Ben Stokes: ಬೆನ್‌ ಸ್ಟೋಕ್ಸ್‌ಗೆ ಗಂಭೀರ ಗಾಯ; ಸಿಬ್ಬಂದಿ ಸಹಾಯದಿಂದ ಹೊರ ನಡೆದ ಆಲ್‌ರೌಂಡರ್

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ, ಸ್ಟಾರ್ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್ ಗಂಭೀರವಾಗಿ ಗಾಯಗೊಂಡಿದ್ದು, ಊರುಗೋಲಿನ ಸಹಾಯದಿಂದ ಮೈದಾನದಿಂದ ಹೊರನಡೆದಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಮುನ್ನ ಬೆನ್‌ ಸ್ಟೋಕ್ಸ್ ಗಾಯಗೊಂಡಿರುವುದು ತಂಡಕ್ಕೆ ಹೊಸ ತಲೆ ನೋವು ತಂದಿದೆ. ಈಗಾಗಲೇ ಸ್ಟೋಕ್ಸ್ ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಆಡುವಾಗ ಬೆನ್‌ ಸ್ಟೋಕ್ಸ್ ಗಾಯಗೊಂಡರು.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ಸ್ ಮೆನ್ಸ್ ಕಾಂಪಿಟೇಷನ್ 2024ರ ಪಂದ್ಯಾವಳಿಯಲ್ಲಿ ನಾರ್ಥನ್ ಸೂಪರ್ ಚಾರ್ಜರ್ಸ್ ತಂಡಕ್ಕಾಗಿ ಆಡುವ ಸಂದರ್ಭದಲ್ಲಿ ಬೆನ್‌ ಸ್ಟೋಕ್ಸ್ ಗಾಯಗೊಂಡಿದ್ದಾರೆ. ಅವರು ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದ ಕಾರಣ, ಬ್ಬರು ಸೂಪರ್‌ಚಾರ್ಜರ್ಸ್ ಸಿಬ್ಬಂದಿ ಸದಸ್ಯರು ಸ್ಟ್ಯಾಂಡ್‌ಗೆ ಬಂದರು.

Ben Stokes Injury Update England Cricket Captain Carried Off Pitch

ಸಿಂಗಲ್ ರನ್ ಓಡಿದ ಬಳಿಕ ನೆಲದ ಮೇಲೆ ನೋವಿನಿಂದ ಬಳಲುತ್ತಿದ್ದಾಗ ಅವರು ತನ್ನ ಎಡಗಾಲಿನ ಹಿಂಭಾಗವನ್ನು ಹಿಡಿದುಕೊಂಡಿದ್ದರು. ಆಗಸ್ಟ್ 21 ರಂದು ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಬೆನ್‌ಸ್ಟೋಕ್ಸ್ ಆಡದ ಕಾರಣ ಈಗ ನಾಯಕತ್ವ ಬೇರೆಯವರಿಗೆ ವಹಿಸಲಿದ್ದು, ಶೀಘ್ರದಲ್ಲೇ ಅದನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಆಟಗಾರರ ಗಾಯದ ಸಮಸ್ಯೆ

ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಝಾಕ್ ಕ್ರಾಲಿ ಬೆರಳು ಮುರಿದ ಕಾರಣ ಶ್ರೀಲಂಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಇತ್ತೀಚೆಗೆ ನಡೆದ ಮೂರನೇ ಟೆಸ್ಟ್ ಸಂದರ್ಭದಲ್ಲಿ ಕ್ಯಾಚ್ ಹಿಡಿಯಲು ಯತ್ನಿಸಿದಾಗ ಕ್ರಾಲಿ ಅವರ ಬಲಗೈ ಕಿರುಬೆರಳಿಗೆ ಗಾಯವಾದ ಕಾರಣ ಅವರು ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರು ಅಕ್ಟೋಬರ್‌ನಲ್ಲಿ ಇಂಗ್ಲೆಂಡ್‌ನ ಪಾಕಿಸ್ತಾನ ಪ್ರವಾಸಕ್ಕೆ ಫಿಟ್ ಆಗುವತ್ತ ಕೆಲಸ ಮಾಡುತ್ತಿದ್ದಾರೆ.

ಝಾಕ್ ಕ್ರಾಲಿ ಬದಲಾಗಿ ಡ್ಯಾನ್ ಲಾರೆನ್ಸ್ ಬೆನ್ ಡಕೆಟ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ಸಿದ್ಧವಾಗಿದ್ದಾರೆ. ಡ್ಯಾನ್ ಲಾರೆನ್ಸ್ ಎಸ್ಸೆಕ್ಸ್‌ನಿಂದ ಸರ್‍ರೆ ತಂಡಕ್ಕೆ ಬದಲಾದರು, ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಎರಡು ಶತಕಗಳು ಮತ್ತು ಮೂರು ಅರ್ಧಶತಕಗಳೊಂದಿಗೆ 74.68 ರ ಸ್ಟ್ರೈಕ್ ದರದಲ್ಲಿ 53.09 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ

ಬೆನ್ ಸ್ಟೋಕ್ಸ್ (ನಾಯಕ), ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಜೋರ್ಡಾನ್ ಕಾಕ್ಸ್, ಬೆನ್ ಡಕೆಟ್, ಡಾನ್ ಲಾರೆನ್ಸ್, ಆಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮೀ ಸ್ಮಿತ್, ಓಲಿ ಸ್ಟೋನ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+