Abhishek Sharma: 34, 9, 11, 108.. ಟಿ20 ಇತಿಹಾಸದಲ್ಲೇ ಅಭಿಷೇಕ್ ಶರ್ಮಾ ಹೊಸ ದಾಖಲೆ.. ದಿಗ್ಗಜರ ದಾಖಲೆಗಳು ಪುಡಿಪುಡಿ
Abhishek Sharma: ನವದೆಹಲಿಯಲ್ಲಿ ಗುರುವಾರ (ಸೆಪ್ಟೆಂಬರ್ 17) ನಡೆಯುತ್ತಿರುವ ಅಫ್ಘಾನಿಸ್ತಾನ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಟೀಮ್ ಇಂಡಿಯಾಗೆ ಅಭಿಷೇಕ್ ಶರ್ಮಾ ಅವರು ಆಕ್ರಮಣಕಾರಿ ಆಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಇದೇ ವೇಳೆ ಅವರು ಹೊಸ ದಾಖಲೆಯನ್ನು ಮಾಡಿ ಗಮನ ಸೆಳೆದಿದ್ದಾರೆ. ಅವರು 11 ಸಿಕ್ಸ್, 9 ಬೌಂಡರಿಗಳ ಸಹಿತ 108 ರನ್ ಕಲೆಹಾಕಿದ್ದಾರೆ.

ವೇಗದ ಶತಕದ ದಾಖಲೆ..
ಅಫ್ಘಾನಿಸ್ತಾನ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರು ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಭಾರತೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಹೊಸ ಇತಿಹಾಸ ನಿರ್ಮಿಸಿದ ಅಭಿಷೇಕ್ ಶರ್ಮಾ
ಇದಕ್ಕೂ ಮೊದಲು 2017ರಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಬಾರಿಸಿದ್ದು ಭಾರತೀಯ ಆಟಗಾರನ ಅತ್ಯಂತ ವೇಗದ ಶತಕದ ದಾಖಲೆಯಾಗಿತ್ತು. ಇದೀಗ ಅಭಿಷೇಕ್ ಶರ್ಮಾ ಆ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆದಿದ್ದಾರೆ. ಅಭಿಷೇಕ್ ಶರ್ಮಾ ಅವರು ಪಂದ್ಯದ ಆರಂಭದಲ್ಲಿ ಎಚ್ಚರಿಕೆಯಿಂದ ಆಟ ಆರಂಭಿಸಿದರು. ಮೊದಲ ಓವರ್‌ನಲ್ಲಿ ಫಜಲ್ಹಕ್ ಫಾರೂಕಿ ಅವರ ಬೌಲಿಂಗ್ ಅನ್ನು ಎದುರಿಸಿದ ಅವರು, ಎಕ್ಸ್ಟ್ರಾ ಕವರ್ ಕಡೆಗೆ ಬೌಂಡರಿ ಬಾರಿಸುವ ಮೂಲಕ ತಮ್ಮ ರನ್ ಖಾತೆಯನ್ನು ತೆರೆದರು.
ಅಪ್ಘಾನ್ ಬೌಲರ್‌ಗಳ ಬೆವರಿಳಿಸಿದ ಅಭಿಷೇಕ್
ಲಯಕ್ಕೆ ಮರಳಿದ ಬಳಿಕ ಈ ಎಡಗೈ ಯುವ ಬ್ಯಾಟರ್ ಆಕ್ರಮಣಕಾರಿ ಆಟ ಮುಂದುವರೆಸಿ ಮೂಲೆಮೂಲೆಗೂ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಳಿಸಲು ಶುರು ಮಾಡಿದರು. ಐದನೇ ಓವರ್‌ನಲ್ಲಿ ಆಫ್-ಸ್ಪಿನ್ನರ್ ಮೊಹಮ್ಮದ್ ನಬಿ ಅವರ ವಿರುದ್ಧ ದಂಡಯಾತ್ರೆ ನಡೆಸಿದರು. ನಬಿ ಬೌಲಿಂಗ್‌ನಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಸಿಡಿಸಿ, ಕೇವಲ 14 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು.
ಕೇವಲ 30 ಎಸೆತಗಳಲ್ಲಿ ಶತಕದ ಸಾಧನೆ
ಬಳಿಕ ಏಳನೇ ಓವರ್‌ನಲ್ಲಿ ಮುಜೀಬ್ ಉರ್ ರೆಹಮಾನ್ ಬೌಲಿಂಗ್‌ನಲ್ಲೂ ತಮ್ಮ ಅಬ್ಬರ ಮುಂದುವರಿಸಿದ ಅವರು, ಎರಡು ಭರ್ಜರಿ ಸಿಕ್ಸರ್‌ಗಳನ್ನು ಚಚ್ಚಿದರು. ಅಂತಿಮವಾಗಿ ಅಭಿಷೇಕ್ ಕೇವಲ 30 ಎಸೆತಗಳಲ್ಲಿ ತಮ್ಮ ಶತಕ ಪೂರ್ಣಗೊಳಿಸುವ ಮೂಲಕ, ಈ ಹಿಂದೆ ಟೀಮ್ ಇಂಡಿಯಾ ದಿಗ್ಗಜ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದ್ದ 35 ಎಸೆತಗಳ ಅತ್ಯಂತ ವೇಗದ ಭಾರತೀಯ ಶತಕದ ದಾಖಲೆಯನ್ನು ಅಳಿಸಿಹಾಕಿದರು. ಬಳಿಕ ರಶೀದ್ ಖಾನ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ ಅಭಿಷೇಕ್ ಅವರು ಬರೋಬ್ಬರಿ 108 ರನ್‌ಗಳನ್ನು ಕಲೆಹಾಕಿ ಗಮನ ಸೆಳೆದರು.
ಟಿ20 ಇಂಟರ್ನ್ಯಾಷನಲ್‌ನಲ್ಲಿ ವೇಗದ ಶತಕ ಸಿಡಿಸಿದ ಭಾರತೀಯರು
* ಅಭಿಷೇಕ್ ಶರ್ಮಾ - 30 ಎಸೆತ Vs ಅಪ್ಘಾನಿಸ್ತಾನ (2026)
* ರೋಹಿತ್ ಶರ್ಮಾ - 35 ಎಸೆತ Vs ಶ್ರೀಲಂಕಾ (2017)
* ಅಭಿಷೇಕ್ ಶರ್ಮಾ - 37 ಎಸೆತ Vs ಇಂಗ್ಲೆಂಡ್ (2025)
* ಸಂಜು ಸ್ಯಾಮ್ಸನ್ - 40 ಎಸೆತ Vs ಬಾಂಗ್ಲಾದೇಶ (2024)
* ತಿಲಕ್ ವರ್ಮಾ - 41 ಎಸೆತ Vs ದಕ್ಷಿಣ ಆಫ್ರಿಕಾ (2024)


Click it and Unblock the Notifications
