RCB: ಆರ್‌ಸಿಬಿ ಪ್ಲೇ ಆಫ್‌ ತಲುಪುವ ಬಗ್ಗೆ ಎಬಿ ಡಿವಿಲಿಯರ್ಸ್ ಹೇಳಿದ್ದೇನು?

ಐಪಿಎಲ್ 2025ರ ಆರಂಭಕ್ಕೆ ಇನ್ನು ಎರಡು ದಿನ ಬಾಕಿ ಉಳಿದಿದೆ. ಎಲ್ಲಾ ತಂಡಗಳು ಅಭ್ಯಾಸ ನಡೆಸುತ್ತಿದ್ದು, ಗೆಲುವಿನ ಮೂಲಕ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಲು ಕಾಯುತ್ತಿವೆ. ಮಾರ್ಚ್ 22ರಂದು ನಡೆಯುವ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ತಂಡ ಆರ್ ಸಿಬಿ ವಿರುದ್ಧ ಸೆಣೆಸಲಿದೆ. ಐಪಿಎಲ್ ಆರಂಭಕ್ಕೆ ಮುನ್ನ ಅನೇಕ ಮಾಜಿ ಆಟಗಾರರು, ಕ್ರಿಕೆಟ್ ಪಂಡಿತರು ತಂಡಗಳ ಬಗ್ಗೆ ವಿಮರ್ಶೆಗಳನ್ನು ಮಾಡಿದ್ದಾರೆ, ತಂಡದ ಬಲಾಬಲ ಚರ್ಚೆ ಮಾಡಿದ್ದಾರೆ. ಯಾವ ತಂಡ ಪ್ಲೇ ಆಫ್ ತಲುಪಬಹುದು ಎನ್ನುವ ಲೆಕ್ಕಾಚಾರ ಕೂಡ ಶುರುವಾಗಿದೆ.

ಆರ್ ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಕೂಡ ಐಪಿಎಲ್ 2025ರ ತಂಡಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಎಲ್ಲಾ ತಂಡಗಳ ಬಲ, ದೌರ್ಬಲ್ಯಗಳ ಮಾತನಾಡಿರುವ ಅವರು, ಯಾವ ತಂಡಗಳು ಬಲಿಷ್ಠವಾಗಿವೆ ಎಂದು ಹೇಳಿದ್ದಾರೆ.

Ab de villiers big prediction about ipl 2025 rcb playoff chances

ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಎಬಿಡಿ

ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುವ ಸಂದರ್ಭದಲ್ಲಿ ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದ ಬಗ್ಗೆ ಕೂಡ ಮಾತನಾಡಿದ್ದಾರೆ. ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದ ವೇಳೆ ಅಭಿಮಾನಿಗಳು 'ಎಬಿಡಿ, ಎಬಿಡಿ' ಎಂದು ಕಿರುಚಿದ್ದರು. ಎಬಿಡಿ ನಿವೃತ್ತಿ ಘೋಷಿಸಿ ನಾಲ್ಕು ವರ್ಷಗಳಾದರೂ ಅಭಿಮಾನಿಗಳು ಮಾತ್ರ ಅವರನ್ನು ಇನ್ನೂ ಮರೆತಿಲ್ಲ. ಅಭಿಮಾನಿಗಳ ಅಭಿಮಾನ ನೋಡಿದ ಎಬಿಡಿ ಧನ್ಯವಾದ ತಿಳಿಸಿದರು.

ಆರ್ ಸಿಬಿ ಬಲಿಷ್ಠವಾಗಿದೆ

ಈ ಬಾರಿ ಆರ್ ಸಿಬಿ ತಂಡ ಬಲಿಷ್ಠವಾಗಿದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಮುಖ್ಯವಾಗಿ ಈ ಬಾರಿ ತಂಡದ ಬೌಲಿಂಗ್ ಉತ್ತಮವಾಗಿದೆ. ತಂಡದ ಬ್ಯಾಟಿಂಗ್‌ನಲ್ಲಿ ಯಾವುದೇ ಕೊರತೆ ಇಲ್ಲ, ಆಲ್‌ರೌಂಡರ್ ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ತಂಡಕ್ಕೆ ಸಮತೋಲನ ತಂದುಕೊಡುತ್ತಾರೆ ಎಂದು ಅವರು ಹೇಳಿದ್ದಾರೆ. ಆರ್ ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

Take a Poll

ಯಾವ ತಂಡಗಳು ಪ್ಲೇಆಫ್‌ಗೆ?

ಯಾವ ತಂಡಗಳು ಈ ಬಾರಿ ಪ್ಲೇಆಫ್‌ಗೆ ಪ್ರವೇಶಿಸಬಹುದು ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಈ ಬಾರಿ ಪ್ಲೇಆಫ್ ಪ್ರವೇಶಿಸಲಿವೆ ಎಂದು ಅವರು ಅಭಪ್ರಾಯಪಟ್ಟಿದ್ದಾರೆ.

ಈಗಲೂ ಅಭಿಮಾನಿಗಳು ಎಬಿ ಡಿವಿಲಿಯರ್ಸ್ ಅವರಿಗೆ ಆರ್ ಸಿಬಿ ತಂಡಕ್ಕೆ ಮತ್ತೊಮ್ಮೆ ಆಡಿ ಎಂದು ಒತ್ತಾಯ ಮಾಡುತ್ತಲೇ ಇರುತ್ತಾರೆ. ಕನಿಷ್ಠ ಆಟಗಾರನಾಗಿ ಅಲ್ಲದೇ ಇದ್ದರೂ ಬ್ಯಾಟಿಂಗ್ ಕೋಚ್ ಆಗಿಯಾದರೂ ಅವರನ್ನು ಆರ್ ಸಿಬಿಗೆ ಕರೆತರುವಂತೆ ಫ್ರಾಂಚೈಸ್‌ಗೆ ಒತ್ತಾಯ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+