Asia Cup 2023: ಭಾರತ-ಪಾಕಿಸ್ತಾನದ ಮುಂದಿನ ಪಂದ್ಯಕ್ಕೆ ಮಳೆಯ ಭಯವಿಲ್ಲ: ಈ ಕ್ರೀಡಾಂಗಣದಲ್ಲಿ ನಡೆಯಲಿದೆ ಪಂದ್ಯ!

ಏಷ್ಯಾಕಪ್ 2023 ಪಂದ್ಯಾವಳಿಯ ಮಹತ್ವದ ಭಾರತ - ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು ಕ್ರಿಕೆಟ್ ಪ್ರೇಮಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ನೇಪಾಳ ವಿರುದ್ಧ ಗೆಲುವು ಸಾಧಿಸಿದ್ದ ಪಾಕಿಸ್ತಾನ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದುಕೊಂಡಿತ್ತು, ಸೋಮವಾರ ನಡೆದ ಪಂದ್ಯದಲ್ಲಿ ಭಾರತ ಮಳೆಯಿಂದ ಅಡ್ಡಿಪಡಿಸಿದ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.

ಹೌದು , ಭಾರತ - ಪಾಕಿಸ್ತಾನ ಮತ್ತೆ ಮುಖಾಮುಖಿಯಾಗಲು ಮುಹೂರ್ತ ನಿಗದಿಯಾಗಿದೆ. ಸೆಪ್ಟೆಂಬರ್ 10ರಂದು ಸಾಂಪ್ರದಾಯಿಕ ಎದುರಾಳಿಗಳು ಸೂಪರ್ 4 ಪಂದ್ಯದಲ್ಲಿ ಕಾದಾಡಲಿವೆ. ಆದರೆ, ಈ ಬಾರಿ ಮಹತ್ವದ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದಿಲ್ಲ!

ಈ ಮೊದಲು ಸೂಪರ್ 4 ಮತ್ತು ಫೈನಲ್ ಪಂದ್ಯವನ್ನು ಕೊಲಂಬೋದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ, ಕೊಲಂಬೋದಲ್ಲಿ ಭಾರಿ ಮಳೆಯಾಗುವ ಕಾರಣ ಸದ್ಯ ಸೂಪರ್ 4 ಹಂತದ ಪಂದ್ಯಗಳನ್ನು ಹಂಬಂಟೋಟಾಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

asia-cup-2023

ಅಧಿಕೃತ ಘೋಷಣೆ ಬರಬೇಕಿದೆ

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಯಿಂದ ಈ ಬಗ್ಗೆ ಅಧಿಕೃತ ಪ್ರಕಟಣೆ ಬರಬೇಕಿದೆ. ಶ್ರೀಲಂಕಾ ಕ್ರಿಕೆಟ್ ದ್ವೀಪದ ಆಗ್ನೇಯ ಭಾಗದಲ್ಲಿರುವ ಹಂಬಂಟೋಟಾವನ್ನು ಪಂದ್ಯಾವಳಿಗೆ ಸೂಕ್ತ ಸ್ಥಳವೆಂದು ಪ್ರಸ್ತಾಪಿಸಿದೆ. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂ ಏಷ್ಯಾ ಕಪ್‌ನ ಸೂಪರ್ 4 ಹಂತಕ್ಕೆ ಆತಿಥ್ಯ ವಹಿಸಬೇಕಿತ್ತು. ಆದರೆ ಇಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಪಂದ್ಯಗಳನ್ನು ಸ್ಥಳಾಂತರಿಸಲು ಎಸಿಸಿ ಯೋಜಿಸಿದೆ.

ಪಂದ್ಯಗಳನ್ನು ಕೊಲಂಬೊದಿಂದ ಹೊರಗೆ ಸ್ಥಳಾಂತರಿಸುವ ಬಗ್ಗೆ ಸಂಭಾಷಣೆಗಳು ನಡೆಯುತ್ತಿದ್ದು, ಪಲ್ಲೆಕೆಲೆ ಮತ್ತು ದಂಬುಲ್ಲಾವನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಹಂಬಂಟೋಟ ಒಂದು ಆಯ್ಕೆಯಾಗಿ ಹೊರಹೊಮ್ಮಿದೆ.

ಪಲ್ಲೆಕೆಲೆಯಲ್ಲಿ ಮಳೆ ಬೀಳುವ ಸೂಚನೆ ಇರುವ ಕಾರಣ ಇಲ್ಲಿ ಪಂದ್ಯ ಆಯೋಜಿಸುವ ಸಾಧ್ಯತೆ ಕಡಿಮೆ ಇದೆ. ದಂಬುಲಾದ ರಂಗಿರಿ ಕ್ರೀಡಾಂಗಣವು ಪುನಃಸ್ಥಾಪನೆಗೆ ಒಳಗಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಹೆಚ್ಚಾಗಿ ಮಳೆ ಬೀಳದ ಕಾರಣ, ಹಂಬಂಟೋಟವು ಪರಿಗಣನೆಯಲ್ಲಿರುವ ಸ್ಥಳಗಳಲ್ಲಿ ಸುರಕ್ಷಿತ ಆಯ್ಕೆಯಾಗಿದೆ ಎಂದು ವರದಿಯಾಗಿದೆ.

ಮೂಲಭೂತ ಸೌಕರ್ಯಗಳ ಸಮಸ್ಯೆ

ಸೂರಿಯವೆವಾದಲ್ಲಿರುವ ಮಹಿಂದಾ ರಾಜಪಕ್ಸೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಕಾಡಿನ ಪಕ್ಕದಲ್ಲಿದೆ ಮತ್ತು ಹತ್ತಿರದ ತಂಡದ ವಸತಿ 45 ಕಿಲೋಮೀಟರ್ ದೂರದಲ್ಲಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಹಂಬಂಟೋಟಾದಲ್ಲಿನ ಲಾಜಿಸ್ಟಿಕ್ ಸಮಸ್ಯೆಗಳನ್ನು ಪರಿಹರಿಸಲು ಎಸಿಸಿ ಕಾರ್ಯನಿರ್ವಹಿಸುತ್ತಿದೆ.

ನಾಲ್ಕು ತಂಡಗಳಿಗೆ ಉತ್ತಮ ಹೋಟೆಲ್‌ಗಳನ್ನು ಹುಡುಕುವುದು, ಕಾಮೆಂಟೇಟರ್‌ಗಳು ಮತ್ತು ಪಂದ್ಯದ ಅಧಿಕಾರಿಗಳನ್ನು ಒಳಗೊಂಡ ಪ್ರಸಾರ ತಂಡಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸುವುದು ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ.

ಆದರೂ ಶ್ರೀಲಂಖಾ ಕ್ರಿಕೆಟ್ ಮಂಡಳಿ ಇನ್ನೂ ಕೊಲಂಬೊದಲ್ಲಿ ಸೂಪರ್ 4 ಪಂದ್ಯಗಳನ್ನು ನಡೆಸಬಹುದು ಎಂದು ನಂಬಿಕೆ ಇಟ್ಟಿದೆ. ಏಕೆಂದರೆ ವಾರದ ಅವಧಿಯಲ್ಲಿ ಹವಾಮಾನವು ಉತ್ತಮವಾಗಿರುತ್ತದೆ ಮತ್ತು ಈವೆಂಟ್ ಅನ್ನು ಹಂಬನ್‌ತೋಟಕ್ಕೆ ಸ್ಥಳಾಂತರಿಸುವುದು ವ್ಯವಸ್ಥಾಪನಾ ತಲೆನೋವು ಎಂದು ಅದು ಭಾವಿಸುತ್ತದೆ. ಭಾರತೀಯ ತಂಡವು ಮಂಗಳವಾರ ಮಧ್ಯಾಹ್ನ ಕೊಲಂಬೊಗೆ ತೆರಳಲಿದ್ದು, ಸೋಮವಾರ ರಾತ್ರಿಯ ವೇಳೆಗೆ ಮುಂದಿನ ಕೆಲವು ದಿನಗಳ ಕಾಲ ಅಲ್ಲಿಯೇ ಉಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+