ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ವ್ಯಾಪಕ: ಲಾಕ್ ಡೌನ್ ಘೋಷಿಸಿದ ಸಿಂಗಾಪುರ

|
Google Oneindia Kannada News

ಸಿಂಗಾಪುರ, ಏಪ್ರಿಲ್ 4: ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದರೂ, ಸಿಂಗಾಪುರ ಆ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಈಗ, ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ, ಅಲ್ಲಿನ ಪ್ರಧಾನಿ ಲಾಕ್ ಡೌನ್ ಘೋಷಿಸಿದ್ದಾರೆ.

ಇದೇ ಬರುವ ಮಂಗಳವಾರದಿಂದ (ಏಪ್ರಿಲ್ 7) ಅನ್ವಯವಾಗುವಂತೆ, ಒಂದು ತಿಂಗಳ ಲಾಕ್ ಡೌನ್ ಅನ್ನು ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಪ್ರಕಟಿಸಿದ್ದಾರೆ.

ಸಿಂಗಾಪುರ ಏರ್‌ಪೋರ್ಟ್‌‌ನಲ್ಲಿ ಕೊರೊನಾ ಎಂದು ಕೂಗಿದ ಭಾರತೀಯನ ಬಂಧನ ಸಿಂಗಾಪುರ ಏರ್‌ಪೋರ್ಟ್‌‌ನಲ್ಲಿ ಕೊರೊನಾ ಎಂದು ಕೂಗಿದ ಭಾರತೀಯನ ಬಂಧನ

ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಸಿಂಗಾಪುರದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ, ಈ ಕ್ರಮಕ್ಕೆ ಅಲ್ಲಿನ ಸರಕಾರ ಮುಂದಾಗಿದೆ.

Singapore Announces One Month Lock down Effective From April 7

ತುರ್ತು ಸೇವೆಯನ್ನು ಹೊರತು ಪಡಿಸಿ, ಮಿಕ್ಕೆಲ್ಲವೂ ಒಂದು ತಿಂಗಳಿನ ಮಟ್ಟಿಗೆ ಸಂಪೂರ್ಣ ಬಂದ್ ಆಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಪ್ರಧಾನಿಗಳು ಮನವಿ ಮಾಡಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ ಅಂದರೆ ಸಿಂಗಾಪುರ್ ನಲ್ಲಿ ಭಾರಿ ದಂಡ!ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ ಅಂದರೆ ಸಿಂಗಾಪುರ್ ನಲ್ಲಿ ಭಾರಿ ದಂಡ!

ಸೂಪರ್ ಮಾರ್ಕೆಟ್‍, ಆಸ್ಪತ್ರೆ, ಸಾರಿಗೆ, ಪ್ರಮುಖ ಬ್ಯಾಂಕಿಗ್ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ಅಲ್ಲಿನ ಸರಕಾರ ತಿಳಿಸಿದೆ.

ಇದುವರೆಗೆ ಸಿಂಗಾಪುರದಲ್ಲಿ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ 260ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

English summary
Singapore Announces One Month Lock down Effective From April 7
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X