ಈ ಸಲ ಕಪ್ ಯಾರಿಗೆ? ಯಾವ ತಂಡದ ಪರ ಒಲವು ಇದೆ?

ಐಪಿಎಲ್ 2024 ಇನ್ನೇನು ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಇದೇ ಭಾನುವಾರ ಫೈನಲ್ ಮ್ಯಾಚ್ ನಡೆಯಲಿದೆ. ಆರ್‌ಸಿಬಿ ತಂಡ ರಾಜಸ್ಥಾನ ವಿರುದ್ಧ ಸೋತ ನಂತರ ಹೈದರಾಬಾದ್ ತಂಡದ ಎದುರು ರಾಜಸ್ಥಾನ ಮತ್ತೊಂದು ಎಲಿಮಿನೇಷನ್ ಮ್ಯಾಚ್ ಆಡಲಿದೆ. ನಾಳೆ ಅಂದ್ರೆ ಮೇ 24ಕ್ಕೆ ಈ ಪಂದ್ಯ ನಡೆಯಲಿದ್ದು, ಹೈದರಾಬಾದ್ VS ರಾಜಸ್ಥಾನ ನಡುವೆ ಗೆಲುವಿಗಾಗಿ ಹೋರಾಟ ಶುರುವಾಗಲಿದೆ. ಇಲ್ಲಿ ಗೆಲ್ಲುವವರು ನೇರ ಫೈನಲ್ ಪ್ರವೇಶ ಮಾಡಲಿದ್ದಾರೆ.

ಈಗಾಗಲೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 2024ರ ಐಪಿಎಲ್ ಟೂರ್ನಿಯ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಇದೀಗ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ನಾಳೆ ನಡೆಯಲಿರುವ ಪಂದ್ಯ, ಫೈನಲ್ ತಲುಪುವ ಮತ್ತೊಂದು ತಂಡವನ್ನು ನಿರ್ಧಾರ ಮಾಡಲಿದೆ. ಈಗಾಗಲೇ ಕೆಕೆಆರ್ ವಿರುದ್ಧ ಸೋಲು ಕಂಡಿರುವ ಹೈದರಾಬಾದ್ ಚಿಂತೆಯಲ್ಲಿ ಮುಳುಗಿದೆ ಹಾಗೂ ಆರ್‌ಆರ್‌ ಗೆಲುವಿನ ನಗೆ ಬೀರುವ ಹುಮ್ಮಸ್ಸಿನಲ್ಲಿದೆ.

Cricket Fans Are Discussing About Who Will Win The 2024 IPL Trophy

ಈಗಿನ ಟ್ರೆಂಡ್ ನೋಡುವುದಾದ್ರೆ ರಾಜಸ್ಥಾನ ತಂಡವು ಹೈದರಾಬಾದ್ ವಿರುದ್ಧ ಗೆಲಲ್ಲಿದ್ದು ಫೈನಲ್ ಪ್ರವೇಶ ಮಾಡಲಿದೆ ಅಂತಿದ್ದಾರೆ ಫ್ಯಾನ್ಸ್. ಆ ನಂತರ ಕೆಕೆಆರ್‌ & ಆರ್‌ಆರ್ ಮಧ್ಯೆ 2024ರ ಐಪಿಎಲ್ ಕಪ್‌ಗೆ ಭರ್ಜರಿ ಫೈಟಿಂಗ್ ನಡೆಯಲಿದೆ. ಹಾಗಾದ್ರೆ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು? ಕೆಕೆಆರ್ ವಿರುದ್ಧ ರಾಜಸ್ಥಾನ ಅಥವಾ ಹೈದರಾಬಾದ್ ಟೀಂಗೆ ಗೆಲುವು ಸುಲಭವಾಗಿ ಸಿಗಲಿದೆಯಾ? ಮುಂದೆ ಓದಿ.

ಕೊಲ್ಕತ್ತಾ VS ರಾಜಸ್ಥಾನ ಫೈಟ್?

ಈಗಾಗಲೇ ಬಹುತೇಕ ಅಭಿಮಾನಿಗಳು ಕೊಲ್ಕತ್ತಾ VS ರಾಜಸ್ಥಾನ ನಡುವೆ ಫೈನಲ್ ಮ್ಯಾಚ್ ನಡೆಯೋದು ಪಕ್ಕಾ ಅಂತಿದ್ದಾರೆ. ಅಕಸ್ಮಾತ್ ನಾಳೆ ಹೈದರಾಬಾದ್ ಸೋತು, ಈ ಮಾತು ನಿಜವಾದರೆ ಮುಂದೆ ಏನಾಗಬಹುದು? ಯಾರ ಪಾಲಿಗೆ ಐಪಿಎಲ್ ಟ್ರೋಫಿ ಸಿಗಲಿದೆ? ಎಂಬ ಚರ್ಚೆ ಕೂಡ ಶುರುವಾಗಿದೆ. ಆದರೆ ಈಗಿರುವ ಟ್ರೆಂಡ್ ನೋಡುವುದಾದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಯಾಕೆ ಅಂದ್ರೆ ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿರುವ ಪ್ರದರ್ಶನ ಅತ್ಯುತ್ತಮ ಎನ್ನಬಹುದು. ಅಲ್ಲದೆ ಟೇಬಲ್ ಟಾಪರ್ ಆಗಿದ್ದ ಕೊಲ್ಕತ್ತಾ ತಂಡ ಸಲೀಸಾಗಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.

ಆರ್‌ಸಿಬಿ ತಂಡಕ್ಕೆ ರೋಚಕ ಸೋಲು

ಸತತ ಗೆಲುವಿನ ಖುಷಿ ನಡುವೆ ಆರ್‌ಸಿಬಿ ತಂಡ ಎಲಿಮಿನೇಷನ್ ಮ್ಯಾಚ್ ಆಡಿ ಸೋತಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದ್ದರೂ, ರಾಜಸ್ಥಾನ ವಿರುದ್ಧ ಸೋತ ಆರ್‌ಸಿಬಿ ತಂಡಕ್ಕೆ ಬೆನ್ನು ತಟ್ಟಿದ್ದಾರೆ. ಅಲ್ಲದೆ ಸೋಲು & ಗೆಲುವು ಮಾಮೂಲು, ನಾವು ಎಂದೆಂದಿಗೂ ಆರ್‌ಸಿಬಿ ಪರ ಅಂತಿದ್ದಾರೆ ಫ್ಯಾನ್ಸ್. ಆದರೂ ನಿನ್ನೆ ಆರ್‌ಸಿಬಿ ಬೆಂಗಳೂರು ತಂಡ ಗೆಲುವು ಸಾಧಿಸಿದ್ದರೆ ಈ ಬಾರಿ ಐಪಿಎಲ್ ಟೂರ್ನಿಗೆ ದೊಡ್ಡ ತಿರುವು ಸಿಗುತ್ತಿತ್ತು. ಪ್ರಮುಖವಾಗಿ ನಾಳೆ ಹೈದರಾಬಾದ್ ವಿರುದ್ಧ ಆರ್‌ಸಿಬಿ ಮ್ಯಾಚ್ ಆಡುತ್ತಿತ್ತು. ಆದರೆ ಈಗ ಅದು ಕನಸಾಗಿಯೇ ಉಳಿಯಲಿದೆ ಅಷ್ಟೇ. ಆರ್‌ಸಿಬಿ ಜಾಗದಲ್ಲಿ ರಾಜಸ್ಥಾನ ತಂಡ ನಾಳೆ ಹೈದರಾಬಾದ್ ವಿರುದ್ಧ ಮ್ಯಾಚ್ ಆಡಲಿದೆ.

Cricket Fans Are Discussing About Who Will Win The 2024 IPL Trophy

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+