Shreyanka Patil: ಕನ್ನಡತಿ, ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್‌ಗೆ ಯಾವುದೇ ಗ್ರೇಡ್ ನೀಡದ ಬಿಸಿಸಿಐ
Shreyanka Patel: ಬಿಎಸಿಸಿಐ ಶೀಘ್ರದಲ್ಲೇ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಲಿದೆ. ಅದರಂತೆಯೇ ಈ ಬಾರಿಗೆ ಮಹಿಳಾ ತಂಡದ ಒಪ್ಪಂದದಲ್ಲಿ 21 ಆಟಗಾರ್ತಿಯರಿಗೆ ಸ್ಥಾನ ಸಿಗಲಿದ್ದು, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ಜೆಮಿಮಾ ರೋಡ್ರಿಗಸ್ ಎ ಗ್ರೇಡ್‌ನಲ್ಲಿ ವಾರ್ಷಿಕ 50 ಲಕ್ಷ ರೂಪಾಯಿ ವೇತನ ಪಡೆಯಲಿದ್ದಾರೆ. ಆದರೆ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರನ್ನು ಎಲ್ಲಾ ಗ್ರೇಡ್‌ಗಳ ಪಟ್ಟಿಯಿದ ಹೊರಗಿಡಲಾಗಿದೆ. ಹಾಗಾದ್ರೆ, ಯಾರೆಲ್ಲಾ ಯಾವ ಸ್ಥಾನ ಪಡೆದಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪುರುಷರ ತಂಡದಲ್ಲಿ ಕೆಲವು ಸ್ಟಾರ್ ಆಟಗಾರರು ಗ್ರೇಡ್ ಕುಸಿತ ಅನುಭವಿಸಿದ್ದಾರೆ. ಉದಾಹರಣೆಗೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಬಾರಿ ಎ+ ನಿಂದ ಬಿ ಗ್ರೇಡ್‌ಗೆ ಕುಸಿದಿದ್ದಾರೆ. ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದ್ದು, ಕೆಲವರು ಕೇಂದ್ರ ಒಪ್ಪಂದದಿಂದ ಹೊರಗುಳಿಯುತ್ತಿದ್ದಾರೆ. ಹಾಗೆಯೇ ಇದೀಗ ಮಹಿಳಾ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದದ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಒಪ್ಪಂದಲ್ಲಿ ಸ್ಥಾನ ಪಡೆದವರು: ಮಹಿಳಾ ತಂಡದ ಕೇಂದ್ರ ಒಪ್ಪಂದದಲ್ಲಿ ಈ ಬಾರಿ ಒಟ್ಟು 21 ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿಯ ಕೇಂದ್ರ ಒಪ್ಪಂದದಲ್ಲಿ ಕೇವಲ 16 ಆಟಗಾರ್ತಿಯರಿಗೆ ಸ್ಥಾನ ದೊರೆತಿದ್ದರೆ, ಈ ಬಾರಿಗೆ ಹೆಚ್ಚುವರಿ ಆಟಗಾರ್ತಿಗಳು ಸೇರಿ ಅವಕಾಶ ಪಡೆದಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಹೆಚ್ಚಿನ ಪ್ರಮಾಣದಲ್ಲಿ ವೇತನ ಸಿಗಲಿದೆ. ಬಿಸಿಸಿಐ ಈ ಒಪ್ಪಂದದ ಮೂಲಕ ತಂಡಕ್ಕೆ ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ತರಲು ಉದ್ದೇಶಿಸಿದೆ.
ಎ ಗ್ರೇಡ್ ಸ್ಥಾನ ಪಡೆದ ಆಟಗಾರ್ತಿಯರು: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ ಮತ್ತು ಜೆಮಿಮಾ ರೋಡ್ರಿಗಸ್ (ವಾರ್ಷಿಕ 50 ಲಕ್ಷ ರೂಪಾಯಿ).
ಬಿ ಗ್ರೇಡ್ ಸ್ಥಾನ ಪಡೆದ ಆಟಗಾರ್ತಿಯರು: ರೇಣುಕಾ ಸಿಂಗ್ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್, ಸ್ನೇಹ ರಾಣಾ (ವಾರ್ಷಿಕ 30 ಲಕ್ಷ ರೂಪಾಯಿ)
ಸಿ ಗ್ರೇಡ್ ಸ್ಥಾನ ಪಡೆದ ಆಟಗಾರ್ತಿಯರು: ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಾಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್ (ವಾರ್ಷಿಕ 10 ಲಕ್ಷ ರೂಪಾಯಿ)
ಈ ಬಾರಿ ಸಿ ಗ್ರೇಡ್‌ನಲ್ಲಿ ಕೆಲವು ಆಟಗಾರ್ತಿಯರು ಕೇಂದ್ರ ಒಪ್ಪಂದಕ್ಕೆ ಮೊದಲ ಬಾರಿಗೆ ಸೇರಿದ್ದಾರೆ. ಅದರಲ್ಲಿ ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಶ್ರೀ ಚರಣಿ, ಕಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ ಮತ್ತು ತೇಜಲ್ ಸೇರಿದ್ದಾರೆ. ಆದರೆ, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್ ಮತ್ತು ಟಿಟಾಸ್ ಸಾಧು ಕೇಂದ್ರ ಒಪ್ಪಂದದಿಂದ ಹೊರಗೊಳ್ಳಲಾಗಿದೆ.
ಒಪ್ಪಂದಿಂದ ಹೊರಗುಳಿದವರು
* ಪೂಜಾ ವಸ್ತ್ರಾಕರ್
* ಶ್ರೇಯಾಂಕಾ ಪಾಟೀಲ್
* ಟಿಟಾಸ್ ಸಾಧು
ಯಾವ ಪಂದ್ಯಾವಳಿಗೆ ಎಷ್ಟು ಹಣ?: ಕೇಂದ್ರ ಒಪ್ಪಂದ ಹೊಂದಿರುವ ಆಟಗಾರ್ತಿಯರು ತಮ್ಮ ವೇತನದ ಜೊತೆಗೆ ಪಂದ್ಯಗಳಿಗಾಗಿ ಶುಲ್ಕವನ್ನೂ ಕೂಡ ಪಡೆಯುತ್ತಾರೆ. ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ, ಟಿ-20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಪಡೆಯಲಿದ್ದಾರೆ ಎನ್ನುವ ಮಾಹಿತಿ ಇದೆ.
ಗ್ರೇಡ್‌ವಾರು ವಾರ್ಷಿಕ ವೇತನದ ವಿವರ
* ಎ ಗ್ರೇಡ್ -50 ಲಕ್ಷ ರೂಪಾಯಿ
* ಬಿ ಗ್ರೇಡ್ - 30 ಲಕ್ಷ ರೂಪಾಯಿ
* ಸಿ ಗ್ರೇಡ್ - 10 ಲಕ್ಷ ರೂಪಾಯಿ
ಒಟ್ಟಿನಲ್ಲಿ ಹೇಳುವುದಾದ್ರೆ, ಈ ಎಲ್ಲಾ ಗ್ರೇಡ್‌ಗಳಿಂದಲೂ ಹೊರಗಿಟ್ಟವರ ಪಟ್ಟಿಯಲ್ಲಿ ಕನ್ನಡತಿ, ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕ್ ಪಾಟೀಲ್ ಕೂಡ ಇದ್ದಾರೆ. ಅವರಿಗೆ ಒಪ್ಪಂದದ ಯಾವುದೇ ಗ್ರೇಡ್‌ನಲ್ಲಿ ಸ್ಥಾನ ನೀಡದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.












Click it and Unblock the Notifications