BCCI ಕಾರ್ಯದರ್ಶಿ ಜಯ್ ಶಾ ಹೊಸ ICC ಅಧ್ಯಕ್ಷರಾಗುವುದು ಖಚಿತ: ವರದಿ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರನ್ನು ಹೊಸ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರನ್ನಾಗಿ ಮಾಡುವುದು ಬಹುತೇಕ ಪಕ್ಕಾ ಆಗಿದೆ. ಶಾ ಅವರಿಗೆ ಈಗಾಗಲೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಗಳ ಬೆಂಬಲವಿದ್ದು ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಬಹುಮತವನ್ನು ಅವರು ಹೊಂದಿದ್ದಾರೆ.
ಒಂದು ವೇಳೆ ಅವರು ಗೆದ್ದರೆ ಆದರೆ 35 ವರ್ಷದ ಜಯ್ ಶಾ ಅವರು ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿಯಾಗಲಿದ್ದಾರೆ. ಜೊತೆಗೆ ಇವರು ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ನಂತರ ಐಸಿಸಿಯನ್ನು ಮುನ್ನಡೆಸುವ ಐದನೇ ಭಾರತೀಯರಾಗಲಿದ್ದಾರೆ.

ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರು ಮೂರನೇ ಅವಧಿಗೆ ಅಧ್ಯಕ್ಷರಾಗಲು ಪ್ರಯತ್ನಿಸುವುದಿಲ್ಲ ಎಂದು ಮಂಗಳವಾರ ದೃಢಪಡಿಸಿದರು. ಕ್ರಿಕೆಟ್‌ನ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದ ಬಾರ್ಕ್ಲೇ ಅವರ ಅವಧಿಯು ನವೆಂಬರ್ 30 ರಂದು ಕೊನೆಗೊಳ್ಳುತ್ತದೆ. ಹೀಗಾಗಿ ICC ಅಧ್ಯಕ್ಷರು ತಲಾ 2 ವರ್ಷಗಳ ಮೂರು ಅವಧಿಗೆ ಅರ್ಹರಾಗಿರುವುದರಿಂದ, ಬಾರ್ಕ್ಲೇ ಮೂರನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಬಾರ್ಕ್ಲೇ ಅವರೇ ತಾವು ಮೂರನೇ ಬಾರಿಗೆ ಸ್ಪರ್ಧಿಸುವುದಿಲ್ಲ ಎಂದಿದ್ದು, ಶಾ ಅವರೇ ಈ ಸ್ಥಾನಕ್ಕೇರುವ ಸಾಧ್ಯತೆ ದಟ್ಟವಾಗಿದೆ.
ಐಸಿಸಿಯಲ್ಲಿ ಜಯ್ ಶಾ ಸ್ಥಾನಮಾನ:
ಜಯ್ ಶಾ ಪ್ರಸ್ತುತ ವಿಶ್ವದಾದ್ಯಂತ ಕ್ರಿಕೆಟ್ ಆಡಳಿತದಲ್ಲಿ ಗುರುತಿಸಬಹುದಾದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ICCಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಉಪ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಅಲ್ಲದೆ ಸುಮಾರು 16 ಮತದಾರ ಸದಸ್ಯರೊಂದಿಗೆ ಅವರು ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಒಂದು ವೇಳೆ ಚುನಾವಣೆ ನಡೆದರೆ, ಚುನಾವಣೆಯಲ್ಲಿ ಗೆಲ್ಲಲು ಶಾ ಸರಳ ಬಹುಮತ (51% ಮತಗಳು) ಮಾತ್ರ ಬೇಕಾಗುತ್ತದೆ. ಚುನಾವಣೆಯಲ್ಲಿ ಗೆಲ್ಲಲು ಮೂರನೇ ಎರಡರಷ್ಟು ಮತಗಳ ಅಗತ್ಯವಿದೆ.
ನಿಯಮ ಏನು ಹೇಳುತ್ತದೆ?
ಐಸಿಸಿಯ ನಿಯಮಾವಳಿಗಳನ್ನು ಗಮನಿಸಿದರೆ ಅಧ್ಯಕ್ಷರ ಚುನಾವಣೆಯಲ್ಲಿ 16 ಮತಗಳಿದ್ದು, ಗೆಲುವಿಗೆ ಒಂಬತ್ತು ಮತಗಳ (ಶೇ.51) ಸರಳ ಬಹುಮತದ ಅಗತ್ಯವಿದೆ. ಈ ಹಿಂದೆ ಅಧ್ಯಕ್ಷರಾಗಲು ಈಗಿನ ಅಧ್ಯಕ್ಷರಿಗೆ ಮೂರನೇ ಎರಡರಷ್ಟು ಬಹುಮತ ಬೇಕಿತ್ತು. ಹೊಸ ಅಧ್ಯಕ್ಷರ ಅಧಿಕಾರಾವಧಿಯು ಡಿಸೆಂಬರ್ 1, 2024 ರಿಂದ ಪ್ರಾರಂಭವಾಗುತ್ತದೆ.
ಶಾ ಬಗ್ಗೆ ಮಾತನಾಡುವುದಾದರೆ, ಅವರು ಐಸಿಸಿಯಲ್ಲಿ ಉತ್ತಮ ಹಿಡಿತವನ್ನು ಹೊಂದಿದ್ದಾರೆ. ಅವರು ICC ಬೋರ್ಡ್ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ಪ್ರಸ್ತುತ ICC ಯ ಎಲ್ಲಾ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ (F&CA) ಉಪ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಪಕ್ಕಾ ಆಗಿದೆ.
ಜಯ್ ಶಾ ಅವರ ಅಧಿಕಾರಾವಧಿ ಒಂದು ವರ್ಷ
ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಇನ್ನೂ ಒಂದು ವರ್ಷ ಬಾಕಿ ಇದೆ. ಕಾರ್ಯದರ್ಶಿ ಹುದ್ದೆಯಲ್ಲಿ ಒಂದು ವರ್ಷ ಉಳಿದಿದ್ದರೂ ಶಾ ಐಸಿಸಿಗೆ ತೆರಳಲು ನಿರ್ಧರಿಸಿದರೆ, ಅವರಿಗೆ ಬಿಸಿಸಿಐನಲ್ಲಿ ನಾಲ್ಕು ವರ್ಷಗಳು ಉಳಿಯುತ್ತವೆ.












Click it and Unblock the Notifications