ಜೂನ್ 12ರಂದು ಟ್ರಂಪ್ - ಕಿಮ್ ಜಾಂಗ್ ಉನ್ ಸಿಂಗಾಪುರದಲ್ಲಿ ಮುಖಾಮುಖಿ

ವಾಷಿಂಗ್ಟನ್, ಜೂನ್ 8: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವಿನ ಬಹು ನಿರೀಕ್ಷಿತ ಭೇಟಿ ಇದೇ ಜೂನ್ 12ರಂದು ನಡೆಯಲಿದೆ.

ಸಿಂಗಾಪುರದ ಭವ್ಯ ಸೆಂಟೋಸಾ ದ್ವೀಪದಲ್ಲಿ ಅಮೆರಿಕಾ ಮತ್ತು ಉತ್ತರ ಕೊರಿಯಾದ ಶೃಂಗ ಸಭೆ ನಡೆಯಲಿದ್ದು ಇಡೀ ಜಗತ್ತೇ ಇದನ್ನು ಕುತೂಹಲದ ಕಣ್ಣುಗಳಿಂದ ನೋಡುತ್ತಿದೆ. ಇದೇ ಶೃಂಗ ಸಭೆಯಲ್ಲಿ ಇದೇ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ಪರಸ್ಪರ ಮುಖಾಮುಖಿಯಾಗಲಿದ್ದಾರೆ.

ಒಂದೊಮ್ಮೆ ಈ ಶೃಂಗಸಭೆ ಯಶಸ್ವಿಯಾಗಿದ್ದೇ ಆದಲ್ಲಿ ಶ್ವೇತ ಭವನಕ್ಕೆ ಕಿಮ್ ಜಾಂಗ್ ಉನ್ ರನ್ನು ಆಹ್ವಾನಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

US-North Korea summit: North Korea leader Kim may get US invite

ಜೂನ್ 12ರ ಶೃಂಗಸಭೆಗೆ ಪೂರ್ವಭಾವಿಯಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.

'ಕೊರಿಯಾ ಯುದ್ಧ' ಕೊನೆಗೊಳಿಸುವುದಾಗಿ ಒಪ್ಪಂದ ನಡೆದಲ್ಲಿ ಮಾತ್ರ ಇದೆಲ್ಲಾ ಸಾಧ್ಯವಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕಾ ಮತ್ತು ಅದರ ಮಿತ್ರ ರಾಷ್ಟ್ರಗಳು ಉತ್ತರ ಕೊರಿಯಾ ಅಣ್ವಸ್ತ್ರ ಯೋಜನೆಯನ್ನು ನಿಲ್ಲಿಸಬೇಕು ಎಂದು ಬಯಸುತ್ತಿವೆ. ಆದರೆ ಇದು ಒಂದು ಭೇಟಿಯಲ್ಲಿ ಸಾಧ್ಯವಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+