ABCಗಿಂತ ಮುಂಚೆ RCB ಎಂದು ಹೇಳಲು ಕಲಿತ ಎಬಿಡಿ ಪುತ್ರ: ಕ್ಯಾಟ್ ಕ್ಯೂಟ್ ವಿಡಿಯೊ ನೋಡಿ
ವಿಶ್ವದಲ್ಲೇ ಅತ್ಯಂತ ದೊಡ್ಡ ಲೀಗ್ ಐಪಿಎಲ್ ಆಗಿದೆ. ಇನ್ನೂ ಆರ್‌ಸಿಬಿ ಅಂದ್ರೇನೇ ಐಪಿಎಲ್ ಪವರ್ ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ತಂಡ ಇದಾಗಿದೆ. ಇದೀಗ ಬೆಂಗಳೂರು ತಂಡದ ಆಪದ್ಬಾಂಧವ ಅಂತಲೇ ಹೆಸರುವಾಸಿಯಾಗಿದ್ದ ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಅವರ ಮಗನ ಆರ್‌ಸಿಬಿ ಅಭಿಮಾನದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಎಬಿ ಡಿವಿಲಿಯರ್ಸ್ ಪುತ್ರ ಎಬಿಸಿಗಿಂತ ಮುಂಚೆ ಆರ್‌ಸಿಬಿ ಎಂದು ಕ್ಯೂಟ್ ಕ್ಯೂಟ್ ಆಗಿ ಕೂಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಐಪಿಎಲ್ 18ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಆರ್‌ಸಿಬಿ ಮತ್ತು ಕೆಕೆಆರ್ ನಡುವೆ ನಡೆದಿದ್ದು, ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಬೀಗಿದೆ. ಇದರ ಬೆನ್ನಲ್ಲೇ ಈ ಕ್ಯೂಟ್ ವಿಡಿಯೋ ವೈರಲ್ ಆಗಿದೆ.

ಆರ್‌ಸಿಬಿ ಇದುವರೆಗೂ ನಡೆದ 17 ಆವೃತ್ತಿಗಳಲ್ಲೂ ಒಂದೇ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ. ಇದೀಗ 18ನೇ ಸೀಸನ್‌ಲ್ಲಿ ಆರ್‌ಸಿಬಿ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. ಅಲ್ಲದೆ, ಈ ಬಾರಿಯೂ ಕೂಡ ಪ್ರತಿ ಬಾರಿಯಂತೆ 'ಈ ಸಲ ಕಪ್ ನಮ್ದೆ' ಎನ್ನುವ ಘೋಷ ವಾಕ್ಯಗಳು ಜೋರಾಗಿ ಕೇಳಿಬರುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇದೇ ಘೋಷವಾಕ್ಯ ಕೇಳಿಬರುತ್ತಿದೆ.
ಇದುವರೆಗೂ ನಡೆದಿರುವ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲದಿದ್ದರೂ ಆರ್‌ಸಿಬಿಗೆ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ, ಬದಲಾಗಿ ದುಪ್ಪಟ್ಟಾಗುತ್ತಲಿದೆ. ಅಲ್ಲದೆ, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಇದಕ್ಕೆ ಸಾಕ್ಷಿ ವಿಡಿಯೋವೊಂದು ಇಲ್ಲಿದೆ ನೋಡಿ.
ಇದುವರೆಗೂ ನಡೆದಿರುವ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಇನ್ನು 18ನೇ ಆವೃತ್ತಿ ಆರಂಭಕ್ಕೂ ಮುನ್ನ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ಉದ್ಘಾಟನಾ ಪಂದ್ಯ ನಡೆದಿದೆ. ಅಭಿಮಾನಿ ಬಳಗವೊಂದು ಆರ್‌ಸಿಬಿ ಟೀಶರ್ಟ್ ಧರಿಸಿ ಸುಮಾರು 100 ಅಡಿಯ ತೇರನ್ನು ಏರಿ ಕನ್ನಡದ ಬಾವುಟ ಹಾಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಐಪಿಎಲ್‌ನ 18ನೇ ಆವೃತ್ತಿಯ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿಯು ಕೋಲ್ಕತ್ತ ನೈಟ್ ರೈಡರ್ಸ್ ಅನ್ನು ಅನ್ನು ಬಗ್ಗು ಬಡಿದಿದೆ.
ಇನ್ನೂ ವೀರಾ ಬಲ್ಲಾಳ ಎಂಬುವವರು ತೇರಿನ ಮೇಲೇರಿದ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದುವರೆಗೂ 49.1K ಜನ ವೀಕ್ಷಣೆ ಮಾಡಿದ್ದಾರೆ. 2.9K ಮೆಚ್ಚುಗಳು, 31 ಕಾಮೆಂಟ್‌ಗಳು ಬಂದಿವೆ. ಐಪಿಎಲ್ ಹಣಾಹಣಿಗೂ ಮುನ್ನ ಆರ್‌ಸಿಬಿ ಅಭಿಮಾನಿಗಳು ತಮ್ಮ ಅಭಿಮಾನ ಎಂತಹದ್ದು ಅನ್ನುವುದನ್ನು ಸಾರಿದ್ದಾರೆ. ಹೀಗೆ ಎಲ್ಲಾ ತಂಡಗಳಿಗಿಂತಲೂ ಆರ್‌ಸಿಬಿ ತಂಡದ ಅಭಿಮಾನಿಗಳ ಕ್ರೇಜ್ ತುಸು ಜೋರಾಗಿಯೇ ಇರುತ್ತದೆ.












Click it and Unblock the Notifications