• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದಲ್ಲಿ ಅತಿಹೆಚ್ಚು ರನ್; ಸೂರ್ಯಕುಮಾರ್ ಯಾದವ್ ದಾಖಲೆ

|
Google Oneindia Kannada News

ತಿರುವನಂತಪುರಂ, ಸೆ. 29: ನಿನ್ನೆ ಬುಧವಾರ ನಡೆದ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ನಿರಾಯಾಸವಾಗಿ ಜಯಿಸಿದೆ. ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ಗಮನ ಸೆಳೆಯುವಂಥ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ವೇಳೆ ಯಾದವ್ ಹೊಸ ಭಾರತೀಯ ದಾಖಲೆ ಬರೆದರು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 33 ಬಾಲ್‌ನಲ್ಲಿ ಅಜೇಯ 50 ರನ್ ಭಾರಿಸಿದರು. ಕೆಎಲ್ ರಾಹುಲ್ ಜೊತೆ ಸೇರಿ ಭಾರತಕ್ಕೆ ಸರಣಿಯಲ್ಲಿ ಮುನ್ನಡೆ ತಂದುಕೊಟ್ಟರು..

ಸೂರ್ಯಕುಮಾರ್ ಯಾದವ್ ಕೆಲ ಮಹತ್ವದ ದಾಖಲೆಗಳನ್ನು ಸ್ಥಾಪಿಸಿದರು. ಒಂದೇ ಕ್ಯಾಲೆಂಡರ್ ವರ್ಷದಲ್ಲಿ, ಅಂದರೆ ಜನವರಿಯಿಂದ ಡಿಸೆಂಬರ್‌ವರೆಗಿನ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನಕ್ಕೆ ಏರಿದ್ದಾರೆ. ಶಿಖರ್ ಧವನ್ ದಾಖಲೆಯನ್ನು ಯಾದವ್ ಮುರಿದಿದ್ದಾರೆ.

ಭಾರತ-ಪಾಕಿಸ್ತಾನ ಕ್ರಿಕೆಟ್ ಕದನಕ್ಕೆ ಇಂಗ್ಲೆಂಡ್ ಆತಿಥ್ಯದ ಆಫರ್!ಭಾರತ-ಪಾಕಿಸ್ತಾನ ಕ್ರಿಕೆಟ್ ಕದನಕ್ಕೆ ಇಂಗ್ಲೆಂಡ್ ಆತಿಥ್ಯದ ಆಫರ್!

2018ರ ವರ್ಷದಲ್ಲಿ ಶಿಖರ್ ಧವನ್ 689 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಈ ವರ್ಷ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ 732 ರನ್ ಗಳಿಸಿದ್ದಾರೆ. ಆದರೆ, ವಿಶ್ವ ಕ್ರಿಕೆಟಿಗರ ಪೈಕಿ ಸೂರ್ಯಕುಮಾರ್ ಯಾದವ್ ಸದ್ಯ 4ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಇನ್ನೂ ಕೆಲ ಟಿ20 ಪಂದ್ಯಗಳು ನಡೆಯಲಿರುವ ಹಿನ್ನೆಲೆಯಲ್ಲಿ ಯಾದವ್‌ಗೆ ಇನ್ನಷ್ಟು ರನ್ ಗಳಿಸುವ ಅವಕಾಶಗಳಿವೆ.

ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್ ಗಳಿಸಿದ ಭಾರತೀಯರು
1) ಸೂರ್ಯಕುಮಾರ್ ಯಾದವ್ - 732 ರನ್ (ವರ್ಷ 2022)
2) ಶಿಖರ್ ಧವನ್ - 689 ರನ್ (ವರ್ಷ 2018)
3) ವಿರಾಟ್ ಕೊಹ್ಲಿ - 471 ರನ್ (ವರ್ಷ 2012)
4) ವಿರಾಟ್ ಕೊಹ್ಲಿ - 466 ರನ್ (ವರ್ಷ 2019)
5) ವಿರಾಟ್ ಕೊಹ್ಲಿ - 641 ರನ್ (ವರ್ಷ 2016)
6) ರೋಹಿತ್ ಶರ್ಮಾ - 424 ರನ್ (ವರ್ಷ 2021)
7) ಕೆಎಲ್ ರಾಹುಲ್ - 404 ರನ್ (ವರ್ಷ 2020)
8) ವಿರಾಟ್ ಕೊಹ್ಲಿ - 385 ರನ್ (ವರ್ಷ 2014)
9) ವಿರಾಟ್ ಕೊಹ್ಲಿ - 299 ರನ್ (ವರ್ಷ 2017)
10) ರೋಹಿತ್ ಶರ್ಮಾ - 128 ರನ್ (ವರ್ಷ 2015)

ವಿಶ್ವದಾಖಲೆಯೂ ಹೌದು

ಸೂರ್ಯಕುಮಾರ್ ಯಾದವ್ 732 ರನ್ ಗಳಿಸಲು 21 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. 2022ರಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ಕ್ರಿಕೆಟಿಗರಲ್ಲಿ ಯಾದವ್ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್ ಗಳಿಸಿದ ದಾಖಲೆವೀರರ ಪಟ್ಟಿಯಲ್ಲಿ ಯಾದವ್ ನಾಲ್ಕನೆ ಸ್ಥಾನದಲ್ಲಿದ್ದಾರೆ. 2021ರಲ್ಲಿ ಮೊಹಮ್ಮದ್ ರಿಜ್ವಾನ್ 1326 ರನ್ ಗಳಿಸಿದ್ದರು. ಆ ದಾಖಲೆಯನ್ನು ಅಳಿಸುವುದು ಕಷ್ಟಸಾಧ್ಯ.

ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಟಿ20 ರನ್ ಗಳಿಸಿದವರು
1) ಮೊಹಮ್ಮದ್ ರಿಜ್ವಾನ್ - 1326 ರನ್ (ವರ್ಷ 2021)
2) ಬಾಬರ್ ಅಜಂ - 939 ರನ್ (ವರ್ಷ 2021)
3) ಪೌಲ್ ಸ್ಟರ್ಲಿಂಗ್ - 748 ರನ್ (ವರ್ಷ 2019)
4) ಸೂರ್ಯಕುಮಾರ್ ಯಾದವ್ - 732 ರನ್ (ವರ್ಷ 2022)
5) ಕೆವಿನ್ ಓ ಬ್ರಿಯೆನ್ - 729 ರನ್ (ವರ್ಷ 2019)
6) ಮ್ಯಾಕ್ಸ್ ಓ ಡೌಡ್ - 702 ರನ್ (ವರ್ಷ 2019)
7) ಶಿಖರ್ ಧವನ್ - 689 ರನ್ (ವರ್ಷ 2018)
8) ಮಾರ್ಟಿನ್ ಗಪ್ಟಿಲ್ - 678 ರನ್ (ವರ್ಷ 2021)
9) ವಿರಾಟ್ ಕೊಹ್ಲಿ - 641 ರನ್ (ವರ್ಷ 2016)
10) ಬೆನ್ ಕೂಪರ್ - 637 ರನ್ (ವರ್ಷ 2019)

ಸೂರ್ಯಕುಮಾರ್ ಯಾದವ್ ಈಗ ಭಾರತೀಯ ಕ್ರಿಕೆಟ್‌ನ ಹೊಸ ಸೆನ್ಸೇಶನ್ ಎನಿಸಿದ್ದಾರೆ. ಬಹಳ ಸರಾಗವಾಗಿ ಸಿಕ್ಸರ್‌ಗಳನ್ನು ಭಾರಿಸಬಲ್ಲ ಅವರನ್ನು ಸಿಕ್ಸ್ ಮೆಷೀನ್ ಎಂದು ಅಭಿಮಾನಿಗಳು ಕರೆಯುತ್ತಾರೆ. ಎಬಿ ಡೀವಿಲಿಯರ್ಸ್‌ಗೆ ಹೋಲಿಸಿ ಮಿಸ್ಟರ್ 360 ಡಿಗ್ರಿ ಎಂದು ಅವರನ್ನ ಬಣ್ಣಿಸುತ್ತಾರೆ. ಅದಕ್ಕೆ ತಕ್ಕಂತೆ ಅವರು ಬಿಡುಬೀಸಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭರ್ಜರಿ ಫಾರ್ಮ್‌ನಲ್ಲಿರುವ ಅವರು ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಹೊಸ ಭರವಸೆ ಮೂಡಿಸಿದ್ದಾರೆ.

Cricket: Surya Kumar Yadav Record of Most T20 Runs In A Calendar Year

ನಿನ್ನೆ ತಿರುವನಂತಪುರಂನಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಗಳಿಸಿದ ಅಜೇಯ ಅರ್ಧಶತಕದಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿ ಇದ್ದವು. ಗೆಲ್ಲಲು 107 ರನ್‌ಗಳ ಸಾಧಾರಣ ಗುರಿಯನ್ನು ಭಾರತ 17ನೇ ಓವರ್‌ನಲ್ಲಿ ಮುಟ್ಟಿತು. ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ 3ನೇ ವಿಕೆಟ್‌ಗೆ 93 ರನ್‌ಗಳ ಮುರಿಯದ ಜೊತೆಯಾಟದಲ್ಲಿ ಭಾಗಿಯಾದರು.ಕೆಎಲ್ ರಾಹುಲ್ ಕೂಡ ಸಿಕ್ಸರ್ ಭಾರಿಸಿ ಅರ್ಧಶತಕ ಮುಟ್ಟಿದರು.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಇವೆ. ಇದಾದ ಬಳಿಕ ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.

(ಒನ್ಇಂಡಿಯಾ ಸುದ್ದಿ)

English summary
India vs South Africa 1st T20 match: Surya Kumar Yadav has hit most runs in a calendar year among Indian crickers. In 2022 T20 matches, he leads world cricketers with most runs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X