ಸಕ್ರೇಬೈಲಿನಲ್ಲಿ ಬೈಕ್, ಕಾರಿಗೆ ಗುದ್ದಿದ ಲಾರಿ ಅಪಘಾತದ ವಿಡಿಯೋ ವೈರಲ್
ಶಿವಮೊಗ್ಗ, ಮೇ 12: ಶಿವಮೊಗ್ಗ ಜಿಲ್ಲೆಯ ಸಕ್ರೇಬೈಲಿನ ಸಮೀಪ ನಿನ್ನೆ ಭೀಕರ ಅಪಘಾತ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೀರ್ಥಹಳ್ಳಿಯಿಂದ ಕಾರಿನಲ್ಲಿ ಬರುತ್ತಿದ್ದವರು ಮಾಡಿರುವ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವೇಗವಾಗಿ ಬಂದ ಲಾರಿ ತಿರುವಿನಲ್ಲಿ ಹಿಂಭಾಗದಿಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು, ಬಳಿಕ ಬೈಕ್ ಹಿಂಬದಿಯ ಕಾರ್ ಗೂ ಲಾರಿ ಡಿಕ್ಕಿಯಾಗಿದೆ. ಅಪಘಾತವಾಗುವವರೆಗೂ ಕಾರಿನಲ್ಲಿದ್ದ ಯುವತಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಅಪಫಾತದ ರಭಸಕ್ಕೆ ಬೈಕ್ ಸವಾರ, ಶಿವಮೊಗ್ಗ ವಿದ್ಯಾನಗರದ ಜನಾರ್ಧನ್ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಬೈಕ್ ಸವಾರ ರಫೀಕ್ ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಯುವತಿ ಪ್ರತಿಕ್ಷಾಗೂ ಸಣ್ಣಪುಟ್ಟ ಗಾಯವಾಗಿದೆ. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications