• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ; ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ತಪ್ಪಿದ ಅನಾಹುತ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್ 10; ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಭಾರೀ ಅನಾಹುತ ತಪ್ಪಿದೆ. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯಾತಪ್ಪಿ ಬಿದ್ದ ಮಹಿಳೆಯನ್ನು ರೈಲ್ವೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಪ್ರಾಣದ ಹಂಗು ತೊರೆದು ಪೊಲೀಸರು ಮಹಿಳೆಯ ರಕ್ಷಣೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಾಗ ಈ ಘಟನೆ ಸಂಭವಿಸಿದೆ. ಬೆಳಗ್ಗೆ 6.55ಕ್ಕೆ ಶಿವಮೊಗ್ಗ ನಿಲ್ದಾಣಕ್ಕೆ ಬರುವ ರೈಲು 7.5ಕ್ಕೆ ನಿಲ್ದಾಣದಿಂದ ಹೊರಡಲಿದೆ. ಮಂಗಳವಾರ ಬೆಳಗ್ಗೆ ರೈಲು ಹೊರಟಾಗ ಘಟನೆ ಸಂಭವಿಸಿದೆ.

ಸಂಬಂಧಿಕರನ್ನು ರೈಲು ಹತ್ತಿಸಲು ಬಂದಿದ್ದ ಮಹಿಳೆ ರೈಲು ಏರಿದ್ದರು. ರೈಲು ಹೊರಡುತ್ತಿದ್ದಂತೆ ಗಾಬರಿಯಿಂದ ಕೆಳಗಿಳಿಯಲು ಮುಂದಾಗಿದ್ದಾರೆ. ವ್ಯಕ್ತಿಯೊಬ್ಬರು ಮಹಿಳೆಯ ಕೈ ಹಿಡಿದು ಕೆಳಗಿಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

2022ರ ಆರಂಭದಲ್ಲೇ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ2022ರ ಆರಂಭದಲ್ಲೇ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ

ರೈಲು ಚಲಿಸುತ್ತಿದ್ದ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡು ಮಹಿಳೆ ಪ್ಲಾಟ್ ಫಾರಂಗೆ ಕಾಲಿಟ್ಟಿದ್ದಾರೆ. ಈ ವೇಳೆ ವಿರುದ್ಧ ದಿಕ್ಕಿಗೆ ಮುಖ ಮಾಡಿದ್ದು ಮತ್ತು ಸೀರೆ ಧರಿಸಿದ್ದರಿಂದ ಮಹಿಳೆ ಪ್ಲಾಟ್ ಫಾರಂ ಮೇಲೆ ಬಿದ್ದಿದ್ದಾರೆ.

ಬೆಂಗಳೂರು; 8 ಡೆಮು ರೈಲು ಸಂಚಾರ ಆರಂಭ, ವೇಳಾಪಟ್ಟಿ ಬೆಂಗಳೂರು; 8 ಡೆಮು ರೈಲು ಸಂಚಾರ ಆರಂಭ, ವೇಳಾಪಟ್ಟಿ

ಪ್ರಾಣದ ಹಂಗು ತೊರೆದ ಪೊಲೀಸ್; ಪ್ಲಾಟ್ ಫಾರಂ ಮೇಲೆ ನಿಂತಿದ್ದ ರೈಲ್ವೆ ಪೊಲೀಸರು ಪ್ರಾಣದ ಹಂಗು ತೊರೆದು ಮಹಿಳೆಯ ರಕ್ಷಣೆ ಮಾಡಿದ್ದಾರೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ನ ಸಿಬ್ಬಂದಿ ಜಗದೀಶ್, ರೈಲ್ವೆ ಪೊಲೀಸರಾದ ಅಣ್ಣಪ್ಪ ಎ. ಎಸ್. ಮತ್ತು ಬಿ. ಎಸ್. ಸಂತೋಷ್ ರೈಲಿನಿಂದ ಮಹಿಳೆ ಬೀಳುವುದನ್ನು ನೋಡಿ ಆಕೆಯ ನೆರವಿಗೆ ಬಂದಿದ್ದಾರೆ. ಮಹಿಳೆ ರೈಲಿಗೆ ಸಿಲುಕದಂತೆ ನೋಡಕೊಂಡಿದ್ದಾರೆ.

ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ

ರೈಲ್ವೆ ಪೊಲೀಸರ ಕಾರ್ಯಕ್ಕೆ ಸ್ಥಳದಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಈ ದೃಶ್ಯ ಗಮನಿಸಿ ರೈಲ್ವೆ ಪೊಲೀಸರ ಕಾರ್ಯಕ್ಕೆ ಶಹಬ್ಬಾಸ್ ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಮೈಸೂರು ವಿಭಾಗದ ಡಿವಿಷನಲ್ ಮ್ಯಾನೇಜರ್ ರಾಹುಲ್ ಅಗರ್ ವಾಲ್ ಅವರು ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
A woman was saved by police at Shivamogga railway station when she fell off a moving train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X