RCB: ಆರ್‌ಸಿಬಿಗೆ ಗುಡ್‌ನ್ಯೂಸ್; ಪ್ಲೇಆಫ್ ಪಂದ್ಯ ಆಡಲಿರುವ ವೆಸ್ಟ್ ಇಂಡೀಸ್‌ ಆಟಗಾರರು

ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿಯ ನಡುವೆ ಒಂದು ವಾರ ಸ್ಥಗಿತವಾಗಿದ್ದ ಐಪಿಎಲ್ 2025 ಪಂದ್ಯಾವಳಿ ಮತ್ತೆ ಆರಂಭವಾಗಲಿದೆ. ವಿದೇಶಿ ಆಟಗಾರರ ಲಭ್ಯತೆ ಬಗ್ಗೆ ಸಾಕಷ್ಟು ಗೊಂದಲಗಳಿದ್ದು ಪ್ರಮುಖ ವಿದೇಶಿ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಿದ್ದು ಪ್ಲೇಆಫ್ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ವೆಸ್ಟ್ ಇಂಡೀಸ್ ಆಟಗಾರರನ್ನು ಹೊಂದಿರುವ ತಂಡಗಳಿಗೆ ಸಮಾಧಾನದ ಸುದ್ದಿ ಸಿಕ್ಕಿದೆ.

ಜೂನ್‌ ಮೊದಲ ವಾರದಲ್ಲೇ ಇಂಗ್ಲೆಂಡ್ ವೆಸ್ಟ್ ಇಂಡೀಸ್ ನಡುವೆ ಏಕದಿನ ಸರಣಿ ಆರಂಭವಾಗಲಿದೆ. ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರು ಐಪಿಎಲ್‌ನಲ್ಲಿ ಪ್ಲೇಆಫ್ ಪಂದ್ಯಗಳನ್ನು ಆಡಲು ಅನುಮತಿ ಸಿಕ್ಕಿದೆ. ಪ್ಲೇಆಫ್ ಹಂತದ ಪಂದ್ಯಗಳಿಗೆ ವಿದೇಶಿ ಆಟಗಾರರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ಕ್ರಿಕೆಟ್ ಮಂಡಳಿಗಳ ಜೊತೆ ಚರ್ಚೆ ನಡೆಸುತ್ತಿದೆ. ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್ ಮತ್ತು ಆಂಡ್ರೆ ರಸೆಲ್ ಅವರಂತಹ ಎಲ್ಲರೂ ತಮ್ಮ ತಮ್ಮ ಫ್ರಾಂಚೈಸಿಗಳಿಗೆ ಆಡುವುದನ್ನು ಮುಂದುವರೆಸಲಿದ್ದಾರೆ.

bcci confirms west indies players availability ipl 2025 playoffs

ಐಪಿಎಲ್ 2025 ರ ಸಂಪೂರ್ಣ ಪಂದ್ಯಾವಳಿಗೆ ವೆಸ್ಟ್ ಇಂಡೀಸ್ ಆಟಗಾರರು ಲಭ್ಯವಿರಲಿದ್ದಾರೆ. ಕ್ರಿಕೆಟ್ ವೆಸ್ಟ್ ಇಂಡೀಸ್ ಇದನ್ನು ದೃಢಪಡಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದು ಅತಿ ದೊಡ್ಡ ಲಾಭವಾಗಿದೆ. ನಿಕೋಲಸ್ ಪೂರನ್ ಎಲ್‌ಎಸ್‌ಜಿ ತಂಡಕ್ಕಾಗಿ ಆಡುವುದರಿಂದ ಇದು ದೊಡ್ಡ ಉತ್ತೇಜನವಾಗಿದೆ. ರಿಷಭ್ ಪಂತ್ ನೇತೃತ್ವದ ತಂಡವು ಟಾಪ್ 4 ರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೊಂದಿದೆ ಮತ್ತು ಪೂರನ್ ಅವರ ಆಟ ತಂಡಕ್ಕೆ ಮುಖ್ಯವಾಗಲಿದೆ. ಈವರೆಗೆ ಯಾವುದೇ ಪಂದ್ಯವನ್ನು ಆಡದ ಶಮರ್ ಜೋಸೆಫ್ ಕೂಡ ಲಭ್ಯವಿರುತ್ತಾರೆ.

ಆರ್‌ಸಿಬಿ ಪರ, ರೊಮಾರಿಯೊ ಶೆಫರ್ಡ್ ಕೂಡ ಲಭ್ಯವಿದ್ದಾರೆ. ಇಂಗ್ಲೆಂಡ್‌ನ ಜಾಕೋಬ್ ಬೆಥೆಲ್ ಮತ್ತು ಫಿಲ್ ಸಾಲ್ಟ್ ಪ್ಲೇಆಫ್‌ನಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಆದರೆ ಉತ್ತಮ ಫಾರ್ಮ್‌ನಲ್ಲಿರುವ ಶೆಫರ್ಡ್ ಲಭ್ಯತೆ ತಂಡಕ್ಕೆ ದೊಡ್ಡ ಶಕ್ತಿಯಾಗಲಿದೆ. ಕೆಕೆಆರ್ ಪರ, ಆಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಉಳಿದ ಋತುವಿಗೆ ಲಭ್ಯವಿರುತ್ತಾರೆ. ಆದರೆ, ರೋವ್‌ಮನ್ ಪೊವೆಲ್ ಗಾಯದ ಸಮಸ್ಯೆಯಿಂದ ಹೊರಗುಳಿಯುತ್ತಾರೆ. ರಾಜಸ್ಥಾನ್ ರಾಯಲ್ಸ್ ಪರ, ಶಿಮ್ರಾನ್ ಹೆಟ್ಮೈಯರ್ ಲಭ್ಯವಿದ್ದರೂ ತಂಡ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದಿದೆ.

ಆರ್ ಸಿಬಿ ಇನ್ನೊಂದು ಪಂದ್ಯ ಗೆದ್ದರೂ ಪ್ಲೇಆಫ್ ಸ್ಥಾನ ಖಚಿತವಾಗಲಿದೆ. ರೊಮಾರಿಯೋ ಶೆಫರ್ಡ್ ಈಗಾಗಲೇ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+