Champions Trophy: ಪಾಕಿಸ್ತಾನದಲ್ಲಿ ಮೊಳಗಿತು ಭಾರತದ ರಾಷ್ಟ್ರಗೀತೆ: ಪಿಸಿಬಿ ಎಡವಟ್ಟು!

Champions Trophy: ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮಹಾ ಎಡವಟ್ಟೊಂದು ಸಂಭವಿಸಿದೆ. ಪಾಕಿಸ್ತಾನ ಇದೀಗ ಮಾಡಿಕೊಂಡಿರುವ ಎಡವಟ್ಟು ವಿಶ್ವದಾದ್ಯಂತ ನಗೆಪಾಟಿಲಿಗೆ ಗುರಿಯಾಗಿದೆ. 2025ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಈ ರೀತಿ ಇರುವಾಗಲೇ ಭಾರತದ ರಾಷ್ಟ್ರಗೀತೆಯನ್ನು ಹಾಕಲಾಗಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಟ್ರೋಫಿ ಪ್ರಾರಂಭವಾದಾಗಿನಿಂದಲೂ ಒಂದಿಲ್ಲೊಂದು ವಿಷಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವ ಪಾಕಿಸ್ತಾನವು ಶನಿವಾರವೂ ಇಂತಹದ್ದೇ ಒಂದು ಎಡವಟ್ಟನ್ನು ಮಾಡಿಕೊಂಡಿದೆ. ಈ ಎಡವಟ್ಟು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು. ಜನ ಇದಕ್ಕೆ ಹಲವು ಜೋಕ್ಸ್‌ಗಳನ್ನು ಕ್ರಿಯೇಟ್‌ ಮಾಡಿದ್ದಾರೆ.

ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಎಡವಟ್ಟೊಂದನ್ನು ಮಾಡಿಕೊಂಡಿದೆ. ಭಾರತ ಹಾಗೂ ಪಾಕಿಸ್ತಾನದ ಮ್ಯಾಚ್‌ಗೆ ಇನ್ನೊಂದು ದಿನ ಬಾಕಿ ಇರುವಾಗಲೇ ಭಾರತದ ರಾಷ್ಟ್ರಗೀತೆಯನ್ನು ಹಾಕಿದ್ದು. ಇದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಪಾಕಿಸ್ತಾನದ ಲಾಹೋರ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯ ನಡೆಯುವಾಗ ಆಗಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಗ್ರೂಪ್ ಬಿ ತಂಡದಲ್ಲಿ ಇರುವ ಆಸ್ಟ್ರೇಲಿಯಾ vs ಇಂಗ್ಲೆಂಡ್ ಪಂದ್ಯದ ಸಮಯದಲ್ಲಿ ಈ ಘಟನೆ ನೆಡೆದಿದೆ. ಇಲ್ಲಿನ ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಪಾಕಿಸ್ತಾನದ ಕ್ರಿಕೆಟ್‌ ಮಂಡಳಿ ಎಡವಟ್ಟು ಮಾಡಿಕೊಂಡಿದೆ.

Champions Trophy Indian National Anthem Played in Pakistan PCB Stumbles

ಶನಿವಾರ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾದ ನಡುವೆ ಮ್ಯಾಚ್‌ ನಡೆಯುತ್ತಿದೆ. ಮ್ಯಾಚ್‌ ಪ್ರಾರಂಭವಾಗುವುದಕ್ಕೂ ಮುಂಚೆ ಆಯಾ ದೇಶಗಳ ರಾಷ್ಟ್ರಗೀತೆಯನ್ನು ಹಾಕುವ ಸಂಪ್ರದಾಯ ಇದೆ. ಆದರೆ, ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಇಲ್ಲೊಂದು ಎಡವಟ್ಟು ಮಾಡಿದೆ. ಮ್ಯಾಚ್‌ ಪ್ರಾರಂಭವಾಗುವುದಕ್ಕೂ ಮುಂಚೆ ಇಂಗ್ಲೆಂಡ್‌ನ ರಾಷ್ಟ್ರಗೀತೆ ಹಾಕಲಾಗಿದೆ. ಆದರೆ, ಆಸ್ಟ್ರೇಲಿಯಾದ ರಾಷ್ಟ್ರಗೀತೆಯನ್ನು ಹಾಕುವ ಬದಲು ಭಾರತದ ರಾಷ್ಟ್ರಗೀತೆಯನ್ನು ಹಾಕಲಾಗಿದೆ. ಜನಗಣಮನ... ಭಾರತ ಭಾಗ್ಯ ವಿಧಾತ ಎನ್ನುವ ಸಾಲುಗಳು ಕೇಳಿಸಿದೆ! ಈ ತಪ್ಪನ್ನು ಪಾಕಿಸ್ತಾನ ಕೂಡಲೇ ತಿದ್ದುಕೊಂಡಿದೆಯಾದರೂ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಭಾರತಕ್ಕೆ ಇಂಗ್ಲೆಡ್‌ ಸೇರಿದ್ದು ಯಾವಾಗ!

ಇನ್ನು ಪಾಕಿಸ್ತಾನದ ಎಡವಟ್ಟಿಗೆ ಟ್ರೋಲ್‌ಗಳ ಸುರಿಮಳೆಯಾಗುತ್ತಿದ್ದು. ಜನ ಇವರಿಗೆ ಕಾಶ್ಮೀರ ಬೇಕಂತೆ ಅಂತ ವ್ಯಂಗ್ಯವಾಡಿದ್ದಾರೆ. ಇನ್ನೂ ಕೆಲವರು

ಇಂಗ್ಲೆಂಡ್ ದೇಶ ಭಾರತಕ್ಕೆ ಸೇರಿದ್ದು ಇಲ್ಲ ಭಾರತದ ಭಾಗವಾಗಿದ್ದು ಯಾವಾಗ ಅಂತ ಹಾಸ್ಯ ಮಾಡಿದ್ದಾರೆ.

ಭಾರತದ ಧ್ವಜವನ್ನು ಹಾರಿಸಿರಲಿಲ್ಲ ಪಾಕ್‌

ಈಚೆಗೆ ಪಾಕಿಸ್ತಾನವು ಭಾರತದ ವಿಚಾರದಲ್ಲಿ ಮತ್ತೊಂದು ಕಾರಣಕ್ಕೆ ಚರ್ಚೆಗೆ ಗುರಿಯಾಗಿತ್ತು. ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ರಲ್ಲಿ ಪಾಕಿಸ್ತಾನದ ಲಾಹೋರ್ ನ್ಯಾಷನಲ್ ಸ್ಟೇಡಿಯಂ ಮೇಲೆ ಈ ಟೂರ್ನಿಯಲ್ಲಿ ಆಡುತ್ತಿರುವ 8 ದೇಶಗಳ ರಾಷ್ಟ್ರಧ್ವಜವನ್ನು ಹಾರಿಸಬೇಕಿತ್ತು. ಆದರೆ, ಪಾಕಿಸ್ತಾನ ಈ ವಿಚಾರದಲ್ಲೂ ಕುತಂತ್ರ ಬುದ್ಧಿಯನ್ನು ಪ್ರರ್ದಶನ ಮಾಡಿತ್ತು. ಇಲ್ಲಿ ಭಾರತದ ಧ್ವಜವನ್ನೇ ಹಾರಿಸಿರಲಿಲ್ಲ. ಈ ವಿಷಯ ವಿವಾದಕ್ಕೆ ಕಾರಣವಾಗಿತ್ತು. ಈ ರೀತಿ ಮಾಡಿದ ಇದೇ ಪಾಕಿಸ್ತಾನ ಇಂದು ಮತ್ತೊಂದು ದೇಶದ ಪಂದ್ಯದಲ್ಲಿ ಭಾರತದ ರಾಷ್ಟ್ರಗೀತೆಯನ್ನು ಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+