ಹಿಂದೂ ವಿರೋಧಿ ಸರ್ಕಾರ: ಶಿರಸಿಯಲ್ಲಿ ಕಾಂಗ್ರೆಸ್ ವಿರುದ್ಧ ಯೋಗಿ ವಾಗ್ದಾಳಿ

ಶಿರಸಿ, ಮೇ 3: 'ಬಿಜೆಪಿಯ 23 ಕಾರ್ಯಕರ್ತರನ್ನು ಜಿಹಾದಿಗಳು ಹತ್ಯೆ ಮಾಡಿದರೂ ಇಲ್ಲಿನ ಸರ್ಕಾರ ದೇಶದ್ರೋಹಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಹಿಂದೂ ವಿರೋಧಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ಹಕ್ಕು ಇಲ್ಲ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳಿಂದ ದೇಶದಲ್ಲಿಯೇ ಅತಿ ಹೆಚ್ಚು ಅನ್ನದಾತರ ಆತ್ಮಹತ್ಯೆಗಳು ಇಲ್ಲಿ ಸಂಭವಿಸಿವೆ. ಆದರೆ ಇಲ್ಲಿನ ಸರ್ಕಾರ ನಿದ್ದೆಯಲ್ಲಿಯೇ 5 ವರ್ಷಗಳನ್ನು ಕಳೆದಿದೆ ಎಂದು ವ್ಯಂಗ್ಯವಾಡಿದರು.

ಈ ಸರ್ಕಾರ ಭಯೋತ್ಪಾದಕರಿಂದ ನಡೆಯುತ್ತಿದೆ. ಈ ಚುನಾವಣೆ ಅತ್ಯಂತ ಮಹತ್ವಪೂರ್ಣವಾಗಿದ್ದು, ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕಿದೆ ಎಂದು ಹೇಳಿದರು.

up cm yogi adityanath campaign in sirsi

ಉತ್ತರ ಪ್ರದೇಶದಲ್ಲಿ ಜಿಹಾದಿಗಳಿಲ್ಲ. ಕರ್ನಾಟಕದಲ್ಲಿ ಜಿಹಾದಿಗಳು ತುಂಬಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅಮಾಯಕರನ್ನು ಹತ್ಯೆ ಮಾಡುವುದು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ. ಕಾಂಗ್ರೆಸ್ ಎಲ್ಲವನ್ನೂ ಒಡೆಯುತ್ತಿದೆ. ಈ ಪಡೆಯುವ ಪಕ್ಷದ ಆಡಳಿತವನ್ನು ಕೊನೆಗಾಣಿಸಿ ಎಂದು ಯೋಗಿ ಕರೆ ನೀಡಿದರು.

ಕರ್ನಾಟಕದಲ್ಲಿ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಸರ್ಕಾರದ ಅವಶ್ಯಕತೆ ಇದೆ. ಬಿಜೆಪಿ ಮಾತ್ರ ಅಭಿವೃದ್ಧಿಯ ಕಾರ್ಯಸೂಚಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ಧಿಗೆ ಹೆಚ್ಚು ವೇಗ ಸಿಗುತ್ತದೆ. ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.

ಯೋಗಿ ಬಂದರೆ ಅನುಕೂಲ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಿಜೆಪಿ ಪರ ಪ್ರಚಾರಕ್ಕೆ ಕರ್ನಾಟಕಕ್ಕೆ ಬರುವುದು ನಮಗೇ ಹೆಚ್ಚು ಅನುಕೂಲಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು

ದಾವಣಗೆರೆಯಲ್ಲಿ ಪಕ್ಷದ ಪ್ರಚಾರಕ್ಕೆಂದು ಆಗಮಿಸಿದ ಅವರು ಯೋಗಿ ಅವರ ಪ್ರವಾಸದ ಕುರಿತು ಪ್ರತಿಕ್ರಿಯೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+