Ameesha Patel: ಲಿಜ್‌ಲಾಜ್ ಇನ್‌ಸ್ಟಾ ಪೋಸ್ಟ್‌ಗೆ ಕೊಹ್ಲಿ ಲೈಕ್; ವಿರಾಟ್ ಬೆಂಬಲಕ್ಕೆ ನಿಂತ ಬಾಲಿವುಡ್ ನಟಿ ಅಮೀಷಾ ಪಟೇಲ್
Ameesha Patel: ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಇನ್‌ಫ್ಲುಯೆನ್ಸರ್ ಲಿಜ್‌ಲಾಜ್ ಹಾಕಿ ಪೋಸ್ಟ್‌ಗೆ ಲೈಕ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರು ಇದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಿ, ಮೀಮ್‌ಗಳನ್ನು ಹಂಚಿಕೊಳ್ಳುವ ಮೂಲಕ ಕೊಹ್ಲಿಯನ್ನು ಟ್ರೋಲ್ ಮಾಡಲು ಆರಂಭಿಸಿದರು. ಆದರೆ, ಇದೀಗ ಬಾಲಿವುಡ್ ನಟಿ ಅಮೀಷಾ ಪಟೇಲ್ ಅವರು ಕೊಹ್ಲಿ ಬೆಂಬಲಕ್ಕೆ ನಿಂತು ಟ್ರೋಲಿಗರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ 'ಗದರ್' ಖ್ಯಾತಿಯ ನಟಿ ಅಮೀಷಾ ಪಟೇಲ್, ವಿರಾಟ್ ಕೊಹ್ಲಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. "ಕೇವಲ ಒಂದು 'ಲೈಕ್' ವಿಚಾರವಾಗಿ ಒಬ್ಬ ವಿಶ್ವಪ್ರಸಿದ್ಧ ಕ್ರಿಕೆಟಿಗನನ್ನು ಹೀಗೆ ಟ್ರೋಲ್ ಮಾಡುವುದು ಸರಿಯಲ್ಲ," ಎಂದು ಆಕ್ರೋಶ ಹೊರಹಾಕಿದ್ದಾರೆ.

ಟ್ರೋಲಿಗರಿಗೆ ತರಾಟೆ ತೆಗೆದುಕೊಂಡ ಅಮೀಷಾ ಪಟೇಲ್
ಸಣ್ಣಪುಟ್ಟ ವಿಷಯಗಳನ್ನೂ ಕೂಡ ವಿವಾದಾತ್ಮಕವಾಗಿ ಚಿತ್ರಿಸುವ ಇಂದಿನ ಆನ್‌ಲೈನ್ ಟ್ರೋಲಿಂಗ್ ಸಂಸ್ಕೃತಿಯ ವಿರುದ್ಧ ಕಿಡಿಕಾರಿದ್ದಾರೆ. "ಸೆಲೆಬ್ರಿಟಿಗಳಿಗೂ ಅವರದ್ದೇ ಆದ ವೈಯಕ್ತಿಕ ಆಯ್ಕೆಗಳಿರುತ್ತವೆ, ಅದನ್ನು ಇಷ್ಟು ದೊಡ್ಡದು ಮಾಡುವ ಅಗತ್ಯವಿಲ್ಲ," ಎಂದು ಹೇಳುವ ಮೂಲಕ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡುದ್ದಾರೆ. ಈ ಮೂಲಕ ಅಮೀಷಾ ಪಟೇಲ್ ಅವರು ಕೊಹ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಅಮೀಷಾ ಪಟೇಲ್ ಪರ ನಿಂತ ಕೊಹ್ಲಿ ಅಭಿಮಾನಿಗಳು
ಇನ್ನೂ ವಿರಾಟ್ ಕೊಹ್ಲಿ ಅವರ ಅಪ್ಪಟ ಅಭಿಮಾನಿಗಳು ಅಮೀಷಾ ಪಟೇಲ್ ಅವರ ಈ ನಿಲುವನ್ನು ಸ್ವಾಗತಿಸಿದ್ದಾರೆ. "ಸೆಲೆಬ್ರಿಟಿಗಳ ಪ್ರತಿಯೊಂದು ಸಣ್ಣ ವಿಷಯಗಳನ್ನು ರಾಷ್ಟ್ರಮಟ್ಟದ ಸುದ್ದಿಯನ್ನಾಗಿ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ," ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆಯ ಹಿನ್ನೆಲೆ
ಭಾರತೀಯ ಕ್ರಿಕೆಟ್‌ನ ದಿಗ್ಗಜ ವಿರಾಟ್ ಕೊಹ್ಲಿ ಮೈದಾನದಲ್ಲಿ ಸಿಡಿಸುವ ರನ್‌ಗಳಷ್ಟೇ ವೇಗವಾಗಿ ಅವರ ಸಾಮಾಜಿಕ ಜಾಲತಾಣದ ಚಟುವಟಿಕೆಗಳೂ ಸುದ್ದಿಯಾಗುತ್ತವೆ. ಇತ್ತೀಚೆಗೆ ಇನ್‌ಫ್ಲುಯೆನ್ಸರ್ ಲಿಜ್‌ಲಾಜ್ ಎಂಬುವವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೊಹ್ಲಿ ನೀಡಿದ ಒಂದು ಲೈಕ್ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದೆ.
ಇಂದಿನ ಕಾಲದಲ್ಲಿ ಸೆಲೆಬ್ರಿಟಿಗಳ ಲೈಕ್, ಕಾಮೆಂಟ್ ಅಥವಾ ಫಾಲೋಯಿಂಗ್ ಲಿಸ್ಟ್ ಕೂಡ ಜನರ ವಿಶ್ಲೇಷಣೆಗೆ ಒಳಪಡುತ್ತಿರುವುದು ಕಳವಳಕಾರಿ ಸಂಗತಿ. ವಿರಾಟ್ ಕೊಹ್ಲಿ ಅವರಂತಹ ಸಾಧಕರಿಗೆ ಕೇವಲ ಇಂತಹ ಕ್ಷುಲ್ಲಕ ಕಾರಣಗಳಿಗಾಗಿ ಕಿರುಕುಳ ನೀಡುವುದು ಎಷ್ಟು ಸರಿ? ಎಂಬ ಪ್ರಶ್ನೆಯನ್ನು ಅಮೀಷಾ ಪಟೇಲ್ ಅವರ ಹೇಳಿಕೆ ಎತ್ತಿ ತೋರಿಸಿದೆ. ಒಟ್ಟಿನಲ್ಲಿ, ಮೈದಾನದಲ್ಲಿ ಮಾತ್ರವಲ್ಲದೆ, ಮೈದಾನದ ಹೊರಗೂ ವಿರಾಟ್ ಕೊಹ್ಲಿ ಅವರ ಪ್ರತಿಯೊಂದು ಚಟುವಟಿಕೆಯೂ ಹೇಗೆ ಸುದ್ದಿಯಾಗುತ್ತದೆ ಎಂಬುದಕ್ಕೆ ಈ ಘಟನೆ ಪ್ರಮುಖ ಸಾಕ್ಷಿಯಾಗಿದೆ.












Click it and Unblock the Notifications