ಶಿವಮೊಗ್ಗದಲ್ಲಿ ಜೂ.1 ರಿಂದ ರೈಲು ಆರಂಭ: ಮಾಹಿತಿ ಇಲ್ಲಿದೆ
ಶಿವಮೊಗ್ಗ, ಮೇ 22: ಜೂನ್ 1 ರಂದು ಸಂಜೆ 5.30 ಕ್ಕೆ ಬೆಂಗಳೂರಿನ ಯಶವಂತಪುರದಿಂದ ರೈಲು ಹೊರಡಲಿದ್ದು, ರಾತ್ರಿ 9.55 ಕ್ಕೆ ಶಿವಮೊಗ್ಗ ತಲುಪಲಿದೆ. ಆದರೆ ಕೊರೊನಾ ವೈರಸ್ ಸಂದರ್ಭದಲ್ಲಿ ಕೆಲವು ನಿಯಮಾವಳಿಗಳನ್ನು ಪಾಲಿಸಲು ರೈಲ್ವೇ ಇಲಾಖೆ ತಿಳಿಸಿದೆ.
Recommended Video
ಈ ಕುರಿತು ಸ್ಪಷ್ಟಪಡಿಸಿರುವ ಶಿವಮೊಗ್ಗ ರೈಲ್ವೆ ನಿಲ್ದಾಣ ಮಾಸ್ಟರ್ ಕೃಷ್ಣರವರು, ""ಜೂನ್ 1 ರಂದು ಯಶವಂತಪುರದಿಂದ ಸಂಜೆ ಹೊರಟು, ರಾತ್ರಿ ವೇಳೆಗೆ ಶಿವಮೊಗ್ಗ ತಲುಪಲಿದೆ. ಮರುದಿನ ಶಿವಮೊಗ್ಗದಿಂದ ಬೆಳಿಗ್ಗೆ 5.30 ಕ್ಕೆ ಅದೇ ರೈಲು ಹೊರಡಲಿದ್ದು, 10.30 ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.
ಹಾಗಾಗಿ ಬೆಳಿಗ್ಗೆ ಬರುವ ಪ್ರಯಾಣಿಕರು, ರೈಲು ಹೊರಡುವ ನಿಗದಿತ ಸಮಯಕ್ಕಿಂತ 1 ಒಂದು ಅಥವಾ ಒಂದೂವರೆ ಗಂಟೆ ಮುಂಚಿತವಾಗಿ ಪ್ರಯಾಣಿಕರು ನಿಲ್ದಾಣದಲ್ಲಿ ಇರಬೇಕು ಎಂದು ತಿಳಿಸಿದ್ದಾರೆ.

ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೇ ಬರಬೇಕು. ಬಂದ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದಲ್ಲಿ ಸ್ಯಾನಿಟೈಸರ್ ಗಳನ್ನು ನೀಡಲಿದೆ ಎಂದರು.
ಒಂದು ಭೋಗಿಯಲ್ಲಿ 90 ಜನರು ಪ್ರಯಾಣಿಸಬಹುದಾಗಿದ್ದು, ಇದರ ಅರ್ಧದಷ್ಟು ಮಾತ್ರ ಪ್ರಯಾಣಿಕರನ್ನ ಹಾಕಲಾಗುವುದು. ಟಿಕೇಟನ್ನ ರೈಲ್ವೆ ನಿಲ್ದಾಣದಲ್ಲಿ ನೀಡಲಾಗುವುದಿಲ್ಲ. ಆನ್ ಲೈನ್ ಬುಕ್ ಮೂಲಕವೇ ಪ್ರಯಾಣಿಕರು ಟಿಕೇಟನ್ನ ಪಡೆದು ಪ್ರಯಾಣಿಸಬೇಕಿದೆ ಎಂದರು.
ಯಶವಂತಪುರದಿಂದ ಹೊರಡುವ ರೈಲಿನ ಸಂಖ್ಯೆ 02089 ಆಗಿದ್ದು, ಶಿವಮೊಗ್ಗದಿಂದ ಹೊರಡುವ ರೈಲಿನ ಸಂಖ್ಯೆ 02090 ಆಗಿರುತ್ತದೆ. ಇದು ಒಂದೇ ರೈಲು ಸದ್ಯಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಂಚರಿಸಲಿದೆ. ಜೂನ್ 2 ರ ನಂತರ ಶಿವಮೊಗ್ಗ ಹಾಗೂ ಯಶವಂತಪುರದ ನಡುವೆ ಈ ಹಿಂದೆ ಇದ್ದ ಸಮಯದಲ್ಲಿಯೇ ರೈಲು ಓಡಾಡಲಿದೆ.
ಈ ರೈಲಿಗೆ ಎಂದಿನಂತೆ ಯಶವಂತಪುರ, ತುಮಕೂರು, ಕಡೂರು, ಭದ್ರಾವತಿ ಮೂಲಕ ಶಿವಮೊಗ್ಗ ತಲುಪಲಿದೆ.












Click it and Unblock the Notifications