Asia Cup 2023: ಶ್ರೀಲಂಕಾ ತಲುಪಿದ ಭಾರತ ತಂಡ: ಪಾಕ್ ವಿರುದ್ಧ ಪಂದ್ಯಕ್ಕೆ ಸಿದ್ಧತೆ!

ಏಷ್ಯಾಕಪ್ 2023ರ ಪಂದ್ಯಾವಳಿ ಆರಂಭವಾಗಿದ್ದು, ಭಾರತ ತಂಡ ಶ್ರೀಲಂಕಾ ತಲುಪಿದೆ. ಬುಧವಾರ ಟೀಂ ಇಂಡಿಯಾ ಆಟಗಾರರು ಶ್ರೀಲಂಕಾ ರಾಜಧಾನಿ ಕೊಲಂಬೊಗೆ ತಲುಪಿದ್ದು, ಶನಿವಾರ ಏಷ್ಯಾಕಪ್‌ನ ತಮ್ಮ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದ್ದಾರೆ. ಇಂದು (ಆಗಸ್ಟ್ 30) ಏಷ್ಯಾಕಪ್‌ ಟೂರ್ನಿ ಆರಂಭವಾಗಿದೆ. ಪಾಕಿಸ್ತಾನದ ಮುಲ್ತಾನ್‌ನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ನೇಪಾಳ ಮುಖಾಮುಖಿಯಾಗಿವೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ತಂಡದ ಇತರ ಸದಸ್ಯರು ಏಷ್ಯಾಕಪ್‌ಗೆ ಮುನ್ನ ಬೆಂಗಳೂರಿನ ಆಲೂರಿನಲ್ಲಿ ಒಂದು ವಾರದ ಶಿಬಿರದಲ್ಲಿ ಭಾಗವಹಿಸಿದ್ದರು. ಬುಧವಾರ ವಿಶ್ರಾಂತಿ ಪಡೆಯಲಿರುವ ಭಾರತ ತಂಡದ ಆಟಗಾರರು ಗುರುವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ.

asia-cup-2023

ವಿಕೆಟ್ ಕೀಪರ್ ಕೆಎಲ್ ರಾಹುಲ್ ಹೊರತುಪಡಿಸಿ ಎಲ್ಲಾ ಟೀಂ ಇಂಡಿಯಾದ ಆಟಗಾರರು ಕ್ಯಾಂಡಿಗೆ ತಲುಪಿದ್ದಾರೆ. ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಬೆಂಗಳೂರಿನಲ್ಲಿ ಎನ್‌ಸಿಎಯಲ್ಲಿ ಉಳಿಯಲಿದ್ದಾರೆ. ಅವರು ಪಂದ್ಯದ ಸಿಮ್ಯುಲೇಶನ್‌ಗಳಲ್ಲಿ ಭಾಗವಹಿಸುತ್ತಾರೆ ಮತ್ತು ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಕೋಚ್ ದ್ರಾವಿಡ್ ಹೇಳಿದ್ದೇನು?

ಶ್ರೀಲಂಕಾಗೆ ತೆರಳುವ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, "ಕೆಎಲ್ ರಾಹುಲ್ ನಮ್ಮೊಂದಿಗೆ ಉತ್ತಮ ವಾರವನ್ನು ಹೊಂದಿದ್ದು, ಉತ್ತಮವಾಗಿ ಆಡುತ್ತಿದ್ದಾರೆ ಮತ್ತು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ, ಆದರೆ ಅವರು ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ." ಎಂದು ಹೇಳಿದರು.

"ಎನ್‌ಸಿಎ ಅವರನ್ನು ನೋಡಿಕೊಳ್ಳುತ್ತದೆ. ಸೆಪ್ಟೆಂಬರ್ 4 ರಂದು, ಕೆಎಲ್ ರಾಹುಲ್‌ಗೆ ಫಿಟ್‌ನೆಸ್ ಪರೀಕ್ಷೆ ನಡೆಯಲಿದೆ ಅಲ್ಲಿ ಉತ್ತೀರ್ಣರಾದರೆ ಮುಂದಿನ ಪಂದ್ಯಗಳಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ಫಿಟ್ ಆಗಿದ್ದು, ಅಭ್ಯಾಸದ ಅವಧಿಯಲ್ಲಿ ಎಲ್ಲಾ ಬಾಕ್ಸ್‌ಗಳನ್ನು ಟಿಕ್ ಮಾಡಿದ್ದಾರೆ, ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿದೆ" ಎಂದು ಹೇಳಿದರು.

ಏಕದಿನ ವಿಶ್ವಕಪ್‌ಗೆ ತಯಾರಿ

ಏಷ್ಯಾಕಪ್ ಭಾರತ ತಂಡಕ್ಕೆ ಮುಂಬರುವ ಏಕದಿನ ವಿಶ್ವಕಪ್‌ಗೆ ತಯಾರಿ ನಡೆಸಲು ಅತ್ಯುತ್ತಮ ಅವಕಾಶವಾಗಿದೆ. ಭಾರತ ತಂಡದ 15 ಸದಸ್ಯರ ತಂಡ ಅಂತಿಮಗೊಳಿಸಲು ಈ ಪಂದ್ಯಾವಳಿಯನ್ನು ಬಳಸಿಕೊಳ್ಳಲಾಗುತ್ತದೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಶ್ರೀಲಂಕಾ ಇತ್ತೀಚೆಗೆ ಕೆಲವು ಏಕದಿನ ಪಂದ್ಯಗಳನ್ನು ಆಡಿದ್ದರೆ, ಭಾರತವು 50-ಓವರ್‌ಗಳ ಸ್ವರೂಪಕ್ಕೆ ಕನಿಷ್ಠ ತಯಾರಿಯನ್ನು ಮಾಡಿಕೊಂಡಿರುವ ತಂಡವಾಗಿದೆ.

ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಮೂರು ಬಾರಿ ಎದುರಿಸುವ ಅವಕಾಶ ಇದೆ. ಎರಡು ಉಭಯ ತಂಡಗಳು ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ. ಎರಡೂ ತಂಡಗಳು ಫೈನಲ್‌ಗೆ ಅರ್ಹತೆ ಪಡೆದರೆ ಏಷ್ಯಾಕಪ್‌ನಲ್ಲಿ ಮೂರನೇ ಬಾರಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+