ವಿರಾಟ್ ಕೊಹ್ಲಿಯನ್ನು ಕೆಣಕಬೇಡಿ, ಕೆಣಕಿದರೆ... ಸುನಿಲ್ ಗವಾಸ್ಕರ್ ಟೀಕೆಗೆ ಆಪ್ತ ಸ್ನೇಹಿತ ಎಬಿಡಿ ವಿಲಿಯರ್ಸ್ ಪ್ರತ್ಯುತ್ತರ
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಒಂದು ಚರ್ಚೆ ಆರಂಭವಾಗಿತ್ತು. ವಿರಾಟ್ ಕೊಹ್ಲಿ ಅವರನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಬೇಕೋ ಬೇಡವೋ ಎಂಬ ಚರ್ಚೆ ಬಿಸಿ ಪಡೆಯುತ್ತಿತ್ತು. ಆಗ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಸ್ಟ್ರೈಕ್ ರೇಟ್ ಉತ್ತಮವಾಗಿಲ್ಲ ಎಂಬ ಮಾತುಗಳ ಸಹ ಕೇಳಿ ಬಂದಿದ್ದವು. ಮಾರ್ಡನ್ ಯುಗದ ಸ್ಟಾರ್ ಆಟಗಾರನನ್ನು ಕೆಲವರು ಕಾಲೆಳೆದರು. ಇನ್ನು ಕೆಲವರು ಟೀಕಿಸಿದರು. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸುನಿಲ್ ಗವಾಸ್ಕರ್ ಸಹ ಈ ಚರ್ಚೆಯಲ್ಲಿ ಮೂಗು ತುರಿಸಿದರು.
ಟೀಕೆ ಹಾಗೂ ಟಿಪ್ಪಣೆಗಳಿಗೆ ವಿರಾಟ್ ತಮ್ಮ ಬ್ಯಾಟ್‌ನಿಂದಲೇ ಮೈದಾನದಿಂದ ಉತ್ತರ ನೀಡಿದರು. ಇನ್ನು ಸ್ಪಿನ್ ಬೌಲರ್ ವಿರುದ್ಧ ಬ್ಯಾಟ್ ಮಾಡಲು ಹೆಣಗಾಡುತ್ತಾರೆ ಎಂಬ ಮಾತಿಗೂ ಉತ್ತರಿಸಿದರು. ವಿರಾಟ್ ಅವರ ಸ್ಲಾಗ್ ಸ್ವೀಪ್‌ನಿಂದ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ವಿರಾಟ್ ಕೊಹ್ಲಿ ಬಗ್ಗೆ ಎಬಿಡಿ ಹೇಳಿದ್ದೇನು?
ವಿರಾಟ್ ಕೊಹ್ಲಿ ಅವರನ್ನು ಹೀಯಾಳಿಸುತ್ತಿದ್ದ ಟೀಕಾಕಕರಿಗೆ ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಆಟಗಾರ ಹಾಗೂ ಮಾಜಿ ಆರ್‌ಸಿಬಿ ಪ್ಲೇಯರ್ ಎಬಿ ಡಿವಿಲಿಯರ್ಸ್ ಕೆಂಡ ಕಾರಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಮೇಲೆ ಬಂದ ಹೇಳಿಕೆಗಳನ್ನು ಕೇಳಿ ಆನಂದಿಸುತ್ತಾರೆ. ಅವರು ಭಾರತದ ರೋಲ್ ಮಾಡೆಲ್ ಎಂದು ಟೀಕಿಸುವ ಸುನಿಲ್ ಗವಾಸ್ಕರ್ ಹಾಗೂ ಉಳಿದವರಿಗೆ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದರು.
ಜಿಯೋ ಸಿನೆಮಾ ಜೊತೆ ಮಾತನಾಡಿರುವ ಎಬಿಡಿ ಹಲವು ವಿಷಯಗಳ ಬಗ್ಗೆ ಗಮನ ಹರಿಸಿದ್ದಾರೆ. ವಿರಾಟ್ ಎದುರಿಸುತ್ತಿರುವ ಟೀಕೆಗಳ ಬಗ್ಗೆ ಪ್ರಶ್ನೆ ಕೇಳಿದಾಗ, ಹೀಗೆ ಹೇಳುವುದು ಸರಿಯಲ್ಲ. ವಿರಾಟ್ ಒಬ್ಬ ರಿಯಲ್ ಹೀರೋ ಅಲ್ಲದೆ ದೇಶದ ಹಲವು ಯುವ ಆಟಗಾರರ ರೋಲ್ ಮಾಡೆಲ್. ಅವರನ್ನು ಟೀಕಿಸುವುದ ತಪ್ಪು. ದೇಶಕ್ಕಾಗಿ ಇಷ್ಟೆಲ್ಲಾ ಮಾಡಿದವನನ್ನು ಟೀಕಿಸುವುದು ಎಷ್ಟು ಸರಿ ಎಂದಿದ್ದಾರೆ.

ಪಂದ್ಯ ಆಡುವಾಗ ಆಟಗಾರರಿಗೆ ಎಬಿಡಿ ಹೇಳಿದ ಕಿವಿ ಮಾತು ಏನು?
ನಾನು ಆರ್‌ಸಿಬಿ ಪರ ಆಡುವಾಗಲು ವಿರಾಟ್ ಕೊಹ್ಲಿ ವಿರುದ್ಧ ಆಡುವಾಗ ಸಹ ಆಟಗಾರರಿಗೆ ವಿರಾಟ್ ಕೊಹ್ಲಿಗೆ ಏನನ್ನೂ ಹೇಳಬೇಡಿ ಎಂದು ಹೇಳುತ್ತಿದ್ದೆ. ಏಕೆಂದರೆ ನೀವು ಅವನನ್ನು ಕೀಟಲೆ ಮಾಡಿದರೆ, ಅವನು ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಪ್ರೇರಿಪತನಾಗುತ್ತಾನೆ ಎಂದು ಎಬಿಡಿ ತಿಳಿಸಿದರು. ಪಿಚ್‌ನಲ್ಲಿ ನೀವು ವಿರಾಟ್ ಕೊಹ್ಲಿಗೆ ಒಂದೇ ಒಂದು ಪದವನ್ನು ಹೇಳಬೇಡಿ ಎಂದು ನಾನು ತಂಡದ ಕೊಠಡಿಯಲ್ಲಿ ನನ್ನ ಸಹ ಆಟಗಾರರಿಗೆ ಹೇಳುತ್ತಿದ್ದೆ. ಏನಾದರೂ ನೀವು ವಿರಾಟ್‌ಗೆ ಹೇಳಿದರೆ ಅವರು ಶತಕ ಬಾರಿಸುತ್ತಾರೆ. ಅವರು ಟೀಕೆಗಳಿಂದ ಪ್ರೇರೇಪಿಸಲ್ಪಡುತ್ತಾರೆ ಎಂದು ಹೇಳಿದರು.
ಐಪಿಎಲ್ 2024ರಲ್ಲಿ ವಿರಾಟ್ ಪ್ರದರ್ಶನ
ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಋತುವಿನ 15 ಪಂದ್ಯಗಳಲ್ಲಿ 741 ರನ್‌ಗಳನ್ನು 154.69ರ ಸರಾಸರಿಯಲ್ಲಿ ಕಲೆ ಹಾಕಿದ್ದಾರೆ. ಅಲ್ಲದೆ ಈ ಬಾರಿಯ ಐಪಿಎಲ್‌ನಲ್ಲಿ ಒಂದು ಶತಕ, ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ. ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಅಲ್ಲದೆ ವಿರಾಟ್ ಮುಡಿಯಲ್ಲಿ ಆರೆಂಜ್ ಕ್ಯಾಪ್ ಸಹ ಇದೆ. ಅಲ್ಲದೆ ವಿರಾಟ್ ಐಪಿಎಲ್ ಇತಿಹಾಸದಲ್ಲಿ ಯಾರು ಮಾಡದ ದಾಖಲೆಯನ್ನು ಸಹ ಮಾಡಿದ್ದಾರೆ. ವಿರಾಟ್ ಐಪಿಎಲ್‌ನಲ್ಲಿ 8000 ರನ್ ಗಡಿ ದಾಟಿರುವ ದಾಖಲೆಯನ್ನು ನಿರ್ಮಿಸಿದ್ದಾರೆ. ಇವರನ್ನು ಬಿಟ್ಟರೆ, ಇದರ ಅಕ್ಕ ಪಕ್ಕದಲ್ಲೂ ಯಾರೂ ಇಲ್ಲ.












Click it and Unblock the Notifications