• search
 • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗಕ್ಕೆ ಇದು ಎರಡನೇ ಲೋಕಸಭಾ ಉಪ ಚುನಾವಣೆ

|
   ಶಿವಮೊಗ್ಗಕ್ಕೆ ಈಗ ನಡೆಯಲಿರುವುದು 2ನೇ ಲೋಕಸಭಾ ಉಪಚುನಾವಣೆ | ಇದರ ಅರ್ಥ? | Oneindia Kannada

   ಶಿವಮೊಗ್ಗ, ಅಕ್ಟೋಬರ್ 9: ಶಿವಮೊಗ್ಗಕ್ಕೆ ಇದು ಎರಡನೇ ಲೋಕಸಭಾ ಉಪಚುನಾವಣೆ ಇದಾಗಿದೆ, ಇನ್ನೂ ಚುನಾವಣೆಯೇ ನಡೆದಿಲ್ಲ ಅದು ಹೇಗೆ ಎರಡನೆಯದ್ದಾಗುತ್ತೆ ಎಂದು ಯೋಚನೆ ಮಾಡ್ತಿದೀರಾ, ಹೌದು ಬಿಜೆಪಿಯಿಂದ ಆಯ್ಕೆಯಾಗಿದ್ದ ಎಸ್‌ ಬಂಗಾರಪ್ಪ ರಾಜೀನಾಮೆ ನೀಡಿದಾಗ ಮೊದಲ ಬಾರಿಗೆ ಲೋಕಸಭಾ ಉಪ ಚುನಾವಣೆ ನಡೆದಿತ್ತು.

   ಶಿವಮೊಗ್ಗ ಉಪ ಚುನಾವಣೆ : ಬಿ.ವೈ.ರಾಘವೇಂದ್ರ ಒಮ್ಮತದ ಅಭ್ಯರ್ಥಿಯೇ?

   ಬಿಜೆಪಿಯಿಂದ ಆಯ್ಕೆಯಾಗಿದ್ದ ಎಸ್ ಬಂಗಾರಪ್ಪ 2005ರಲ್ಲಿ ರಾಜಿನಾಮೆ ನೀಡಿದ್ದರು. 20 ವರ್ಷಗಳ ನಂತರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಉಪ ಚುನಾವಣೆ ಕಾಣುತ್ತಿದೆ. ಮೊದಲ ಉಪಚುನಾವಣೆಗೂ ಈಗಿರುವ ಚುನಾವಣೆಗೂ ಸಾಕಷ್ಟು ವ್ಯಾತ್ಯಾಸಗಳನ್ನು ನಾವು ಕಾಣಬಹುದಾಗಿದೆ.

   ಲೋಕಸಭೆ ಚುನಾವಣೆ : ಶಿವಮೊಗ್ಗ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಅಂತಿಮ?

   ರಾಜಕೀಯ ಪಕ್ಷದಲ್ಲಿರುವ ಪ್ರತಿಷ್ಠೆ ಕಡಿಮೆಯಾಗಿಲ್ಲ ಆದರೆ ಅಂದಿದ್ದ ರಾಜಕೀಯ ಜಿದ್ದಾಜಿದ್ದಿ ಈಗ ಸ್ವಲ್ಪ ಕಡಿಮೆಯಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಬೇಕೆಂದು ಬಿಜೆಪಿ ಅಂದುಕೊಂಡಿದ್ದರೆ ಇನ್ನೊಂದೆಡೆ ಕಾಂಗ್ರೆಸ್ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಧ್ವಜ ಹಾರಿಸುವ ಉತ್ಸಾಹದಲ್ಲಿದೆ.

   2005ರಲ್ಲಿ ಲೋಕಸಭೆಗೆ ಉಪ ಚುನಾವಣೆ ಯಾಕೆ ನಡೆದಿತ್ತು ಎನ್ನುವುದು ಎಲ್ಲರ ಕುತೂಹಲ, ವಾಜಪೇಯ ನೇತೃತ್ವದಲ್ಲಿ ಅವಧಿ ಪೂರೈಸಿದ ಎನ್‌ಡಿಎ ಸರ್ಕಾರ 2004ರ ಚುನಾವಣೆಗೆ ಸಜ್ಜಾಗಿತ್ತು. ಮತ್ತೊಂದು ಬಾರಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂಬ ವಾತಾವಣವೂ ಇತ್ತು ಆದರೆ ಕೇಂದ್ರದಲ್ಲಿ ಸಚಿವರಾಗಬೇಕೆಂಬ ಆಸೆ ಹೊಂದಿದ್ದ ಬಂಗಾರಪ್ಪ ಬಿಜೆಪಿ ಸೇರಿದ್ದರು. ಚುನಾವಣೆಯಲ್ಲೂ ಗೆದ್ದರು. ಎನ್‌ಡಿಎ ಮಾತ್ರ ಅಧಿಕಾರಕ್ಕೆ ಬರಲಿಲ್ಲ. ಕೆಲ ಅವಧಿಯಲ್ಲೇ ಬಿಜೆಪಿಯಿಂದ ಹೊರ ಬಂದು ಸಮಾಜವಾದಿ ಪಾರ್ಟಿಗೆ ಸೇರಿ ಗೆದ್ದರೂ ಆದರೂ ಕೇಂದ್ರ ಸಚಿವರಾಗುವ ಕನಸು ಈಡೇರಲಿಲ್ಲ.

   ಲೋಕಸಭೆ ಚುನಾವಣೆ 2019 : ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

   ಎಸ್ ಬಂಗಾರಪ್ಪ ಅರು ಏನು ತೀರ್ಮಾನ ಮಾಡುತ್ತಾರೆ ಎಂದು ಅವರ ಬೆಂಬಲಿಗರಿಗೇ ತಿಳಿಯುತ್ತಿರಲಿಲ್ಲ. ಅಚಾನಕ್ ಆಗಿ ಬಿಜೆಪಿ ಸೇರ್ಪಡೆಯಾದ ಬಂಗಾರಪ್ಪ 2004ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದರು. ಆದರೆ ಒಂದೇ ವರ್ಷದಲ್ಲಿ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದರು.

   English summary
   Shivamogga MP seat will be the prestigious ffight for both Yeddyurappa anf Bangarappa family. To show their hometown political strength this will be the best platform.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X