Taapsee Pannu: ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ನಟಿ ತಾಪ್ಸಿ ಪನ್ನು ಮಿಂಚು!
ಪ್ಯಾರಿಸ್, ಜುಲೈ. 31: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದತ್ತ ಜಗತ್ತಿನ ಕಣ್ಣು ನೆಟ್ಟಿದೆ. ಈ ಕ್ರೀಡಾಕೂಟದಲ್ಲಿ ಭಾರತ ಕೂಡ ಈಗಾಗಲೇ ಪದಕಗಳ ಬೇಟೆ ಆರಂಭಿಸಿದೆ. ದೇಶದಿಂದ ಸಾವಿರಾರು ಮಂದಿ ಪ್ಯಾರಿಸ್‌ನಲ್ಲಿ ಬೀಡುಬಿಟ್ಟಿದ್ದಾರೆ. ಈಗ ಕ್ರೀಡಾಂಗಣದಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಕಾಣಿಸಿಕೊಂಡಿದ್ದಾರೆ.
ಪ್ಯಾರಿಸ್ ಪ್ರವಾಸದಲ್ಲಿರುವ ನಟಿ ತಾಪ್ಸಿ ಪನ್ನು ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ. ಮೊದಲ ದಿನದ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಆಟಗಳನ್ನು ನೋಡಿ ಖುಷಿಯಿಂದ ರಾಷ್ಟ್ರಧ್ವಜವನ್ನು ಬೀಸಿರುವ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಇವುಗಳನ್ನು ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.

ಪ್ಯಾರಿಸ್‌ನಲ್ಲಿ ತಾಪ್ಸಿ ಪನ್ನು
ಪ್ಯಾರಿಸ್‌ನ ರಮಣೀಯ ರಸ್ತೆಯೊಂದರಲ್ಲಿ ವಿವಿಧ ಭಂಗಿಯಲ್ಲಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಕ್ರಾಪ್ ಮಾಡಿದ ಟಾಪ್‌ನೊಂದಿಗೆ ತಿಳಿ ಹಸಿರು ಸೀರೆಯನ್ನು ವಿಭಿನ್ನವಾಗಿ ಉಟ್ಟು ಸೀರೆ ಧರಿಸುವುದಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಕೂದಲನ್ನು ಹಿಂದಕ್ಕೆ ಕಟ್ಟಿರುವ ಅವರು ಒಂದು ಬ್ಯಾಗ್ ಹಾಕಿಕೊಂಡಿದ್ದಾರೆ. ಸೀರೆಗೆ ಶೂಗಳನ್ನು ಹಾಕಿ ಮಾಡ್ರನ್ ಲುಕ್ ಕೊಟ್ಟಿದ್ದಾರೆ.
ಈ ಫೋಟೋಗಳ ಜೊತೆಗೆ ಎರಡು ಸಣ್ಣ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಎರಡು ಸೆಕೆಂಡ್‌ಗಳ ವಿಡಿಯೋದಲ್ಲಿ ನಟಿ ತಾಪ್ಸಿ ಪನ್ನು, ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಟ್ಯಾಂಡ್‌ನಲ್ಲಿ ನಿಂತಿದ್ದಾರೆ. ರಾಷ್ಟ್ರ ಧ್ವಜವನ್ನು ಹಿಡಿದು ಉತ್ಸಾಹದಿಂದ ಬೀಸಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ರಸ್ತೆಯಲ್ಲಿ ವಾಕ್ ಮಾಡುತ್ತಿರುವ ಕ್ಲಿಪ್ ಇದೆ. ಇನ್ನು ತಾಪ್ಸಿಗೆ ಆಕೆಯ ತಂಗಿ ಶಗುನ್ ಸಾಥ್ ನೀಡಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್
2024ರ ಒಲಿಂಪಿಕ್ಸ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದೆ. ಮನು ಭಾಕರ್ ಅವರು ಸರ್ಬಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಒಂದೇ ಆವೃತ್ತಿಯ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾದರು.
ಇನ್ನು, ನಟಿ ತಾಪ್ಸಿ ಪನ್ನು ಕೊನೆಯದಾಗಿ ರಾಜ್‌ಕುಮಾರ್ ಹಿರಾನಿ ಅವರ 'ಡಂಕಿ' ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಕಾಣಿಸಿಕೊಂಡಿದ್ದರು. ಫಿರ್ ಆಯಿ ಹಸೀನ್ ದಿಲ್ರುಬಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇದರಲ್ಲಿ ವಿಕ್ರಾಂತ್ ಮಾಸ್ಸೆ ಮತ್ತು ಸನ್ನಿ ಕೌಶಲ್ ಕೂಡ ಇದ್ದಾರೆ. ಚಿತ್ರವು ಆಗಸ್ಟ್ 9 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತದೆ.












Click it and Unblock the Notifications