ನಂದಿತಾ ಸಾವಿನ ಗಲಭೆ, ಆರಗ ಜ್ಞಾನೇಂದ್ರ ವಿರುದ್ಧ ಚಾರ್ಜ್ ಶೀಟ್
ಶಿವಮೊಗ್ಗ, ಜೂ. 05 : ತೀರ್ಥಹಳ್ಳಿಯಲ್ಲಿ ನಂದಿತಾ ಸಾವಿನ ಪ್ರಕರಣದ ನಂತರ ನಡೆದ ಗಲಭೆಗೆ ಸಂಬಂಧಿಸಿದಂತೆ ಮಾಜಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ 47 ಜನರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 2014ರಲ್ಲಿ ನಂದಿತಾ ಸಾವನ್ನಪ್ಪಿದ್ದಳು, ನಂತರ ತೀರ್ಥಹಳ್ಳಿಯಲ್ಲಿ ಗಲಭೆ ನಡೆದಿತ್ತು.
ತೀರ್ಥಹಳ್ಳಿಯ ಸರ್ಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ನಂದಿತಾ, 2014ರ ಅಕ್ಟೋಬರ್ 29ರಂದು ಆನಂದ ಗಿರಿ ಬೆಟ್ಟದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. [ನಂದಿತಾ ಸಾವು, ಸಿಐಡಿ ಪೊಲೀಸರು ಹೇಳಿದ್ದಿಷ್ಟು]

ಆಕೆಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಕ್ಟೋಬರ್ 31ರಂದು ನಂದಿತಾ ಸಾವನ್ನಪ್ಪಿದ್ದಳು. ಮಣಿಪಾಲ ಆಸ್ಪತ್ರೆಯಿಂದ ಆಕೆಯ ಮೃತದೇಹವನ್ನು ತೀರ್ಥಹಳ್ಳಿಗೆ ತಂದ ನಂತರ ಪಟ್ಟಣದಲ್ಲಿ ಗಲಭೆ ನಡೆದಿತ್ತು. ಸುಮಾರು 15 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. [ನಂದಿತಾ ಪ್ರಕರಣದ ವಿವರ ಇಲ್ಲಿದೆ]
ಈ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾಜಿ ಶಾಸಕ ಮತ್ತು ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಸೇರಿದಂತೆ 47 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಶಾಂತಿ ಭಂಗ, ಸಾರ್ವಜನಿಕ ಆಸ್ತಿ ನಷ್ಟ, ಪೊಲೀಸ್ ವಾಹನ ಜಖಂ, 144 ಸೆಕ್ಷನ್ ಉಲ್ಲಂಘನೆ ಆರೋಪಗಳ ಅಡಿ ಚಾರ್ಚ್ ಶೀಟ್ ದಾಖಲು ಮಾಡಲಾಗಿದೆ.
ಸರ್ಕಾರ ನಂದಿತಾ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸಿತ್ತು. 7ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಬಳಿಕ ಎಂಟನೇ ತರಗತಿಗೆ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಲಾಗಿತ್ತು. ಈ ಬದಲಾವಣೆಯಿಂದ ಖಿನ್ನತೆಗೊಳದಾದ ಆಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದರು. ಆದರೆ, ನಂದಿತಾ ಸಾವಿನ ಅಂತಿಮ ವರದಿ ಇನ್ನೂ ಹೊರಬಂದಿಲ್ಲ.


Click it and Unblock the Notifications
