ಒಂದೇ ಹುಡುಗಿಗಾಗಿ ಇಬ್ಬರ ಹೊಡೆದಾಟ; ಕೊಲೆಯಲ್ಲಿ ಕೊನೆಯಾಯ್ತು ಜಗಳ

ಶಿವಮೊಗ್ಗ, ಜನವರಿ 20: ಒಂದೇ ಯುವತಿಯನ್ನು ಇಬ್ಬರು ಯುವಕರು ಪ್ರೀತಿಸಿ, ಅದೇ ವಿಚಾರಕ್ಕೆ ಜಗಳವಾಡಿಕೊಂಡು ಒಬ್ಬ ಯುವಕನ ಕೊಲೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಮೊಹಮ್ಮದ್ ಅಲಿ ಎನ್ನಲಾಗಿದೆ. ತೌಸಿಫ್ ಎಂಬಾತನೇ ಕೊಲೆ ಆರೋಪಿ. ಕೊಲೆಯಾದ ಮೊಹಮ್ಮದ್ ಆಲಿ ಹಾಗೂ ಆರೋಪಿ ತೌಸಿಫ್ ಇಬ್ಬರೂ ನಗರದ ಇಲಿಯಾಸ್ ಬಡಾವಣೆ ನಿವಾಸಿಗಳು. ಇವರಿಬ್ಬರು ಪ್ರೀತಿಸುತ್ತಿದ್ದ ಯುವತಿ ಸಹ ಅದೇ ಬಡಾವಣೆ ನಿವಾಸಿಯಾಗಿದ್ದಳು.

ಕೊಲೆಯಾದ ಮೊಹಮ್ಮದ್ ಆಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಆರೋಪಿ ತೌಸಿಫ್ ವಾಹನ ಚಾಲಕನಾಗಿದ್ದ. ಇಬ್ಬರು ಒಬ್ಬಳೇ ಯುವತಿಯನ್ನು ಪ್ರೀತಿಸುತ್ತಿದ್ದರು. ನಿನ್ನೆ ಸಂಜೆ ಇದೇ ವಿಷಯಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭ ತೌಸಿಫ್, ಮೊಹಮ್ಮದ್ ಅಲಿಗೆ ಚಾಕು ಇರಿದು ಪರಾರಿಯಾಗಿದ್ದಾನೆ.

Two Lovers Quarrel For Same Girl Ends In Murder In Shivamogga

ಘಟನೆ ನಂತರ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+