Get Updates
Get notified of breaking news, exclusive insights, and must-see stories!

Ashes Test: ಜಾನಿ ಬೈರ್‌ಸ್ಟೋವ್ ಔಟ್ ವಿವಾದ: ಆಸ್ಟ್ರೇಲಿಯಾ-ಇಂಗ್ಲೆಂಡ್ ಪ್ರಧಾನಿಗಳ ವಾಕ್ಸಮರ

ಆಶಸ್ ಸರಣಿಯೆಂದರೆ ಹಾಗೇ ಇದು ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಸಮರ. ವಿಶ್ವಕಪ್‌ಗಿಂತಲೂ ಆಶಸ್ ಸರಣಿ ಗೆಲ್ಲುವುದು ಎರಡೂ ತಂಡಗಳ ಆಟಗಾರರಿಗೆ, ಅಭಿಮಾನಿಗಳಿಗೆ ಹೆಚ್ಚು ಖುಷಿ ಕೊಡುವ ವಿಚಾರ, ಶತಮಾನಕ್ಕಿಂತ ಹೆಚ್ಚು ಇತಿಹಾಸ ಹೊಂದಿರುವ ಆಶಸ್ ಸರಣಿಯಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸುತ್ತವೆ.

ಈ ಬಾರಿ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ವಿಚಾರ ಈಗ ಎರಡೂ ದೇಶಗಳ ಪ್ರಧಾನಿಗಳ ಮಟ್ಟಕ್ಕೆ ಹೋಗಿದ್ದು, ಇಬ್ಬರು ಪ್ರಧಾನಿಗಳ ವಾಕ್ಸಮರಕ್ಕೆ ಕಾರಣವಾಗಿದೆ.

 Australian PM Responds to Ashes Dispute with British PMs Comment

ಜೆಂಟಲ್‌ಮೆನ್ ಗೇಮ್ ಎಂದು ಕರೆಸಿಕೊಳ್ಳುವ ಕ್ರಿಕೆಟ್‌ ಪಂದ್ಯದಲ್ಲಿ ಈ ರೀತಿಯ ವಿವಾದ ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಸದ್ಯ ಎರಡೂ ದೇಶಗಳ ಮಾಧ್ಯಮಗಳು, ಪ್ರಧಾನಿಗಳು, ಅಭಿಮಾನಿಗಳು ಪರಸ್ಪರ ನಿಂದನೆಯಲ್ಲಿ ತೊಡಗಿದ್ದಾರೆ.

ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ತಮ್ಮ ವಕ್ತಾರರ ಮೂಲಕ ಮೊದಲು ಆಸ್ಟ್ರೇಲಿಯಾವನ್ನು ಟೀಕಿಸಿದ್ದರು. ಬೈರ್‌ಸ್ಟೋವ್ ಅವರ ವಜಾ ಕೇವಲ ಕ್ರಿಕೆಟ್ ಅಲ್ಲ ಎಂದು ಸುನಕ್ ಅವರ ವಕ್ತಾರರು ಹೇಳಿದ್ದಾರೆ. "ಆಸ್ಟ್ರೇಲಿಯದ ರೀತಿಯಲ್ಲಿ ಪಂದ್ಯವನ್ನು ಗೆಲ್ಲಲು ಬಯಸುವುದಿಲ್ಲ ಎಂದು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ ಹೇಳಿಕೆಯನ್ನು ಪ್ರಧಾನ ಮಂತ್ರಿ ರಿಷಿ ಸುನಕ್ ಒಪ್ಪುತ್ತಾರೆ" ಎಂದು ವಕ್ತಾರರು ಹೇಳಿದರು.

ಇದಕ್ಕೆ ಪ್ರತ್ಯುತ್ತರ ನೀಡಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್, "ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಬಗ್ಗೆ ಹೆಮ್ಮೆ ಪಡುವುದಾಗಿ ಹೇಳಿದ್ದಾರೆ. ಅದೇ ಹಳೆಸ ಆಸಿಸ್ ತಂಡ, ಯಾವಾಗಲೂ ಗೆಲ್ಲುವುದು, ಸರಣಿ ಗೆದ್ದು ಬರುವ ಆಸ್ಟ್ರೇಲಿಯಾ ತಂಡವನ್ನು ಸ್ವಾಗತಿಸಲು ಕಾಯುತ್ತಿರುವುದಾಗಿ" ಹೇಳುವ ಮೂಲಕ ರಿಷಿ ಸುನಕ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಆಟಗಾರರ ಮೇಲಿನ ನಿಂದನೆ ಖಂಡಿಸಿದ ಸುನಕ್

ಶನಿವಾರ ರಿಷಿ ಸುನಕ್ ಮೈದಾನದಲ್ಲಿ ಪಂದ್ಯವನ್ನು ವೀಕ್ಷಿಸಿದರು. ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಸದಸ್ಯರು ಆಸ್ಟ್ರೇಲಿಯನ್ನರನ್ನು ನಿಂದಿಸಿರುವುದನ್ನು ಖಂಡಿಸಿದರು. ಆಟಗಾರರನ್ನು ನಿಂದಿಸಿದ ಪ್ರಕರಣದಲ್ಲಿ ಮೂರವ ಎಂಸಿಸಿ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ. ಕೆಟ್ಟ ನಡವಳಿಕೆಯ ಆರೋಪದ ಮೇಲೆ ಯಾವುದೇ ಸದಸ್ಯರನ್ನು ಅಮಾನತುಗೊಳಿಸಲು ಎಂಸಿಸಿ ಕ್ಷಿಪ್ರ ಕ್ರಮ ಕೈಗೊಂಡಿರುವುದು ಸರಿ ಎಂದಿದ್ದಾರೆ.

ಜುಲೈ 6ರಂದು ಮೂರನೇ ಟೆಸ್ಟ್

ಆಶಸ್ ಸರಣಿಯ ಮೊದಲ ಎರಡು ಪಂದ್ಯಗಳನ್ನು ಆಸ್ಟ್ರೇಲಿಯನ್ನರು ಗೆದ್ದಿದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇಂಗ್ಲೆಂಡ್ ಸರಣಿಯನ್ನು ಗೆಲ್ಲಬೇಕಾದರೆ ಉಳಿದ ಮೂರು ಟೆಸ್ಟ್‌ ಪಂದ್ಯಗಳನ್ನು ಗೆಲ್ಲಬೇಕಿದೆ. ಜುಲೈ 6ರಿಂದ ಮೂರನೇ ಟೆಸ್ಟ್ ಪಂದ್ಯ ಲೀಡ್ಸ್‌ನ ಹೆಡಿಂಗ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೂರನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದರೆ ಸರಣಿ ಮತ್ತಷ್ಟು ರೋಚಕವಾಗಲಿದೆ.

ವಿವಾದದ ನಂತರ ಸರಣಿ ಮತ್ತಷ್ಟು ರೋಚಕತೆ ಪಡೆದುಕೊಂಡಿದ್ದು, ಮೂರನೇ ಟೆಸ್ಟ್‌ಗೆ ಇನ್ನಷ್ಟು ಮಹತ್ವ ಸಿಕ್ಕಿದೆ. ವಿಶ್ವಚಾಂಪಿಯನ್‌ಶಿಪ್ ವಿಜೇತ ಆಸ್ಟ್ರೇಲಿಯಾ ತಂಡವನ್ನು ಮಣಿಸಲು ಬೆನ್‌ಸ್ಟೋಕ್ಸ್ ಏನೆಲ್ಲಾ ರಣತಂತ್ರ ರೂಪಿಸಲಿದ್ದಾರೆ ಎನ್ನುವುದನ್ನು ಲೀಡ್ಸ್‌ನಲ್ಲಿ ನೋಡಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+