• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಕ್ರಾ, ಸಾವೇಹಕ್ಲುವಿನಿಂದ ಲಿಂಗನಮಕ್ಕಿಗೆ ನೀರು ಬಿಡುಗಡೆ

|

ಶಿವಮೊಗ್ಗ, ಜುಲೈ 29 : ಚಕ್ರಾ ಮತ್ತು ಸಾವೇಹಕ್ಲು ಅವಳಿ ಜಲಾಶಯಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ.

ನಗರ ಹೋಬಳಿಯಲ್ಲಿ ಚಕ್ರಾ ಮತ್ತು ಸಾವೇಹಕ್ಲು ಜಲಾಶಯಗಳಿವೆ. ಈ ಜಲಾಶಯಗಳು ಭರ್ತಿಯಾದರೆ ಲಿಂಗನಮಕ್ಕಿ ಜಲಾಶಯಕ್ಕೆ ನೀರನ್ನು ಬಿಡಲಾಗುತ್ತದೆ. ಲಿಂಗನಮಕ್ಕಿ ರಾಜ್ಯದ ವಿದ್ಯುತ್ ಉತ್ಪಾದನೆಗೆ ಪ್ರಮುಖ ಕೊಡುಗೆಯನ್ನು ನೀಡುವ ಜಲಾಶಯ.

ಮೈಸೂರಿನಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಮೈಸೂರಿನಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭ

1980ರಲ್ಲಿ ನಿರ್ಮಾಣ ಮಾಡಿದ ಸಾವೇಹಕ್ಲು ಜಲಾಶಯದಲ್ಲಿ 1.90 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬಹುದಾಗಿದೆ. ಚಕ್ರಾ ನದಿಗೆ ಅಡ್ಡಲಾಗಿ 1985ರಲ್ಲಿ ನಿರ್ಮಿಸಿರುವ ಜಲಾಶಯದಲ್ಲಿ 3.76 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬಹುದು.

ಮುಂಬೈನಲ್ಲಿ ನೀರಿನಲ್ಲಿ ಸಿಲುಕಿದ ಪ್ಯಾಸೆಂಜರ್ ರೈಲು: 500 ಪ್ರಯಾಣಿಕರ ರಕ್ಷಣೆಮುಂಬೈನಲ್ಲಿ ನೀರಿನಲ್ಲಿ ಸಿಲುಕಿದ ಪ್ಯಾಸೆಂಜರ್ ರೈಲು: 500 ಪ್ರಯಾಣಿಕರ ರಕ್ಷಣೆ

ಮಳೆ ನೀರನ್ನು ಲಿಂಗನಮಕ್ಕಿ ಜಲಾಶಯಕ್ಕೆ ತುಂಬಿಸುವ ಮಹತ್ವದ ಉದ್ದೇಶದಿಂದ ಈ ಅವಳಿ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಈ ಜಲಾಶಯಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಸಾವೇಹಕ್ಲುವಿನಿಂದ 1400 ಕ್ಯುಸೆಕ್, ಚಕ್ರಾದಿಂದ 500 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಕಳೆದ ಒಂದು ದಿನದಲ್ಲಿ ಕರ್ನಾಟಕದಲ್ಲಿ ಹೆಚ್ಚು ಮಳೆಯಾದದ್ದೆಲ್ಲಿ?ಕಳೆದ ಒಂದು ದಿನದಲ್ಲಿ ಕರ್ನಾಟಕದಲ್ಲಿ ಹೆಚ್ಚು ಮಳೆಯಾದದ್ದೆಲ್ಲಿ?

ಶಿವಮೊಗ್ಗದಲ್ಲಿ ಭಾರಿ ಮಳೆ : ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 183.60 ಮಿ.ಮೀ ಮಳೆಯಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 687.87 ಮಿ.ಮೀ. ಪ್ರಸ್ತುತ ಇದುವರೆಗೂ 532.10 ಮಿ.ಮೀ ಮಳೆ ದಾಖಲಾಗಿದೆ.

ಶಿವಮೊಗ್ಗದಲ್ಲಿ 11.80 ಮಿ.ಮೀ., ಭದ್ರಾವತಿಯಲ್ಲಿ 7.60 ಮಿ.ಮೀ., ತೀರ್ಥಹಳ್ಳಿಯಲ್ಲಿ 43.40 ಮಿ.ಮೀ., ಸಾಗರದಲ್ಲಿ 51.80 ಮಿ.ಮೀ., ಶಿಕಾರಿಪುರದಲ್ಲಿ 08.60 ಮಿ.ಮೀ., ಸೊರಬದಲ್ಲಿ 13.00 ಮಿ.ಮೀ. ಮತ್ತು ಹೊಸನಗರದಲ್ಲಿ 47.40 ಮಿ.ಮೀ. ಮಳೆಯಾಗಿದೆ.

ಜಲಾಶದ ನೀರಿನ ಮಟ್ಟ ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1,819 ಅಡಿ. ಸೋಮವಾರ 1,774.75 ಅಡಿ ನೀರಿನ ಸಂಗ್ರಹವಿದೆ.

English summary
After heavy rain at catchment area of Savehaklu and Chakra reservoir Nagara water released to Linganamakki dam. Linganamakki dam major power source for the Karnataka state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X