Chess World Cup 2023: ಚೆಸ್ ವಿಶ್ವಕಪ್: ಫೈನಲ್‌ಗೆ ಪ್ರವೇಶಿಸಿದ ನಮ್ಮ ಭಾರತೀಯ
ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಬಳಿಕ ಸೆಮಿಫೈನಲ್ಗೆ ಪ್ರವೇಶಿಸಿದ ಮೊದಲ ಭಾರತೀಯ ಚೆಸ್ ಚತುರ ಎಂಬ ಹೆಗ್ಗಳಿಕಗೆ ಪಾತ್ರವಾಗಿದ್ದ 18 ವರ್ಷದ ಆರ್. ಪ್ರಜ್ಞಾನಂದ ಇದೀಗ ಫೈನಲ್‌ಗೆ ಪ್ರವೇಶಿಸಿದ ಹಿರಿಮೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ 2ನೇ ಭಾರತೀಯ ಎಂಬ ದಾಖಲೆಯನ್ನು ತಮಿಳುನಾಡು ಮೂಲದ ರಮೇಶ್ ಬಾಬು ಪ್ರಜ್ಞಾನಂದ ನಿರ್ಮಿಸಿದ್ದಾರೆ.
ಹೌದು, ಈ ಮೊದಲು ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ 2000 ಹಾಗೂ 2002 ರಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಚೆಸ್ ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತದ ಆರ್ ಪ್ರಜ್ಞಾನಂದ ಅವರು ಸೋಮವಾರ ನಡೆದ ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಲು ಟೈಬ್ರೇಕರ್ ಮೂಲಕ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು.
ಭಾನುವಾರ ನಡೆದ ಸೆಮಿಫೈನಲ್ನ ಮೊದಲ ಗೇಮ್ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಭಾರತೀಯ ಪ್ರಜ್ಞಾನಂದ ಡ್ರಾ ಸಾಧಿಸಿದ್ದರು. ಇನ್ನು ಎರಡನೇ ಗೇಮ್ನಲ್ಲಿ ಫ್ಯಾಬಿಯಾನೊ ಕರುವಾನಾ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಟೈಬ್ರೇಕರ್ ಮೊರೆ ಹೋಗಬೇಕಾಯಿತು. ಇನ್ನೂ ಸೋಮವಾರ ಸೋಮವಾರ ನಡೆದ ಟೈಬ್ರೇಕರ್ನಲ್ಲಿ ಗೇಮ್ನಲ್ಲಿ ಪ್ರಜ್ಞಾನಂದ ಮೇಲೆ ಒತ್ತಡ ಹಾಕುವಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಚೆಸ್ ಪಟು ಫ್ಯಾಬಿಯಾನೊ ಕರುವಾನಾ ಯಶಸ್ವಿಯಾಗಿದ್ದರು.
2ನೇ ಟೈಬ್ರೇಕರ್ ಗೇಮ್ನಲ್ಲೂ ಜಾಣ ನಡೆ ಪ್ರದರ್ಶಿಸಿದ ಪ್ರಜ್ಞಾನಂದ ಫ್ಯಾಬಿಯಾನೊ ಕರುವಾನಾ ಅವರ ಗೆಲುವನ್ನು ತಡೆಯುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಪಂದ್ಯವು 10+10 ಟೈಬ್ರೇಕ್‌ನತ್ತ ಸಾಗಿತು. ಇದಾದ ಬಳಿಕ ಮೊದಲ ರ್ಯಾಪಿಡ್ ಟೈಬ್ರೇಕ್ ನಲ್ಲಿ ಜಯ ಸಾಧಿಸುವ ಮೂಲಕ ಪ್ರಜ್ಞಾನಂದ ಫ್ಯಾಬಿಯಾನೊ ಮೇಲೆ ಒತ್ತಡ ಹೇರಿದರು.
ಇನ್ನು ಫೈನಲ್ನಲ್ಲಿ ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಪ್ರಜ್ಞಾನಂದ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಗೆಲ್ಲುವ ಮೂಲಕ ಯುವ ಚೆಸ್ ಚತುರ ಪ್ರಜ್ಞಾನಂದ ಹೊಸ ಇತಿಹಾಸ ನಿರ್ಮಿಸಲಿದ್ದಾರಾ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications