AB de Villiers: ಮತ್ತೊಮ್ಮೆ ಕನ್ನಡಿಗರ ಮನಗೆದ್ದ ಎಬಿ ಡಿವಿಲಿಯರ್ಸ್

ಆರ್‌ಸಿಬಿ ತಂಡದ ಮಾಜಿ ಆಟಗಾರ, ಮಿಸ್ಟರ್ 360 ಎಂದೇ ಹೆಸರಾಗಿರುವ ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ಕನ್ನಡಿಗರ ಮನಗೆದ್ದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಮಾಡಿದ ಟ್ವೀಟ್‌ಗೆ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ ಎಬಿಡಿ ನಡೆಗೆ ಕನ್ನಡಿಗರು ಸಖತ್ ಖುಷಿಯಾಗಿದ್ದಾರೆ. ಇರೊ ಒಂದು ಹೃದಯಾನೆ ಎಷ್ಟು ಸರಿ ಗೆಲ್ತೀರಾ ಎಂದು ಹಾಡಿ ಹೊಗಳಿದ್ದಾರೆ.

ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಸಾಧನೆಗೆ ಇದೀಗ ಐಸಿಸಿ 'ಹಾಲ್ ಆಫ್ ಫೇಮ್ 2024' ಗೌರವ ಸಿಕ್ಕಿದೆ. ಈ ಗೌರವ ಸಿಕ್ಕಿದ್ದಕ್ಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಎಬಿಡಿ, 'ಇದಕ್ಕಾಗಿ ಧನ್ಯವಾದಗಳು ಐಸಿಸಿ, ಇದು ತುಂಬಾ ವಿಶೇಷವಾದದು. ಈ ಆಟಕ್ಕೆ ತುಂಬಾ ಧನ್ಯವಾದಗಳು, ಸಾಕಷ್ಟು ಒಳ್ಳೆಯ ನೆನಪುಗಳು ಮತ್ತು ಜಗತ್ತಿನ ಹಲವು ಕಡೆಗಳಿಂದ ನನಗೆ ಪ್ರೀತಿಯನ್ನು ಕೊಟ್ಟಿದೆ' ಎಂದು ಖುಷಿ ವ್ಯಕ್ತಪಡಿಸಿದ್ದರು.

ab de villiers wins kannadigas heart with tweet in Kannada

ಎಬಿ ಡಿವಿಲಿಯರ್ಸ್ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿ, 'ಗೌರವಗಳು ಬರುತ್ತವೆ ಹೋಗುತ್ತವೆ, ಆದರೆ ಈ ಫ್ರೇಮ್ ಶಾಶ್ವತವಾಗಿ ಉಳಿಯುತ್ತದೆ' ಎಂದು ಎಬಿಟಿ ಹಾಲ್ ಆಫ್ ಫೇಮ್ ಜೊತೆ ತೆಗೆಸಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದೆ. ಇದಕ್ಕೆ ಎಬಿಡಿ ಕನ್ನಡದಲ್ಲೇ 'ಧನ್ಯವಾದಗಳು' ಎಂದು ಪ್ರತಿಕ್ರಿಯೆ ನೀಡಿದ್ದು ಕನ್ನಡಿಗರ ಮನಗೆದ್ದಿದೆ.

ಸಂಭ್ರಮಿಸಿದ ಕನ್ನಡಿಗರು

ಎಬಿಡಿ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಿದ ಪೋಸ್ಟ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 3.80 ಲಕ್ಷ ಜನ ಈ ಪೋಸ್ಟ್ ವೀಕ್ಷಣೆ ಮಾಡಿದ್ದು, 18 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 3.1 ಸಾವಿರ ಜನ ರಿಪೋಸ್ಟ್ ಮಾಡಿದ್ದಾರೆ. ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದು ಕರ್ನಾಟಕದ ದತ್ತುಪುತ್ರ ಎಂದು ಕೊಂಡಾಡಿದ್ದಾರೆ.

ಇನ್ನೂ ಕೆಲವರು ಎಬಿ ಡಿವಿಲಿಯರ್ಸ್‌ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿ ಎಂದು ಬೇಡಿಕೆ ಇಟ್ಟಿದ್ದರೆ, ಇನ್ನೂ ಕೆಲವರು ಆರ್ ಸಿಬಿ ತಂಡಕ್ಕೆ ವಾಪಸ್ ಬಂದು ಇನ್ನೂ ಎರಡು ವರ್ಷ ಆಡಿ ಎಂದು ಒತ್ತಾಯಿಸಿದ್ದಾರೆ. ಮತ್ತೊಬ್ಬರು ಆಪದ್ಭಾಂದವ, ಕನ್ನಡಿಗ ಎಬಿ ಅಣ್ಣ ಎಂದು ಕರೆದಿದ್ದಾರೆ.

ಆರ್ ಸಿಬಿಗೆ ಬರ್ತಾರ ಎಬಿಡಿ?

ಐಪಿಎಲ್‌ಗೆ ವಿದಾಯ ಹೇಳಿದ ಬಳಿಕ ಕೋಚ್‌ ಆಗಿ ಅಥವಾ ಮೆಂಟರ್ ಆಗಿ ಎಬಿ ಡಿವಿಲಿಯರ್ಸ್ ಅವರನ್ನು ಆರ್ ಸಿಬಿಗೆ ವಾಪಸ್ ಕರೆತನ್ನಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಆದರೆ ಫ್ರಾಂಚೈಸಿ ಮಾತ್ರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಎಬಿಡಿ ಕೂಡ ಆರ್ ಸಿಬಿ ತಂಡದ ಬ್ಯಾಟಿಂಗ್ ಕೋಚ್ ಅಥವಾ ಮೆಂಟರ್ ಆಗಲು ಆಸಕ್ತಿ ವ್ಯಕ್ತಪಡಿಸಿದ್ದರು. ಆದಷ್ಟು ಬೇಗ ಅವರ ಆಸೆ ನೆರವೇರಲಿ, ಆರ್ ಸಿಬಿ ಜೆರ್ಸಿಯಲ್ಲಿ ಅವರನ್ನು ಮತ್ತೊಮ್ಮೆ ನೋಡುವಂತಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+