ಕದ್ದುಮುಚ್ಚಿ ಮೊಬೈಲ್ ಬಳಕೆ; 16 ಮೊಬೈಲ್ ಪುಡಿ ಮಾಡಿದ ಪ್ರಿನ್ಸಿಪಾಲ್

Recommended Video

      ಸ್ವಚ್ಛತೆ ಇಲ್ಲದೇ ವಸತಿ ಶಾಲೆ ಮಕ್ಕಳಲ್ಲಿ ಹಬ್ಬಿದ ಚರ್ಮ ರೋಗ; ಸಚಿವ ಸುರೇಶ್ ಕುಮಾರ್ ಎಚ್ಚರಿಕೆ | Oneindia Kannada

      ಶಿರಸಿ, ಸೆಪ್ಟೆಂಬರ್ 13: ಮೊಬೈಲ್ ಬಳಕೆಯಿಂದ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ಎಷ್ಟೋ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ಹೀಗೆ ನಿಷೇಧ ಮಾಡಿದ್ದರೂ ಕದ್ದುಮುಚ್ಚಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದು ನಿಂತಿಲ್ಲ. ಇಂಥ ವಿದ್ಯಾರ್ಥಿಗಳಿಗೆ ಶಿರಸಿಯ ಕಾಲೇಜಿನ ಪ್ರಾಂಶುಪಾಲರೊಬ್ಬರು ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.

      ಶಿರಸಿಯ ಎಂಇಎಸ್ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದರು. ಈ ವಿಷಯ ಪ್ರಿನ್ಸಿಪಾಲ್ ಆರ್ ಎಂ ಭಟ್ ಅವರ ಗಮನಕ್ಕೂ ಬಂದಿತ್ತು. ಇದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಯೋಚಿಸಿದ ಅವರು, ಏಕಾಏಕಿ ತಪಾಸಣೆ ನಡೆಸಿ, ವಿದ್ಯಾರ್ಥಿಗಳಿಂದ ಮೊಬೈಲ್ ಗಳನ್ನು ವಶಪಡಿಸಿಕೊಂಡರು.

      Principal Crushed 16 Mobile Phone Of Students In Sirsi

      ಒಟ್ಟಾರೆ ಹದಿನಾರು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡರು. ಅಷ್ಟೇ ಅಲ್ಲ, ಮೊಬೈಲಿನಿಂದಾಗುವ ದುಷ್ಪರಿಣಾಮದ ಕುರಿತು ತಿಳಿಹೇಳುತ್ತಲೇ ವಿದ್ಯಾರ್ಥಿಗಳ ಎದುರೇ ಮೊಬೈಲ್ ಗಳನ್ನು ಸುತ್ತಿಗೆಯಿಂದ ಕುಟ್ಟಿ ಒಡೆದುಹಾಕಿದ್ದಾರೆ.

      ಹೀಗೆ ಮೊಬೈಲ್ ಒಡೆದುಹಾಕಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+