Rahane Pension: ನಿವೃತ್ತಿ ಪಡೆದರೂ ಅಜಿಂಕ್ಯ ರಹಾನೆಗೆ ದೊರೆಯಲಿದೆ ಮಾಸಿಕ ಪಿಂಚಣಿ

Rahane Pension: ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ಹಾಗೂ ಮಾಜಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದರು. ಹಾಗಾದ್ರೆ ಇವರಿಗೆ ಬಿಸಿಸಿಐನಿಂದ ಮಾಸಿಕ ಪಿಂಚಣಿ ಎಷ್ಟು ಸಿಗಲಿದೆ ಎನ್ನುವ ಮಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಅಜಿಂಕ್ಯ ರಹಾನೆ ಅವರು ತಮ್ಮ 20 ವರ್ಷಗಳ ಸುದೀರ್ಘ ಕ್ರಿಕೆಟ್ ಪ್ರಯಾಣದ ಬಳಿಕ ಅವರು ಟೆಸ್ಟ್‌ಗೆ ವಿದಾಯ ಹೇಳಿದ್ದು, ಅವರ ಶಾಂತ ಸ್ವಭಾವದ ಆಟಕ್ಕೆ ದಿಗ್ಗಜರು ಹಾಗೂ ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬಂದಿತ್ತು. ಇನ್ನೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಆಟಗಾರರಿಗಾಗಿ ಜಾರಿಗೆ ತಂದಿರುವ ಪಿಂಚಣಿ ಯೋಜನೆಯಡಿಯಲ್ಲಿ ರಹಾನೆ ಅವರಿಗೆ ಪ್ರತಿ ತಿಂಗಳು ಮಾಸಿಕ ಪಿಂಚಣಿ ಸಿಗಲಿದೆ.

Ajinkya Rahane BCCI Pension How Much Monthly Pension Will India Former player Get After Retirement

ರಹಾನೆಗೆ ಎಷ್ಟು ಪಿಂಚಣಿ ಸಿಗಲಿದೆ?

ಬಿಸಿಸಿಐ ನಿಯಮದ ಪ್ರಕಾರ 25ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಭಾರತೀಯ ಆಟಗಾರರು ಉನ್ನತ ಶ್ರೇಣಿಯ ಪಿಂಚಣಿಗೆ ಅರ್ಹರಾಗಿರುತ್ತಾರೆ. ರಹಾನೆ ಅವರು ಭಾರತದ ಪರ 85 ಟೆಸ್ಟ್, 90 ಏಕದಿನ ಹಾಗೂ 20 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಸುದೀರ್ಘ ಸೇವೆಗಾಗಿ ಅವರಿಗೆ ಬಿಸಿಸಿಐ ಪ್ರತಿ ತಿಂಗಳು 70,000 ರೂಪಾಯಿ ಪಿಂಚಣಿ ನೀಡಲಿದೆ ಎಂದು ತಿಳಿದುಬಂದಿದೆ.

ಎಷ್ಟು ಏರಿಕೆ ಮಾಡಲಾಗಿದೆ?

2022ರಲ್ಲಿ ಬಿಸಿಸಿಐ ಮಾಜಿ ಕ್ರಿಕೆಟಿಗರ ಪಿಂಚಣಿ ಮೊತ್ತವನ್ನು ಪರಿಷ್ಕರಿಸಿ ಹೆಚ್ಚಳ ಮಾಡಲಾಗಿತ್ತು. ಈ ಹಿಂದೆ ಉನ್ನತ ಶ್ರೇಣಿಯ ಆಟಗಾರರಿಗೆ ಪ್ರತಿ ತಿಂಗಳು 50,000 ರೂಪಾಯಿ ನೀಡಲಾಗುತ್ತಿತ್ತು. ಆ ಪರಿಷ್ಕರಣೆಯ ನಂತರ ಈ ಮೊತ್ತವನ್ನು 70,000 ರೂಪಾಯಿಗೆ ಏರಿಕೆ ಮಾಡಲಾಯಿತು. ಜೊತೆಗೆ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳನ್ನು ಆಡಿದ ಆಟಗಾರರಿಗೂ ಅವರ ಪಂದ್ಯಗಳ ಸಂಖ್ಯೆಗೆ ಅನುಗುಣವಾಗಿ (ಉದಾಹರಣೆಗೆ 30,000 ರೂ. ಮತ್ತು 45,000 ರೂ.) ಮಾಸಿಕ ಪಿಂಚಣಿ ನೀಡಲಾಗುತ್ತದೆ.

ಬಿಸಿಸಿಐ ನೀಡುವ ಈ ಪಿಂಚಣಿಗೆ ಕೆಲವು ಮುಖ್ಯ ಷರತ್ತುಗಳು ಅನ್ವಯ ಆಗುತ್ತವೆ. ರಹಾನೆ ಅವರು ವಿದಾಯ ಘೋಷಣೆ ಮಾಡಿದ ನಂತರ ಬಿಸಿಸಿಐ ಅಡಿಯಲ್ಲಿ ಕೋಚ್, ಮೆಂಟರ್, ಆಯ್ಕೆಗಾರ ಅಥವಾ ಆಡಳಿತ ಮಂಡಳಿಯಲ್ಲಿ ಅಧಿಕೃತ ಹುದ್ದೆ ವಹಿಸಿಕೊಂಡು ಮಂಡಳಿಯಿಂದ ಸಂಪೂರ್ಣ ವೇತನ ಪಡೆಯಲು ಪ್ರಾರಂಭಿಸಿದರೆ, ಅವರ ಮಾಸಿಕ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ. ಆ ಹುದ್ದೆ ಅಥವಾ ಒಪ್ಪಂದ ಮುಗಿದ ನಂತರ ಪಿಂಚಣಿ ಸೇವೆ ಮತ್ತೆ ಮುಂದುವರಿಯಲಿದೆ.

ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ವಿದೇಶಿ ಸರಣಿಗಳಲ್ಲಿ ಅದರಲ್ಲೂ ವಿಶೇಷವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ನೆಲದಲ್ಲಿ ರಹಾನೆ ಉತ್ತಮ ರನ್ ಕಲೆಹಾಕಿ ಟೀಮ್ ಇಂಡಿಯಾಗೆ ಭರ್ಜರಿ ಗೆಲುವುಗಳನ್ನು ತಂದುಕೊಟ್ಟಿದ್ದರು. 2020-21ರ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ವಿರಾಟ್ ಕೊಹ್ಲಿ ಗೈರುಹಾಜರಿಯಲ್ಲಿ ತಂಡವನ್ನು ಹಂಗಾಮಿ ನಾಯಕನಾಗಿ ಮುನ್ನಡೆಸಿ 2-1 ಸರಣಿ ಗೆಲುವು ತಂದುಕೊಟ್ಟರು. ಇದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆ ಆಗಿದೆ. ಒಟ್ಟಿನಲ್ಲಿ ಇದೀಗ ರಹಾನೆ ನಿವೃತ್ತಿ ಘೋಷಣೆ ಮಾಡಿದರೂ ಸಹ ಅವರಿಗೆ ಪಿಂಚಣಿ ಸಿಗುತ್ತದೆ ಎನ್ನುವ ವಿಚಾರ ತಿಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಅಜಿಂಕ್ಯ ರಹಾನೆ ಸಾಧನೆ

ಭಾರತದ ಪರ 85 ಟೆಸ್ಟ್ ಪಂದ್ಯಗಳನ್ನ ಆಡಿರುವ ರಹಾನೆ ಅವರು 38.46 ಸರಾಸರಿಯಲ್ಲಿ 5,077 ರನ್ ಕಲೆಹಾಕಿದ್ದಾರೆ. ಇದರಲ್ಲಿ 12 ಶತಕಗಳು ಹಾಗೂ 26 ಅರ್ಧಶತಕಗಳು ಸೇರಿವೆ. ಅಲ್ಲದೆ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲೂ ಭಾರತಕ್ಕೆ ಹಲವು ಪಂದ್ಯಶ್ರೇಷ್ಠ ಪ್ರದರ್ಶನಗಳನ್ನು ನೀಡಿದ ಕೀರ್ತಿ ಹೊಂದಿದ್ದಾರೆ. 2015ರ ಏಕದಿನ ವಿಶ್ವಕಪ್ ಸೇರಿದಂತೆ ಪ್ರಮುಖ ಸರಣಿಗಳಲ್ಲಿ ಆರಂಭಿಕ ಬ್ಯಾಟರ್ ಹಾಗೂ ಮೂರನೇ ಕ್ರಮಾಂಕದಲ್ಲಿ ತಂಡಕ್ಕೆ ಆಸರೆ ಆಗಿದ್ದರು.

ಟೀಮ್ ಇಂಡಿಯಾ ಪರ 90 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 35.26 ಸರಾಸರಿಯಲ್ಲಿ 3 ಶತಕ ಮತ್ತು 24 ಅರ್ಧಶತಕಗಳೊಂದಿಗೆ 2,962 ರನ್ ಕಲೆಹಾಕಿದ್ದಾರೆ. ಇನ್ನೂ ಟೀಮ್ ಇಂಡಿಯಾ ಪರ 20 ಟಿ20 ಕ್ರಿಕೆಟ್ ಪಂದ್ಯಗಳಿಂದ 375 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+