ಪ್ರೇಯಸಿ ಕೊಂದು ಜೈಲುವಾಸಿಯಾದ ಬ್ಲೇಡ್ ರನ್ನರ್ ಪಿಸ್ಟೋರಿಸ್‌ಗೆ ಪೆರೋಲ್?
ಪ್ರಿಟೋರಿಯಾ, ನವೆಂಬರ್ 09: ಪ್ರೇಮಿಗಳ ದಿನದಂದೇ ತನ್ನ ಗೆಳತಿಯನ್ನು ಕೊಂದ ಆರೋಪ ಹೊತ್ತು ಅಪರಾಧಿ ಎನಿಸಿಕೊಂಡ 'ಬ್ಲೇಡ್ ರನ್ನರ್' ಆಸ್ಕರ್ ಪಿಸ್ಟೋರಿಸ್ ಸದ್ಯ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಜೈಲು ಶಿಕ್ಷೆ ಪ್ರಮಾಣದ ಅರ್ಧ ಅವಧಿ ಕಳೆದಿರುವುದರಿಂದ ಅವರು ಪೆರೋಲ್ ಪಡೆಯಲು ಅರ್ಹರಾಗಿದ್ದಾರೆ ಎಂಬ ವರದಿ ಬಂದಿದೆ.
ಒಲಿಂಪಿಕ್ ಚಿನ್ನದ ಪದಕ ವಿಜೇತ ಆಸ್ಕರ್ ಪಿಸ್ಟೋರಿಸ್ ಅವರನ್ನು ಅಪರಾಧಿ ಎಂದು ಪ್ರಿಟೋರಿಯಾ ನ್ಯಾಯಾಲಯವು 2018ರಲ್ಲಿ ಘೋಷಿಸಿತ್ತು. ಆಸ್ಕರ್ ಅವರು ಉದ್ದೇಶಪೂರ್ವಕವಾಗಿ ಕೊಲೆ ಮಾಡಿಲ್ಲ, ಆಕಸ್ಮಿಕವಾಗಿ ನಡೆದ ಹತ್ಯಾ ಪ್ರಕರಣ ಎಂದು ನ್ಯಾಯಾಲಯ ಪರಿಗಣಿಸಿ 6 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಿತ್ತು.
ಪ್ರಿಟೋರಿಯಾ ನ್ಯಾಯಾಲಯ ಮಹಿಳಾ ಜಡ್ಜ್ ಥೊಕೊಳಿಲೆ ಮಸಿಪಾ ಅವರು ಸುದೀರ್ಘವಾದ ತೀರ್ಪು ನೀಡಿದ್ದು, 15 ವರ್ಷಗಳ ಕಾಲದ ಜೀವಾವಧಿ ಶಿಕ್ಷೆಯಿಂದ ಆಸ್ಕರ್ ಗೆ ಮುಕ್ತಿ ಸಿಕ್ಕಿದ್ದು, 6 ವರ್ಷಗಳ ಕಾಲ ಜೈಲಿನಲ್ಲಿರಬೇಕಾಗಿದೆ.
2013ರಂದು ಪ್ರೇಮಿಗಳ ದಿನದಂದು ಗೆಳತಿ ರೇವಾ ಸ್ಟೀನ್‌ಕ್ಯಾಂಪ್(30) ರನ್ನು ಕೊಂದ ಆರೋಪದ ಮೇಲೆ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಟ್ರಾಕ್ ಸ್ಟಾರ್ ಬ್ಲೇಡ್ ರನ್ನರ್ ಖ್ಯಾತಿ ವಿಕಲಚೇತನ ಆಸ್ಕರ್ ಪಿಸ್ಟೋರಿಯಸ್(28) 2014ರಲ್ಲೇ ಜೈಲು ಸೇರಿದ್ದರು. ದಕ್ಷಿಣ ಆಫ್ರಿಕಾದ ಕಾನೂನಿನ ಪ್ರಕಾರ ಜೈಲು ಶಿಕ್ಷೆಯ ಪೂರ್ಣಾವಧಿ ಅರ್ಧ ಕಾಲ ಜೈಲಿನಲ್ಲಿ ಕಳೆದಿದ್ದರೆ ಹಾಗೂ ಸನ್ನಡತೆ ಆಧಾರದ ಮೇಲೆ ಪೆರೋಲ್ ನೀಡಬಹುದಾಗಿದೆ. ಹೀಗಾಗಿ ಮುಂದಿನ ಜುಲೈ ವೇಳೆಗೆ ಪೆರೋಲ್ ಪಡೆದು ಜೈಲಿನಿಂದ ಹೊರಗೆ ಬರಬಹುದು ಎಂದು ಎಪಿ ವರದಿ ಮಾಡಿದೆ.

ಎರಡು ಕಾಲುಗಳಿಲ್ಲದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಪ್ರಿಟೋರಿಯಾದಲ್ಲಿರುವ ತನ್ನ ಮನೆಯಲ್ಲಿ ಗೆಳೆತಿ ಟಿವಿ ಸ್ಟಾರ್ ಹಾಗೂ ಎಫ್‌ಎಚ್‌ಎಂನ ಮಾಜಿ ರೂಪದರ್ಶಿ ರೀವಾ ಸ್ಟೀನ್‌ಕ್ಯಾಂಪ್ (30)ರನ್ನು ಫೆ.14, 2013ರಂದು ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಹೊತ್ತಿದ್ದರು. ಪಿಸ್ಟೋರಿಯಸ್ ಕೊಲೆಗೈಯುವ ಮೊದಲು ರೀವಾಗೆ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಬಾತ್‌ರೂಮ್‌ನಲ್ಲಿ ಯಾರೋ ಆಗಂತುಕರು ಇದ್ದಾರೆ ಎಂದು ಭಾವಿಸಿ ತಾನು ಗುಂಡು ಹಾರಿಸಿದ್ದಾಗಿ ವಿಚಾರಣೆ ವೇಳೆ ಪಿಸ್ಟೋರಿಯಸ್ ಹೇಳಿಕೊಂಡಿದ್ದರು. ಆದರೆ, ಪ್ರಿಯತಮೆ ಜೊತೆ ವಾಗ್ವಾದದ ವೇಳೆ ಆತ ಗುಂಡು ಹಾರಿಸಿದ್ದಾಗಿ ಸರಕಾರಿ ವಕೀಲರು ವಾದಿಸಿದ್ದರು. ಕೊನೆಗೆ 5 ವರ್ಷಗಳ ಶಿಕ್ಷೆ ಪಡೆದು ಜೈಲುಪಾಲಾಗಿದ್ದರು. ಆಸ್ಕರ್ ಗೆ ಜೀವಾವಧಿ ಶಿಕ್ಷೆ ಕೋರಿ ರೀವಾ ಸಂಬಂಧಿಕರು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಬಳಿಕ ತೀರ್ಪು ಹೊರಬಂದಿದೆ.ಈ ನಡುವೆ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಪ್ರಕರಣದಿಂದ ಮುಕ್ತಿ ಸಿಕ್ಕಿದೆ.
ಆಸ್ಕರ್ ಗೆ ವ್ಯಾಲೆಂಟೈನ್ಸ್ ಡೇ ಸರ್ಫ್ರೈಜ್ ಗಿಫ್ಟ್ ತರಲು ಶಾಪಿಂಗ್ ಹೋಗಿದ್ದ ರೀವಾ, ಕಳ್ಳ ಹೆಜ್ಜೆ ಇಡುತ್ತಾ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಶಬ್ದವಾಗಿದ್ದನ್ನು ಕೇಳಿಸಿಕೊಂಡ ಆಸ್ಕರ್ ಹಿಂದು ಮುಂದು ನೋಡದೆ, ಕಳ್ಳರು ಮನೆಗೆ ನುಗ್ಗಿರಬಹುದು ಎಂಬ ಶಂಕೆಯಿಂದ ಆಕೆಯನ್ನು ನೋಡದೆ ಗುಂಡು ಹಾರಿಸಿದ್ದಾರೆ ಎಂದು ವರದಿ ಬಂದಿತ್ತ್ತು. ಆದರೆ, ಪೊಲೀಸ್ ವಕ್ತಾರರು ಯಾವುದೇ ಮಾಹಿತಿ ಹೊರ ಹಾಕಿಲ್ಲ. ಆಸ್ಕರ್ ಬಂಧನವನ್ನು ಮಾತ್ರ ಖಾತ್ರಿಪಡಿಸಿದ್ದರು.
Recommended Video
ಆಸ್ಕರ್ ಲಿಯನಾರ್ಡೊ ಕಾರ್ಲ್ ಪಿಸ್ಟೋರಿಸ್ ಒಬ್ಬ ಮಾದರಿ ಕ್ರೀಡಾಪಟು. ಅವರು ಕೃತಕ ಬಲಗಾಲು ಹೊಂದಿದ್ದು, ಬ್ಲೇಡ್ (double below-knee amputations) ಹಾಕಿಕೊಂಡೇ ಲಂಡನ್ ಒಲಿಂಪಿಕ್ಸ್ ನ ಭಾಗವಹಿಸಿದ್ದರು. ಅಂಗವೈಕಲ್ಯವಿದ್ದವರು ಪ್ಯಾರಾಲಂಪಿಕ್ಸ್ ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಮಾಮೂಲಿ. ಆದರೆ, ಆಸ್ಕರ್ ಅವರು ಎಲ್ಲರಂತೆ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ ವಿಶ್ವದ ಮೊಟ್ಟ ಮೊದಲ ಅಂಗವಿಕಲ ಕ್ರೀಡಾಪಟು, ಮೀ ದೂರವನ್ನು 46.88 ಸೆಂಕಡುಗಳಲ್ಲಿ ಮುಟ್ಟಿ ಚಿನ್ನ ಗೆದ್ದಿದ್ದರು












Click it and Unblock the Notifications