Ind vs Pak: ಟೀಂ ಇಂಡಿಯಾ ವಿರುದ್ಧ ಸೋತ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತ
India vs Pakistan: ಇತ್ತೀಚೆಗಷ್ಟೇ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ವಿರುದ್ಧ ಸೋಲನುಭವಿಸಿತ್ತು. ಈ ಮೂಲಕ ಪಾಕಿಸ್ತಾನ ಟೂರ್ನಿಯಿಂದಲೇ ಹೊರಬಿದ್ದಿದ್ದು, ಈ ಬೆನ್ನಲ್ಲೇ ಮತ್ತೊಂದು ದೊಡ್ಡ ಸಂಕಷ್ಟವೊಂದು ಎದುರಾಗಿದೆ. ಹಾಗಾದರೆ, ಆ ಆಘಾತ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪಾಕಿಸ್ತಾನ ತಂಡವು ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಮೊದಲು ನ್ಯೂಜಿಲೆಂಡ್ ಬಳಿಕ ಭಾರತದ ವಿರುದ್ಧ ಹೀನಾಯ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ಇದು ಪಿಸಿಬಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದ್ದು, ಇದರಿಂದಾಗಿ ಪಾಕ್ ತಂಡದ ಬ್ರ್ಯಾಂಡ್ ಮೌಲ್ಯ ಉಳಿಸಿಕೊಳ್ಳುವುದೇ ಕಷ್ಟಕರವಾದಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆ ಯಾರ ಬಳಿ ಕೇಳಿದರೂ ಕೂಡ ಕೆಟ್ಟ ಅಭಿಪ್ರಾಯಗಳೇ ಬರುತ್ತಿವೆ. ಅಷ್ಟೇ ಅಲ್ಲದೆ, ಆ ತಂಡದ ಸಾಮರ್ಥ್ಯದ ಮೇಲೆ ಜನರಿಗೆ ನಂಬಿಕೆ ಇಲ್ಲದಂತಾಗಿದೆ. ಮೈದಾನಗಳಲ್ಲಿ ಪ್ರೇಕ್ಷಕರ ಕೊರತೆ ಇರುವ ಭಾಗಗಳನ್ನೇ ನೇರ ಪ್ರಸಾರಕರು ತೋರಿಸುತ್ತಿದ್ದಾರೆ. ಇದರಿಂದ ಪಿಸಿಬಿ ಹಾಗೂ ಅದರ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧವೇ ಅಭಿಮಾನಿಗಳು ಕೆಂಡ ಕಾರುತ್ತಿದ್ದಾರೆ. ಆದ್ದರಿಂದ ತಂಡಕ್ಕೆ ಪ್ರಾಯೋಜಕರು, ಜಾಹೀರಾತುದಾರರನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ ಎಂದು ತಿಳಿದುಬಂದಿದೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಎನ 5ನೇ ಪಂದ್ಯದಲ್ಲಿ ಪಾಕಿಸ್ತಾನವ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗನ್ನು ಕಳೆದುಕೊಂಡು 241 ರನ್‌ಗಳನ್ನಷ್ಟೇ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 42.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 244 ರನ್‌ಗಳಿಸಿ ಪಂದ್ಯ ತನ್ನದಾಗಿಸಿಕೊಂಡಿತು. ವಿರಾಟ್ ಕೊಹ್ಲಿ ಅಮೋಘ ಶತಕದ ತಂಡಡ ಗೆಲುವಿಗೆ ಪ್ರಮುಖ ಪಾತ್ರವಾಯಿತು. ಯಾಕೆಂದರೆ ಎರಡನೇ ಕ್ರಮಾಂಕದಲ್ಲಿ ಬಂದು ಕೊನೆವರೆಗೂ ಹೋರಾಡಿ ತಂಡನ್ನು ಗೆಲುವಿನ ದಡ ಮುಟ್ಟಿಸಿದರು ಅಂದರೆ ತಪ್ಪಾಗಲಾರದು. ಅಲ್ಲದೆ, ಶ್ರೇಯಸ್ ಅಯ್ಯರ್, ಬೌಲರ್‌ಗಳ ಪಾತ್ರವೂ ಕೂಡ ಗೆಲುವಿದೆ ಅಷ್ಟೇ ಪ್ರಮುಖವಾಗಿದೆ.
ಪಾಕ್ ಪರ ಮೊದಲ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಜಂ (23) ಮತ್ತು ಇಮಾಮ್ ಉಲ್ ಹಕ್ (10) ಇಬ್ಬರೂ ಬೇಗನೆ ಪೆವಿಲಿಯನ್ ಸೇರಿಕೊಂಡರು. ಬಾಬರ್ ಆಜಂರನ್ನು ಹಾರ್ದಿಕ್ ಪಾಂಡ್ಯಾ ಔಟ್ ಮಾಡಿದರೆ, ಇಮಾಮ್ ಉಲ್ ಹಕ್‌ರನ್ನ ಅಕ್ಸರ್ ಪಟೇಲ್ ರನೌಟ್ ಮಾಡಿದರು. ನಂತರ ಕ್ರೀಸ್‌ಗಿಳಿದ ಸೌದ್ ಶಕೀಲ್ (62) ಅರ್ಧಶತಕ ಬಾರಿಸಿದರು. ಇವರಿಗೆ ನಾಯಕ ಮಹಮದ್ ರಿಜ್ವಾನ್ (46) ಉತ್ತಮ ಸಾಥ್ ನೀಡಿದರು. 3ನೇ ವಿಕೆಟ್‌ಗೆ 104 ರನ್‌ಗಳ ಜೊತೆಯಾಟ ಆಡಿದ್ದು, ಈ ಪೈಕಿ ಸೌದ್ ಶಕೀಲ್ ಹಾರ್ದಿಕ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರೆ, ಅಕ್ಸರ್ ಪಟೇಲ್ ರಿಜ್ವಾನ್ ಅನ್ನು ಬೌಲ್ಡ್ ಮಾಡಿದರು.
ಈ ಎರಡು ವಿಕೆಟ್ ಬಿದ್ದ ನಂತರ ಪಾಕಿಸ್ತಾನ ತಂಡದ ಪರ ಯಾವೊಬ್ಬ ಆಟಗಾರನು ಸಹ ಹೆಚ್ಚು ಸಮಯ ಕ್ರೀಸ್‌ನಲ್ಲಿರಲಿಲ್ಲ. ಕುಶ್ದಿಲ್ ಶಾ (38) ಕೊನೆಯಲ್ಲಿ ಮಿಂಚಿದರೂ ಇತರ ಆಟಗಾರರಿಂದ ಉತ್ತಮ ಸಾಥ್ ಸಿಗಲಿಲ್ಲ. ಆದ್ದರಿಂದ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಪಾಕಿಸ್ತಾನ ಆಲೌಟ್ ಆಯಿತು. ಭಾರತದ ಪರ ಕುಲದೀಪ್ ಯಾದವ್ 3, ಹಾರ್ದಿಕ್ ಪಾಂಡ್ಯಾ 2, ಹರ್ಷಿತ್ ರಾಣಾ, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದು ಗಮನ ಸೆಳೆದರು.
ಇನ್ನು ಪಾಕ್ ನೀಡಿದ 242 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಉತ್ತಮ ಆರಂಭ ನೀಡಿದರು. ರೋಹಿತ್ 20 ರನ್‌ಗೆ ಔಟಾದರು. ನಂತರ ಕೊಹ್ಲಿ ಜೊತೆ ಸೇರಿ ಬ್ಯಾಟಿಂಗ್ ಮಾಡಿದ ಗಿಲ್ 46 ರನ್ ಗಳಿಸಿ ಅಬ್ರಾರ್ ಅಹ್ಮದ್ ಬೌಲಿಂಗ್‌ನಲ್ಲಿ ಅವರು ಬೌಲ್ಡ್ ಔಟ್ ಆದರು. ಬಳಿಕ ಶ್ರೇಯಸ್ ಜೊತೆ ಸೇರಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಶ್ರೇಯಸ್ ಅಯ್ಯರ್ (56) ಅರ್ಧ ಶತಕ ಗಳಿಸಿ ಔಟಾದರು. ಇನ್ನೂ ಕೊನೆವರೆಗೂ ಕ್ರೀಸ್‌ನಲ್ಲಿದ್ದ ವಿರಾಟ್ 111 ಎಸೆತಗಳಲ್ಲಿ 7 ಬೌಂಡರಿ ಇದ್ದ 100 ರನ್ ಚಚ್ಚುವ ಮೂಲಕ ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ರು.












Click it and Unblock the Notifications