಂಡವನ್ನ ಮಕಾಡೆ ಮಲಗುವಂತೆ ಮಾಡಿದ್ರು. ಈ ಅಲ್ಪ ಮೊತ್ತದ ಸವಾಲನ್ನು ನಮ್ಮ ಆರ್‌ಸಿಬಿ ಸುಲಭವಾಗಿ ಬೆನ್ನತ್ತಿ ಗುರಿ ಮುಟ್ಟಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+