ಐಸಿಸಿ ವಿಶ್ವಕಪ್ ಲೀಗ್ ಅರ್ಹತಾ ಪಂದ್ಯ: ಕೆನಡಾ vs ನೆದರ್ಲ್ಯಾಂಡ್ಸ್ ಪಂದ್ಯಕ್ಕೆ ಮಳೆ ಅಡ್ಡಿ
ನಮೀಬಿಯಾದ ವಿಂಡೋಹಕ್‌ನಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಕಪ್ ಲೀಗ್ 2ನೇ ಹಂತದ 2024-27ರ 58 ನೇ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಕೆನಡಾ ಮತ್ತು ನೆದರ್ಲ್ಯಾಂಡ್ಸ್ ಈ ಪಂದ್ಯದಲ್ಲಿ ಮುಖಾಮುಖಿಯಾಗಲು ಕಾಯುತ್ತಿವೆ. ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಗಿದ್ದು ಮಳೆ ನಿಂತರೆ ಪಂದ್ಯ ನಡೆಯುವ ಸಾಧ್ಯತೆ ಇದೆ.
ಅಂಕಪಟ್ಟಿಯಲ್ಲಿ ಈಗಾಗಲೇ ಕೆನಡಾ ತಂಡವು ಎರಡನೇ ಸ್ಥಾನದಲ್ಲಿದ್ದು ನೆದರ್ಲ್ಯಾಂಡಸ್ ನಾಲ್ಕನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಪ ಪಡೆಯುವ ತಂಡಗಳು ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಅರ್ಹತೆ ಪಡೆಯಲಿವೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ ಲೀಗ್ 2 2027 ರಲ್ಲಿ ಮುಕ್ತಾಯಗೊಳ್ಳಲಿದ್ದು, ಮೊದಲ ನಾಲ್ಕು ಸ್ಥಾನ ಪಡೆಯಲು ಭಾರಿ ಪೈಪೋಟಿ ನಡೆಯುತ್ತಿದೆ. ಯುಎಸ್‌ಎ 16 ಪಂದ್ಯಗಳಲ್ಲಿ 11 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಒಮನ್ 16 ರಲ್ಲಿ 8 ಪಂದ್ಯ ಗೆದ್ದು 8 ರಲ್ಲಿ ಸೋತಿದ್ದು ಮೂರನೇ ಸ್ಥಾನದಲ್ಲಿದೆ.
ಕೆನಡಾ ವಿರುದ್ಧದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಗೆದ್ದರೆ ಮೂರನೇ ಸ್ಥಾನಕ್ಕೆ ಜಿಗಿಯಲಿದೆ. ಕ್ರಿಕೆಟ್ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ತಲಾ ನಾಲ್ಕು ಬಾರಿ ಪಂದ್ಯಾವಳಿಗೆ ಅರ್ಹತೆ ಪಡೆದ ಬಳಿಕ ಎದುರಾಗಿಲ್ಲ. 2027 ರ ಆವೃತ್ತಿಯ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಆಡುತ್ತಿದ್ದಾರೆ.












Click it and Unblock the Notifications