Chamari Athapaththu: 139 ಎಸೆತ, 26 ಬೌಂಡರಿ, 5 ಸಿಕ್ಸರ್, 195 ರನ್, ಭರ್ಜರಿ ಬ್ಯಾಟಿಂಗ್: ಲಂಕಾ ದಾಖಲೆಯ ರನ್ ಚೇಸ್
ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಮಹಿಳಾ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯ ನಡೆದಿದೆ. ಈ ಪಂದ್ಯ ಹಲವು ಕಾರಣಗಳಿಗೆ ಇತಿಹಾಸದ ಪುಟ ಸೇರಿದೆ. ಈ ಪಂದ್ಯದಲ್ಲಿ ಲಂಕಾ ತಂಡ 6 ವಿಕೆಟ್‌ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 301 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಲಂಕಾ ವನಿತೆಯರು 44.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 305 ರನ್ ಸೇರಿಸಿದರು. ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದರಿಂದ ಸರಣಿ ಡ್ರಾ ಆಯಿತು.

ವೊಲ್ವಾರ್ಡ್ 184
ದಕ್ಷಿಣ ಆಫ್ರಿಕಾ ಮಹಿಳಾ ತಂಡದ ನಡುವೆ ನಡೆದ ಏಕದಿನ ಪಂದ್ಯದಲ್ಲಿ ಎರಡು ಶತಕಗಳು ದಾಖಲಾಗಿವೆ. ದಕ್ಷಿಣ ಆಫ್ರಿಕಾ ಪರ, ನಾಯಕಿ ವೊಲ್ವಾರ್ಡ್ 184 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ಶ್ರೀಲಂಕಾ ತಂಡದ ನಾಯಕ ಚಾಮರಿ ಅಟ್ಟಪಟ್ಟು ಆಫ್ರಿಕನ್ ಬೌಲರ್‌ಗಳನ್ನು ಕೆಣಕಿದರು. ಅವರು 139 ಎಸೆತಗಳಲ್ಲಿ 26 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 195 ರನ್ ಗಳಿಸಿ ತಂಡಕ್ಕೆ ಐತಿಹಾಸಿಕ ಜಯದ ಮಾಲೆ ತೊಡಿಸಿದರು.
ಇತಿಹಾಸ ಬರೆದ ಚಾಮರಿ
ಈ ಮೂಲಕ ಚಮಿರಾ ಅಟ್ಟಪಟ್ಟು ಅವರು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ ಕಲೆ ಹಾಕಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರಿಗೂ ಈ ಮೊದಲು ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಅಮೆಲಿಯಾ ಕೆರ್ ಇದ್ದಾರೆ. ಇವರು ಐರ್ಲೆಂಡ್ ವಿರುದ್ಧ 232 ರನ್ ದಾಖಲಿಸಿ ಸಾಧನೆ ಮಾಡಿದ್ದಾರೆ. ಆಸೀಸ್ ಬ್ಯಾಟರ್ ಬೆಲಿಂಡಾ ಕ್ಲಾರ್ಕ್ ಡೆನ್ಮಾರ್ಕ್ ವಿರುದ್ಧ ಅಜೇಯ 229 ರನ್ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಇಬ್ಬರೂ ಬ್ಯಾಟರ್ ಆದನಂತರ ಶ್ರೀಲಂಕಾದ ಚಾಮಿರಾ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟಪಟ್ಟು ಮಹಿಳಾ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದಿದ್ದಾರೆ. ಚಾಮರಿ ಅಟಪಟ್ಟು ಅವರು ದಕ್ಷಿಣ ಆಫ್ರಿಕಾ ವಿರುದ್ಧ 139 ಎಸೆತಗಳಲ್ಲಿ 195 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ವೇಳೆ ಚಾಮರಿ 26 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಬಾರಿಸಿದರು.
ಎರಡನೇ ಬಾರಿ 175 ರನ್ ಸಾಧನೆ
ಚಾಮರಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಬಾರಿ 175 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶ್ರೀಲಂಕಾ ನಾಯಕ 2017ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 178 ರನ್ ಗಳಿಸಿದ್ದರು. ಇದು 34 ವರ್ಷ ವಯಸ್ಸಿನ ಆಟಗಾರ್ತಿಯ 9 ನೇ ಏಕದಿನ ಶತಕವಾಗಿದೆ, ಇದನ್ನು ಶ್ರೀಲಂಕಾದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ಕೂಡ ಹೊಗಳಿದ್ದಾರೆ.
ಚಾಮರಿ ಯಾರು?
ಚಾಮರಿ ಅಟ್ಟಪಟ್ಟು ಫೆಬ್ರವರಿ 9, 1990 ರಂದು ಜನಿಸಿದರು. ಚಾಮರಿ ಶ್ರೀಲಂಕಾ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡದ ಹತ್ತನೇ ನಾಯಕಿ. ಫ್ರಾಂಚೈಸಿ ಕ್ರಿಕೆಟ್ ಆಡಿದ ಮೊದಲ ಶ್ರೀಲಂಕಾದ ಮಹಿಳೆ. ಲಂಕಾ ತಂಡದ ಸ್ಟಾರ್ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅವರು ಲಂಕಾ ತಂಡದ ಬ್ಯಾಟಿಂಗ್ ಬೆನ್ನೆಲಬು.












Click it and Unblock the Notifications